ರಾಯಚೂರಿಗೆ ಏಮ್ಸ್ ನೀಡಲು ಆಗ್ರಹಿಸಿ ಜು.16ರಂದು ಹೋರಾಟ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.11: ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಯಚೂರಿಗೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡಬೇಕು ಎಂಬ ಬೇಡಿಕೆ ಜು.16 ರಂದು ಕಲ್ಯಾಣ ಕರ್ನಾಟಕದ ಎಲ್ಲಾ ಏಳು ಜಿಲ್ಲೆಗಳಲ್ಲಿ ಹೋರಾಟದ ಧ್ವನಿ ಎತ್ತಲಿದೆಂದು ಏಮ್ಸ್ ಹೋರಾಟ ಸಮಿತಿಯ ಮುಖಂಡ ರಾಯಚೂರಿನ
ಅಶೋಕ್ ಕುಮಾರ್ ಜೈನ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ 2020 ರಲ್ಲಿಯೇ ರಾಜ್ಯಕ್ಕೆ  ಏಮ್ಸ್ ನೀಡುವುದಾಗಿ ಹೇಳಿತ್ತು.
ಅಂದಾಜು 50 ಸಾವಿರ ಕೋಟಿ ರೂ ಅನುದಾನದ ಈ ಆಸ್ಪತ್ರೆ ಬಂದರೆ ಎಲ್ಲಾ ರೀತಿಯ ಸೌಲಭ್ಯದೊರೆಯಲಿದೆ. ಆಸ್ಪತ್ರೆ ಆರಂಭಿಸಲು ಅಗತ್ಯವಾದ ಜಮೀನು, ನೀರು ಸಂಪರ್ಕ ವ್ಯವಸ್ಥೆ ರಾಯಚೂರಿನಲ್ಲಿದೆ ಅದಕ್ಕಾಗಿ ಮಾಡಬೇಕು. ಇದು ಆಗಬೇಕೆಂದು ವಿರೋದ ಪಕ್ಷದ ನಾಯಕ ರಾಹುಲ್ ಸಹ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ  ಹೇಳಿದ್ದರು.
ಈ ಹಿಂದೆ ಐಐಟಿಯನ್ನು  ಅನಂತಕುಮಾರ್ ಬೆಂಗಳೂರಿಗೆ ತೆಗೆದುಕೊಂಡು ಹೋದರು.ಈಗ ಪ್ರಹ್ಲಾದ್ ಜೋಶಿ ಹು ಬ್ಬಳಿಗೆ  ಏಮ್ಸ್ ತೆಗೆದುಕೊಂಡು ಹೋಗುವ ಹುನ್ನಾರ ನಡೆಸಿದ್ದಾರೆ
ಅದಕ್ಕಾಗಿ ನಮ್ಮ‌ಹೋರಾಟ ಎಂದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ಏಮ್ಸ್ ಕೊಡಲಿದೆಂದು ಹೇಳಿತ್ತು.  ಅದರಂತೆ ರಾಯಚೂರಿಗೆ  ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಬೇಕು. ಆಗದಿದ್ದರೆ ದೆಹಲಿಗೆ ತೆರಳಿ ಜಂತರ್ ಮಂತರ್ ನಲ್ಲಿ ಹೋರಾಟ ಮಾಡಲಿದೆ. ಅಷ್ಟೇ ಅಲ್ಲದೆ ಪ್ರತ್ಯೇಕ ರಾಜ್ಯದ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನದ 371 ಜೆ ಸಮರ್ಪಕ ಅನುಷ್ಟಾನಕ್ಕೂ ಒತ್ತಾಯ ಮಾಡಲಿದೆ. ಗಣಿಗಾರಿಕೆಯ ಧೂಳಿನಿಂದ ಕ್ಯಾನ್ಸರ್ ರೋಗ ಉಲ್ಬಣಗೊಳ್ಳುತ್ತಿದೆ. ಅದಕ್ಕಾಗಿ ಕ್ಯಾನ್ಸರ್ ನ ಕಿದ್ವಾಯ್ ಆಸ್ಪತ್ರೆಯ ಶಾಖೆ, ಅಲ್ಲದೆ ಹೃದ್ರೋಗದ ಜಯದೇವ ಆಸ್ಪತ್ರೆಯ ಶಾಖೆಯನ್ನು ಬಳ್ಳಾರಿಯಲ್ಲಿ ಆರಂಭಿಸಲು, ಮೆಹಾ ಡೈರಿ ಸ್ಥಾಪನೆಗೆ ಹಣ ಮಂಜೂರು ಮಾಡಬೇಕು ಎಂಬ ಅಂಶವನ್ನು ಹೋರಾಟದಲ್ಲಿ ಸೇರಿದಸಲಿದೆಂದು ಹೋರಾಟ ಸಮಿತಿಯ ಮುಖಂಡ ಸಿರಿಗೇರಿ ಪನ್ನರಾಜ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ, ಟಿ.ಜಿ.ವಿಠ್ಠಲ್, ಕರೂರು ಮಾಧವ ರೆಡ್ಡಿ, ರಿಜ್ವಾನ್ ಖಾನ್ ಮೊದಲಾದವರು ಇದ್ದರು.