ವರ್ಗವಣೆ: ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಹನೂರು ಜು 11:- ತಾಲ್ಲೂಕಿನ ಸಂದನಪಾಳ್ಯ ಗ್ರಾಮದ ಸೇಂಟ್ ಆಂಟೋನಿಸ್ ಪ್ರಾಥಮಿಕ ಶಾಲೆಯಲ್ಲಿ 21 ವರ್ಷಗಳು ಶಿಕ್ಷಕರಾಗಿ ಕಾರ್ಯನಿರ್ವಹಿಸಿ ವರ್ಗಾವಣೆ ಹೊಂದಿರುವ ಶ್ರೀ ಜೇಮ್ಸ್ ರವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಫಾ ಲೆನಾರ್ಡ್ ಮಾತನಾಡಿ ಪ್ರೀತಿಯ ಶಿಕ್ಷಕರೇ,ನಿಮ್ಮ ವರ್ಗಾವಣೆಯ ಬಗ್ಗೆ ನಮಗೆ ತಿಳಿಯಲು ದುಃಖವಾಗಿದೆ. ನೀವು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾಡಿದ ಮಾರ್ಗದರ್ಶನ ಮತ್ತು ಶಿಕ್ಷಣವು ನಮಗೆ ಸದಾ ಸ್ಮರಣೀಯವಾಗಿರುತ್ತದೆ.
ನಿಮ್ಮ ಮುಂದಿನ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಹೊಂದುತ್ತೀರಿ ಎಂಬ ಆಶಯವನ್ನು ನಾವು ಹೊಂದಿದ್ದೇವೆ. ನಿಮ್ಮ ಸಮರ್ಥತೆಗೆ, ಪರಿಶ್ರಮಕ್ಕೆ ಮತ್ತು ಸಾಧನೆಗೆ ನಾವೆಲ್ಲರೂ ಹೆಮ್ಮೆಪಡುವವರಾಗಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕರಾದ ಫಾ ಲೆನಾರ್ಡ್ ಮುಖ್ಯ ಶಿಕ್ಷಕರಾದ ಲೂಯಿಸ್ ನೆಸನ್ ಸಹ ಶಿಕ್ಷಕರು ಭಾಗವಹಿಸಿದ್ದರು.