ನಾಳೆ ಬಳ್ಳಾರಿ ಸಚಿವ ಜಮೀರ್ ಅಹಮ್ಮದ್
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.11: ಜಿಲ್ಲೆಯ ನೂತನ‌ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಅವರು ನಾಳೆ ನಗರಕ್ಕೆ ಆಗಮಿಸಲಿದ್ದಾರೆ.
ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ. ಅವರ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ವಿಜಯನಗರದ ಉಸ್ತುವಾರಿಯೂ ಆಗಿರುವ ಜಮೀರ್ ಅವರಿಗೆ ಬಳ್ಳಾರಿ ಉಸ್ತುವಾರಿಯನ್ನೂ ವಹಿಸಿದ್ದು. ನಾಳೆ  ಉಸ್ತುವಾರಿಯಾದ ಮೇಲೆ ಮೊದಲ ಬಾರಿಗೆ ಬಳ್ಳಾರಿಗೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನೆ ಸಭೆಯನ್ನು ಜಿಲ್ಲಾ ಪಂಚಾಯ್ತಿಯಲ್ಲಿ ಬೆಳಿಗ್ಗೆ  ನಡೆಸಲಿದ್ದಾರೆ.
One attachment • Scanned by Gmail