ಪರಿಸರ ಉಳಿದರೆ ಬದುಕಲು ಸಾಧ್ಯ
ಭಾಲ್ಕಿ:ಜು.11: ಪರಿಸರ ಎನ್ನವುದು ನಮಗೆ ಜೀವನವಿದ್ದಂತೆ, ಸುಂದರವಾದ ಪರಿಸರವನ್ನು ನಾವು ನಿರ್ಮಾಣ ಮಾಡಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಹೇಳಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಬುಧುವಾರ ಆಯೋಜಿಸಿದ್ದ ವನಮಹೋತ್ಸವ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರದಿಂದ ನಮಗೆ ಉತ್ತಮವಾದ ಅಮ್ಲಜನಕ ದೊರೆಯುತ್ತದೆ. ಪರಿಸರ ಉಳಿದರೆ ಮಾತ್ರ ನಾವೂ ಬದುಕುಲ ಸಾಧ್ಯ. ಆದ್ದರಿಂದ ಉತ್ತಮವಾದ ಪರಿಸರದ ವಾತಾವರಣ ನಿರ್ಮಾಣ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ವ್ಯವಸ್ಥಾಪಕ ವಿನೋದ ರೆಡ್ಡಿ, ವಸತಿ ನೋಡಲ ಅಧಿಕಾರಿ ಶಿವರಾಜ ಮೂಲಗೆ, ಯುವರಾಜ, ನದಾಫ್,ಚೇತನ ಓಣಿ, ಅಮರ ಲಕಶೆಟ್ಟೆ, ಸುನೀಲ ಮಲಗೆ, ಹೇಮಲತಾ, ಪ್ರಭು ಮೇತ್ರೆ, ಬಸವರಾಜ, ನಾಮದೇವ ಸೇರಿದಂತೆ ಹಲವರು ಇದ್ದರು.