ಮಹಿಳಾ ಸಬಲಿಕರಣಕ್ಕೆ ಹೆಚ್ಚು ಒತ್ತು
ಕೋಲಾರ,ಜು.೧೧- ಮಹಿಳಾ ಸಶಕ್ತತೆ ಮತ್ತು ಸಬಲೀಕರಣಕ್ಕೆ ಒತ್ತು ನೀಡುವುದರೊಂದಿಗೆ ಸ್ತ್ರೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ರೋಟರಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ದೇಶದಲ್ಲೇ ಮಾದರಿಯಾಗಿ ರೂಪಿಸುವುದಾಗಿ ರೋಟರಿ ಕೋಲಾರ ಲೇಕ್‌ಸೈಡ್ ಸ್ಥಾಪಕ ಅಧ್ಯಕ್ಷ ಎಂವಿಎನ್ ರಾವ್ ಹೇಳಿದರು.
ಮುಳಬಾಗಲು ತಾಲೂಕಿನ ದೊಡ್ಡಹೊನ್ನಶೆಟ್ಟಿಹಳ್ಳಿಯ ಗ್ರಾಮವಿಕಾಸ ಸಂಸ್ಥೆಯಲ್ಲಿ ನಡೆದ ರೋಟರಿ ಕೋಲಾರ ಲೇಕ್ ಸೈಡ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುವ ಮೂಲಕ ರೋಟರಿ ಕೋಲಾರ ಲೇಕ್ ಸೈಡ್‌ನಲ್ಲಿ ದಾಖಲೆ ನಿರ್ಮಾಣ ಮಾಡುವುದಾಗಿ ತಿಳಿಸಿದರು. ವಿ ಷೇರ್ ಹ್ಯಾಪಿನಸ್ ಸಂಸ್ಥೆ ಪದಾಧಿಕಾರಿಗಳು ರೋಟರಿ ಕೋಲಾರ ಲೇಕ್‌ಸೈಡ್ ಸೇರ್ಪಡೆ ಆಗುವ ಮೂಲಕ ಆನೆಬಲ ತಂದುಕೊಟ್ಟಿದ್ದು ಇದನ್ನು ಸಕಾರಾತ್ಮಕವಾಗಿ ಬಳಸಿ ರೋಟರಿ ಕೋಲಾರ ಲೇಕ್ ಸೈಡ್ ಉತ್ತಮವಾಗಿ ಸಂಸ್ಥೆಗಳೊಂದಿಗೆ ರೋಟರಿ ಕ್ಲಬ್‌ನ್ನು ಮುನ್ನಡೆಸುವುದಾಗಿ ಸ್ವಯಂ ಸೇವಾ ಪದಾಧಿಕಾರಿಗಳನ್ನು ರೋಟರಿ ಸದಸ್ಯರನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದು ರಾವ್ ನುಡಿದರು.
ರೋಟರಿ ಕೋಲಾರ ಲೇಕ್ ಸೈಡ್ ನೂತನ ಅಧ್ಯಕ್ಷೆ ಎಂ.ಎಸ್.ಗಿರಿಜಾ ಮಾತನಾಡಿ, ೨೫ ವರ್ಷದ ಗ್ರಾಮವಿಕಾಸ ಸಂಸ್ಥೆಯಲ್ಲಿನ ಕೆಲಸ ನನ್ನ ಈ ಮಟ್ಟಗೆ ಬರಲು ಕಾರಣವಾಗಿದೆ.ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಯೋಜನೆಗಳನ್ನು ಮಾಡುವ ಮೂಲಕ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಮುಂದಿನ ರೋಟರಿ ರಾಜ್ಯಪಾಲ ಬಿ.ಆರ್.ಶ್ರೀಧರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿನ ಬ್ಲಾಕ್ ಬೋರ್ಡ್‌ನಿಂದ ಬರುವ ಸೀಮೆಸುಣ್ಣದ ಧೂಳಿನಿಂದ ಮಕ್ಕಳು ಮತ್ತು ಶಿಕ್ಷಕರ ಆರೋಗ್ಯ ಹದಗೆಡುವ ಸಾಧ್ಯತೆ ಇರುವುದರಿಂದಾಗಿ ತಲಾ ೫೫೦೦ ರೂ. ವೆಚ್ಚದಲ್ಲಿ ಗ್ರೀನ್ ಬೋರ್ಡ್ ಅಳವಡಿಸುವ ಯೋಜನೆಯನ್ನು ಜಾರಿಗೆ ತರಲಾಗಿದ್ದು ಕೋಲಾರ ಜಿಲ್ಲೆಯ ಎಲ್ಲ ಶಾಲೆಗಳಿಗೆ ಕಾರ್ಯಕ್ರಮ ತಲುಪಿಸಲು ರೋಟರಿ ಸದಸ್ಯರು ಮುಂದಾಗಬೇಕೆಂದರು.
ಜಿಲ್ಲಾ ರೋಟರಿ ಕಾರ್ಯದರ್ಶಿ ಎಸ್.ವಿ.ಸುಧಾಕರ್ ಮಾತನಾಡಿ, ಶೀಘ್ರದಲ್ಲೇ ಜಿಲ್ಲೆಯಲ್ಲಿ ನಾಲೈದು ರೋಟರಿ ಕ್ಲಬ್‌ಗಳು ತಲೆ ಎತ್ತುತ್ತಿದ್ದು ಎಲ್ಲ ಕಡೆಯಿಂದಲೂ ಜನರಿಗೆ ಉತ್ತಮ ಸೇವೆ ಸಿಕ್ಕಲಿದೆ ಎಂದು ತಿಳಿಸಿದರು.
ರೊಟೇರಿಯನ್ ಸರಿತಾಕುಮಾರಿ, ತಿರುಮುರುಗನ್, ಅರಿವು ಶಿವಪ್ಪ, ನಿರ್ಗಮಿತ ಅಧ್ಯಕ್ಷ ರಾಮಕೃಷ್ಣಗೌಡ ಮಾತನಾಡಿದರು. ರೊಟೇರಿಯನ್ ಅನುಭವವನ್ನು ಬಳಸಿಕೊಂಡು ರೋಟರಿ ಕೋಲಾರ ಲೇಕ್ ಸೈಡ್‌ನ್ನು ನಡೆಸುತ್ತೇನೆ. ಸಮಾಜಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಜಾಗತಿಕ ತಾಪಮಾನವನ್ನು ಕನಿಷ್ಠಗೊಳಿಸುವುದು, ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಮತ್ತು ರೋಟರಿಗೆ ಸದಸ್ಯರ ಸಂಖ್ಯೆ ಹೆಚ್ಚಿಸುವುದು ನನ್ನ ಮುಂದಿನ ಗುರಿ ಎಂದು ತಿಳಿಸಿದರು.
ಗ್ರೀನ್ ವಾರಿಯರ್ಸ್ ತಂಡದ ಸದಸ್ಯರು, ರಾಮಚಂದ್ರಪ್ಪ, ನೂತನ ಕಾರ್ಯದರ್ಶಿ ಚೌಡಪ್ಪ, ಯೂತ್ ಸರ್ವಿಸ್ ಡೈರಕ್ಟರ್ ಹೂಹಳ್ಳಿ ನಾಗರಾಜ್ ಇದ್ದರು.