ಸತತ ಪ್ರಯತ್ನ ಮತ್ತು ಸಮಯ ಪರಿಪಾಲನೆಯ ಜೊತೆ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ:ಡಾ. ಸಿ.ಎನ್. ವೆಂಕಟೇಶ
ಸದರಿಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ವಿವಿಧ ಪ್ರತಿಷ್ಠಿತಎಮ್.ಇ.ಎಸ್, ಬೆಸ್, ಕೆ.ಎಲ್.ಇ ಸಂಸ್ಥೆಯ ಮಹವಿದ್ಯಾಲಯಗಳು, ಜೈನ್ ಮಹಾವಿದ್ಯಾಲಯಗಳಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದಡಾ. ಸಿ. ಎನ್. ವೆಂಕಟೇಶಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾವಿದ್ಯಾಲಯದಲ್ಲಿಓದುತ್ತಿರುವಪ್ರಥಮ ಮತ್ತು ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿರುವವಿಶೇಷ ಉಪನ್ಯಾಸವನ್ನು ನೀಡಿದರು.
ಡಾ. ಸಿ. ಎನ್. ವೆಂಕಟೇಶಅವರು ಮಾತನಾಡುತ್ತಾವಿದ್ಯಾರ್ಥಿಗಳ ಯಶಸ್ಸನ್ನು ಪ್ರಮಾಣಬದ್ಧವಾಗಿ ಹೇಳುವುದು ಸುಲಭವಲ್ಲ. ಯಶಸ್ಸುಎಂದರೆ ಪ್ರತಿಯೊಬ್ಬರಿಗೂಅವರದೇಆದ ಪರಿಕಲ್ಪನೆಇರುತ್ತದೆ. ಕೆಲವರಿಗೆವರ್ಗದಲ್ಲಿ ಹಿರೇಮಣಿಯಾಗುವುದುಯಶಸ್ಸುಇರಬಹುದು.ಇನ್ನು ಕೆಲವರಿಗೆ ಒಳ್ಳೆಯ ಕ್ರೀಡಾಪಟು ಎನಿಸಿಕೊಳ್ಳುವುದು ಆಗಿರಬಹುದು.ಇನ್ನು ಕೆಲವರಿಗೆ ಸಾಮಾನ್ಯರಾಗಿದ್ದು ಸಂತೋಷದಿಂದಿರುವುದುಆಗಿರಬಹುದು.ಯಶಸ್ಸನ್ನು ಸಾಧಿಸಲು ಮಾರ್ಗಗಳು ಸಾಮಾನ್ಯವಾಗಿಒಂದೇ ಬಗೆಯವು.ಇಲ್ಲಿ ನಾವು ಮಕ್ಕಳಿಗೆ ವಿದ್ಯಾರ್ಥಿಜೀವನದಲ್ಲಿ ಹೆಚ್ಚು ಕಲಿಯಲು ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳಲು ಅಲ್ಪಾವಧಿ ಹಾಗೂ ದೀರ್ಘಾವಧಿಯ ಗುರಿಗಳಿರಬೇಕು.ಗುರಿಗಳನ್ನು ನಿರ್ಧರಿಸುವುದುಒಂದು ಕಲೆ ಎಂದೇ ಹೇಳಬಹುದು.ಈ ಕಲೆಯುಒಮ್ಮೆಲೇ ಬರುವುದಿಲ್ಲ. ಆದರೆ ಸೂಕ್ತವಾದಗುರಿ ನಿರ್ಧರಿಸಬೇಕಾದರೆ ವಿದ್ಯಾರ್ಥಿಗಳು ತಮ್ಮ ಅಭಿರುಚಿಗಳು ಹಾಗೂ ಅವುಗಳನ್ನು ಪ್ರೇರೇಪಿಸುವ ಅಂಶಗಳು ತಿಳಿದುಕೊಳ್ಳಬೇಕು.
