ವೀರಶೈವ ಮಹಾಸಭಾ ತಾಲೂಕು ಘಟಕದ ಬಾಲಚಂದ್ರ ಮುರ್ತಿ ಅವಿರೋಧ ಆಯ್ಯೆ: ಅಭಿನಂದನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 19- ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ತಾ.ಪಂ.ಮಾಜಿ ಸದಸ್ಯ ಬಾಲಚಂದ್ರ ಮೂರ್ತಿ ಅವರನ್ನು ಸ್ನೇಹಿತರು, ಹಿತೈಷಿಗಳು ಮುಖಂಡರು ಸನ್ಮಾನಿಸಿದರು.
ಮಹಾಸಭಾ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಯಲ್ಲಿ ಬಾಲಚಂದ್ರ ಮೂರ್ತಿ ಅವರು ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅಧಿಕೃತವಾಗಿ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಉಗನೇದಹುಂಡಿ ಗ್ರಾಮದ ತಾ.ಪಂ.ಮಾಜಿ ಸದಸ್ಯ ಬಾಲಚಂದ್ರಮೂರ್ತಿ ಅವರು ಎಣ್ಣೆಹೊಳೆ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷರು ಸಹ ಆಗಿದ್ದಾರೆ. ಬಾಲಚಂದ್ರಮೂರ್ತಿ ಅಧ್ಯಕ್ಷರಾಗುತ್ತಿದ್ದಂತೆ ಮುಖಂಡರಾದ ಬಿಸಲವಾಡಿ ಉಮೇಶ್, ಹೊನ್ನಹಳ್ಳಿ ಸಂಪತ್ತು, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಬೋಗಾಪುರ ನಾಗೇಂದ್ರ, ವಡ್ಡರಹಳ್ಳಿ ದೊರೆಸ್ವಾಮಿ, ಬಿಸಲವಾಡಿ ರವಿ, ಹಿರಿಬೇಗೂರು ಗುರುಸ್ವಾಮಿ, ತೊರವಳ್ಳಿಕುಮಾರ್, ಅಧ್ಯಕ್ಷ ಹೋಟೇಲ್ ಕುಮಾರ್, ಮಲ್ಲಿಕಾರ್ಜುನ್, ಮೊದಲಾಧವರು ಹಾರ ಹಾಕಿ ಅಭಿನಂದಿಸಿದರು.