13ರಂದು ಪತ್ರಿಕಾ ದಿನಾಚರಣೆ: ಪತ್ರಕರ್ತರ ಸಮಸ್ಯೆ ಮತ್ತು ಸವಾಲುಗಳು ಚಿಂತನ- ಮಂಥನ
ಕಲಬುರಗಿ:ಜು.11: ಜುಲೈ 13ರಂದು ಕರ್ನಾಟಕ ರಕ್ಷಣಾ ವೇದಿಕೆ (ಕಾವಲು ಪಡೆ) ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪಾಳಾ ಕಟ್ಟಿಮನಿ ಸಂಸ್ಥಾನದ ಗುರುಮೂರ್ತಿ ಶಿವಾಚಾರ್ಯರು ದಿವ್ಯಸಾನ್ನಿಧ್ಯ ವಹಿಸಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೀಲಕಂಠರಾವ್ ಮೂಲಗೆ, ದೇವಿಂದ್ರಪ್ಪ ಕಪನೂರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಬಿ.ಎಚ್. ನಿರಗುಡಿ, ವಿಜಯಕುಮಾರ್ ಕಟ್ಟಿಮನಿ, ಪವನಕುಮಾರ್ ವಳಕೇರಿ, ನಾಗರಾಜ ಗುಂಡಗುರ್ತಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಬೀದಿ ವ್ಯಾಪಾರಿ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಮಸ್ಯೆ ಮತ್ತು ಸವಾಲುಗಳ ಕುರಿತು ಶಿವರಂಜನ್ ಸತ್ಯಂಪೆಟೆ ಅವರು ಉಪನ್ಯಾಸ ನೀಡಲಿದ್ದಾರೆ. ಪತ್ರಕರ್ತರಾದ ರಾಜಕುಮಾರ ಉದನೂರ, ನಜೀರಮಿಯಾ ಹಟ್ಟಿ, ಸಂತೋಷ ನಾಡಗೇರಿ, ಚಂದ್ರಶೇಖರ್ ಕವಲಗಾ, ರಾಜು ದೇಶಮುಖ, ರಾಜಶೇಖರ್ ಮಠಪತಿ, ರಾಜು ಕೋಷ್ಠಿ, ಶರಣು ಬೆಣ್ಣೂರ, ಗಂಗಾಧರ ಹಿರೇಮಠ, ಶಿವಕುಮಾರ ಹಳ್ಳಿಖೇಡ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.