ಇದು ಮುಂದಿನ ಶಿಕ್ಷಣಕ್ಕಾಗಿ ಉತ್ತಮ ಮನಸ್ಥಿತಿ ಮತ್ತು ಕಾರ್ಯವೈಖರಿಗಳಿಗೆ ಭದ್ರ ಬುನಾದಿಯನ್ನು ಹಾಕಲು ಸಹಾಯವಾಗುತ್ತದೆ.ವಿದ್ಯಾರ್ಥಿಗಳು ತಮ್ಮಕಾರ್ಯವನ್ನು ಉತ್ತಮಗೊಳಿಸಲು ಸಮಯಪಾಲನೆಗೆ ಪ್ರಾಮುಖ್ಯತೆಕೊಡಬೇಕು.ಅಧ್ಯಯನದ ವೇಳಾಪಟ್ಟಿಯನ್ನು ಮಾಡಿಅದರಂತೆ ನಿಗದಿತಅವಧಿಯಲ್ಲಿ ಕೆಲಸಮಾಡಲು ಪ್ರಯತ್ನಿಸಬೇಕು.ಹಾಗೆಯೇಯಾವರೀತಿಯ ವೇಳಾಪಟ್ಟಿ ನಿಮಗೆ ಸರಿ ಹೊಂದುತ್ತದೆಯೋ ನಿರ್ಧರಿಸಿ ಅನೇಕ ಕಾರ್ಯಗಳನ್ನು ಒಟ್ಟೊಟ್ಟಿಗೆ ಮಾಡುವುದನ್ನುಕಲಿಯಬಹುದು.ಹೀಗೆ ಯೋಜನೆ ಮಾಡುವುದು, ಯಾವಯಾವ ಕೆಲಸಗಳನ್ನು ಮಾಡುವುದು, ವಿರಾಮದ ಸಮಯದಲ್ಲಿಯಾವ ಕೆಲಸಕ್ಕೆ ಪ್ರಾಮುಖ್ಯತೆ ನೀಡುವುದು ಮತ್ತು ಯೋಜನೆಗಳನ್ನು ಯಶಸ್ವಿಯಾಗಿ ಹೇಗೆ ಪೂರೈಸುವುದು ಎಂಬವುಗಳನ್ನು ಮೊದಲೇ ನಿರ್ಧರಿಸಿದಲ್ಲಿ ಕಲಿಯಲು ಸುಲಭವಾಗುತ್ತದೆ.ತುಂಬಾಕಠಿಣವಾದ ವಿಷಯಗಳು ಕಲಿಯುವಾಗಒತ್ತಡಉಂಟುಮಾಡುತ್ತವೆ. ಹಾಗೆಯೇತುಂಬಾ ಸರಳವಾದ ವಿಷಯಗಳು ಹೆಚ್ಚಿಗೆಆಸಕ್ತಿದಾಯಕಇರುವುದಿಲ್ಲ. ಆದ್ದರಿಂದ ಸಮತೋಲನವಾದಐಚ್ಛಿಕವಾದ ವಿಷಯಗಳನ್ನು ಆರಿಸಿಕೊಳ್ಳುವುದರಿಂದ ಕಲಿಕೆಯಲ್ಲಿ ಆಸಕ್ತಿ ಇರುತ್ತದೆ . ಹಾಗೆಯೇ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ವಿಷಯ ಪರಿಚಯವೂಆಗುತ್ತದೆ. ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ಪ್ರಯೋಗ ಮಾಡಬಹುದು. ಇದರಿಂದ ಹೊಸ ಅನುಭವ ಹಾಗೂ ಸವಾಲುಗಳನ್ನು ಎದುರಿಸಲುತಯಾರಾಗುತ್ತೀರಿ.ಬರೀಓದುವುದμÉ್ಟೀ ವಿದ್ಯಾರ್ಥಿಯಕರ್ತವ್ಯವಲ್ಲ. ತರಗತಿಯಿಂದ ಹೊರಗೆಅಂದರೆ ಕಲೆ, ಕ್ರೀಡೆ, ಸಮಾಜಸೇವೆ ಮುಂತಾದವುಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕು.ತರಗತಿಯಲ್ಲಿ ನಡೆಯುವ ಪ್ರತಿಯೊಂದು ವಿಷಯದ ವಿವರಣೆ, ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ವಿಷಯಗ್ರಹಿಕೆ ಹೆಚ್ಚುತ್ತದೆ.