ವಿದ್ಯಾರ್ಥಿಗಳು ಕಡ್ಡಾಯ ಮತದಾನಕ್ಕೆ ಕರೆ
ಕೋಲಾರ,ಜು,೧೧-ಭಾರತದಲ್ಲಿ ಮಾತ್ರ ಅತ್ಯಂತ ಕಡಿಮೆ ಹಣದಲ್ಲಿ ಬಡವರಿಗೆ ಶಿಕ್ಷಣ ದೊರೆಯುತ್ತದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೩-೨೪ನೇ ಸಾಲಿನ ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್‌ಎಸ್‌ಎಸ್ ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್‌ಸಿಸಿ ಚಟುವಟಿಕೆ ಸಮಾರೋಪ ಸಮಾರಂಭ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ವಿದ್ಯಾವಂತರು ಸಾರ್ವತ್ರಿಕ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವುದಿಲ್ಲವೋ ಅಲ್ಲಿಯತನಕ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳು ರಾಜ್ಯ ಅಧಿಕಾರ ಮಾಡುತ್ತಾರೆಂದು ಕಿವಿಮಾತು ಹೇಳಿದರು.
ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರು ಪಾಠ ಮಾಡುವುದೇ ಅವರ ಕೆಲಸವಲ್ಲ, ವಿದ್ಯಾರ್ಥಿಗಳಿಗೆ ಬದುಕುವ ದಾರಿ ಹುಡುಕಿ ಕೊಡುವ ಕೆಲಸ ಮಾಡಬೇಕೆಂದು ಹೇಳಿದರು.
ಕಲಿತ ವಿದ್ಯೆ ತನಗೆ ಅಲ್ಲದೆ ತನ್ನ ಸುತ್ತಮುತ್ತಲಿನ ಮಂದಿಗೆ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ವಿದ್ಯಾಥಿಗಳಿಗೆ ಮಾರ್ಗದರ್ಶನ ಆಗುವಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಕರೆನೀಡಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಶ್ರೀನಿವಾಸಗೌಡ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎಲ್ಲ ಮಕ್ಕಳು ಬಡ ಮಧ್ಯಮದ ವರ್ಗದಿಂದ ಬಂದಿರುವ ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ಒಳ್ಳೆ ಕೀರ್ತಿ ತರಬೇಕಲ್ಲದೆ ನಿಮ್ಮ ಭವಿಷ್ಯತ್ತಿನ ಬಗ್ಗೆ ಸದಾ ಕಾಳಜಿವಹಿಸಿ ಸಮಾಜದಲ್ಲಿ ಪೈಪೋಟಿ ಹೆಚ್ಚು ಹೆಚ್ಚಾಗಿ ಇರುವುದರಿಂದ ಅದನ್ನು ಹೇಗೆ ಎದುರಿಸಬೇಕು, ಉನ್ನತ ಸ್ಥಾನಕ್ಕೆ ಏರಬೇಕೆಂದು ಕರೆನೀಡಿದರು.
ಉಪನ್ಯಾಸಕರಾದ ಕೆ.ವಿ.ಸತೀಶ್, ಡಾ.ಮುರುಳಿಧರ್, ಎಸ್.ತ್ಯಾಗರಾಜ್, ಮುಖಂಡ ಮುರಳಿ, ಕಾಲೇಜಿನ ಮ್ಯಾನೇಜರ್ ಮಂಜುನಾಥ, ಉಪನ್ಯಾಸಕರಾದ ಪ್ರಸನ್ನ ಕುಮಾರಿ, ಮಹೇಶ್, ಡಾ.ವಿಜಯ್, ಮುನಿರಾಜು, ರತ್ನಪ್ರಭಾ ಇದ್ದರು.
ನಾದಪ್ರಿಯ ಪ್ರಾರ್ಥಿಸಿ, ಡಾ.ರಾಮಕೃಷ್ಣ ನಿರೂಪಿಸಿ, ಡಾ.ಶಂಕರಪ್ಪ ಸ್ವಾಗತಿಸಿ, ಡಾ.ಅನಂತಮೂರ್ತಿ ವಂದಿಸಿದರು.