ಚರ್ಚೆಗಳಲ್ಲಿಯ ಹೊಸ ಮಾಹಿತಿಯಿಂದಜ್ಞಾನವು ವೃದ್ಧಿಸುತ್ತದೆ.ನಿರಂತರವಾಗಿತರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಕಲಿಕೆ ಹೆಚ್ಚುವುದರಜೊತೆಗೆಜ್ಞಾಪಕಶಕ್ತಿ ಹೆಚ್ಚುತ್ತದೆ.ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವುದರಜೊತೆಗೆ ಒಳ್ಳೆಯ ಜಾಣ ವಿದ್ಯಾರ್ಥಿನಿಆಗಬಯಸುವ ವಿದ್ಯಾರ್ಥಿಗಳು ತಮ್ಮ ವೈಯುಕ್ತಿಕ ಸಮಸ್ಯೆಗಳಿಂದಾಗಿ ತಮ್ಮನ್ನುತಾವುಕಡೆಗಣಿಸಬಾರದು.ಬಾಳಿನುದ್ದಕ್ಕೂ ಕಷ್ಟ ನಷ್ಟ, ಸುಖ ದುಃಖ, ಏಳುಬೀಳುಗಳು ಪ್ರಕೃತಿ ಸಹಜವಾಗಿರೂಪಿತಗೊಂಡಿವೆ. ಅವುಗಳನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ.ಬಾಳಿನುದ್ದಕ್ಕೂ ಎದುರಾದಕಷ್ಟ ನೋವು, ಚುಚ್ಚು ಮಾತುಗಳಿಗೆ ಎದೆಗುಂದದೆಧೈರ್ಯದಿಂದ ಅವುಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಿಧೈರ್ಯದಿಂದ ಮುನ್ನುಗ್ಗಿ.ಧೈರ್ಯಎಂಬುದುಎರಡೇಅಕ್ಷರವಾದರೂಅದರ ಮಹತ್ವ ಹೆಚ್ಚಿನದು. ಬದುಕಿನ ಕಷ್ಟಗಳಲ್ಲಿ ಸಿಲುಕಿ ಜೀವನವೇ ಮುಗಿಯಿತುಎನ್ನುವಾಗಧೈರ್ಯ ನಿಮ್ಮಜೀವನದ ಪಾಠಗಳು, ಸಾರ್ಥಕತೆ ಮತ್ತು ಸಾಧನೆಯ ಹಾದಿ ತೋರಿಸುತ್ತದೆ.ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಹಾಕುವ ಚಪ್ಪಲಿಯಿಂದ ಹಿಡಿದು, ತಿನ್ನುವಅಹಾರದವರೆಗೆ ಸ್ಪರ್ಧೆಆರಂಭವಾಗಿದೆ.’ಪ್ರಯತ್ನಂ ಸರ್ವ ಸಿದ್ಧಿ ಸಾಧನಂ’ ಎಂಬ ಮಾತನ್ನುನಮ್ಮೊಳಗೆ ಅಳವಡಿಸಿಕೊಂಡು, ಅನುಸರಿಸುವುದುಜೀವನದಲ್ಲಿ ಅನಿವಾರ್ಯವಾಗಿದೆ.ಯಾವಾಗಧೈರ್ಯ ಆವರಿಸಿಕೊಳ್ಳುತ್ತದೆಯೊ ಆಗ ಬದುಕಿನತಿರುವು , ಹವ್ಯಾಸಗಳು ಶ್ರೇಷ್ಠತೆಯ ಹಾದಿಯತ್ತ ಸಾಗುತ್ತವೆ. ಹೀಗಾಗಿ
ಕಾಲೇಜಿನ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ ಹಾಗೂ ಆಕರ್ಷಕವಾಗಿರುವ ವಿಷಯಗಳನ್ನು ತಿಳಿದುಕೊಳ್ಳಿ ಎಂದು ಹೇಳುತ್ತಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದವಿಜ್ಞಾನ ವಿಭಾಗದಪಿಯುಸಿ ವಿದ್ಯಾರ್ಥಿನಿಯರಿಗೆ ಸಿಇಟಿ, ಜೆಇಇ ಮತ್ತು ನೀಟ್‍ಪರೀಕ್ಷೆಗಳು ಯಾವ ಮಾದರಿಯಲ್ಲಿಇರುತ್ತೆ ಮತ್ತುಅದರಲ್ಲಿಯಾವರೀತಿಯಾಗಿಯಶಸ್ಸನ್ನು ಸಾಧಿಸಬಹುದುಎಂದುಪ್ರೇರೆಪಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ಮೋಹನರಾಜ ಪತ್ತಾರಅವರು ಮಾತನಾಡುತ್ತಡಾ.ಸಿ.ಎನ್. ವೆಂಕಟೇಶಅವರು ಹೇಳಿರುವ ಹಾಗೆ ಸತತ ಪ್ರಯತ್ನ ಮತ್ತು ಸಮಯ ಪರಿಪಾಲನೆಯಂದಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ಧೈರ್ಯದಿಂದಎದುರಿಸುತ್ತಾ ಮುಂದೆ ಸಾಗಿದರೆಯಶಸ್ಸುಖಂಡಿತಾ. ಕೆಲವೊಂದು ಬಾರಿಧೈರ್ಯದಲ್ಲಿದ್ದರೂ ಕೆಲವು ಸಮಯ ಸೋಲುಗಳು ನಮ್ಮನ್ನು ಬೆನ್ನಟ್ಟುತ್ತವೆ.ಆಗ ನಾವು ಸೋತೆವೆಂದು ಹಿಂಜರಿಯುವ ಬದಲು ಆ ಪ್ರತಿ ಸೋಲುಗಳಲ್ಲಿ ನಾನು ಏನನ್ನೋಹೊಸತಾಗಿಕಲಿತೆ ಎಂಬಧ್ಯೇಯದೊಂದಿಗೆಧೈರ್ಯದಿಂದ ಮುನ್ನುಗಿದಾಗಖಂಡಿತವಾಗಿಜೀವನದಲ್ಲಿಯಶಸ್ಸನ್ನು ಪಡೆಯಬಹುದಾಗಿದೆಎಂದು ಮಾತನಾಡಿದರು.
ವಿದ್ಯಾರ್ಥಿ ಸಂಘದ ಸಲಹೆಗಾರರಾದಡಾ. ಕಾಶೀಬಾಯಿಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರನ್ನು ಸ್ವಾಗತಿಸಿದರು.ಉಪನ್ಯಾಸಕರಾದÀ ಶ್ರೀ.ಬಸವರಾಜಗೋಣಿಎಲ್ಲರನ್ನು ವಂದಿಸಿದರು.
ಕಾರ್ಯಕ್ರಮದಲ್ಲಿಉಪನ್ಯಾಸಕರಾದÀಶ್ರೀ.ಬಸವರಾಜಗೋಣಿ, ಡಾ.ಕಾಶೀಬಾಯಿ, ಶ್ರೀಮತಿ ಜ್ಯೋತಿ ಪಾಟೀಲ, ಶ್ರೀಮತಿ ಅನೀತಾ ಪಾಟೀಲ, ಶ್ರೀಮತಿ ಮಾನಸ ಪಿ.ಕೆ, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತುವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಅಂತಿಮವಾಗಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರುಡಾ. ಸಿ. ಎನ್. ವೆಂಕಟೇಶಅವರ ಸ್ಪೂರ್ತಿದಾಯಕ ಮಾತುಗಳಿಂದ ಪ್ರೇರೆಪಿತರಾಗಿಅವರನ್ನು ಸನ್ಮಾನಿಸಿ ಗೌರವಿಸಿದರು.