ರಾಷ್ಟ್ರೀಯ ಮಾಧ್ಯಮ ಸಮ್ಮೇಳನಕ್ಕೆ ಚಾಲನೆ
ಬೀದರ್,ಸೆ.27-ರಾಜಸ್ಥಾನ ರಾಜ್ಯದ ಶಿರೊಯಿ ಜಿಲ್ಲೆಯ ಅರಾವಳಿ ಪರ್ವತದಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರವಾದ ಮೌಂಟ್ ಅಬುದಲ್ಲಿರುವ ಆನಂದ ಸರೋವರದಲ್ಲಿ ಇಂದಿನಿಂದ (ಸೆ.26) ಆರಂಭವಾದ ರಾಷ್ಡ್ರೀಯ ಮಾಧ್ಯಮ ಸಮ್ಮೇಳನವನ್ನು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಚಾರ ಸಚಿವಾಲಯದ ರಾಜ್ಯ ಸಚಿವ ಡಾ.ಎಲ್ ಮುರುಗನ್ ಅವರು ದೀಪ ಬೆಳಗಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಮೌಂಟ್ ಅಬು ಪ್ರಧಾನ ಕೇಂದ್ರದ ಅಡಳಿತ ಮುಖ್ಯಸ್ಥೆ ಬಿ.ಕೆ. ಡಾ.ದಾದಿ ರತನ್ ಮೋಹಿನಿ ದಿವ್ಯ ಸಾನಿಧ್ಯ ವಹಿಸಿದ್ದರು. ಛತ್ತಿಸ್ ಘಡ್ ರಾಯಪುರ ಕೆ.ಟಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಾನಸಿಂಗ್ ಪರ್ಮರ್, ಮೌಂಟ್ ಅಬು ಬ್ರಹ್ಮಾಕುಮಾರಿ ಪ್ರಧಾನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬ್ರಿಜ್ ಮೋಹನ್, ದೆಹಲಿಯ ಪಿ.ಐ.ವಿ ಪ್ರಧಾನ ನಿರ್ದೇಶಕ ಕುಲದೀಪಸಿಂಗ್ ಧಾಟವಾಲಿಯಾ, ಮಾಧ್ಯಮ ವಿಭಾಗದ ಉಪಾಧ್ಯಕ್ಷೆ ಬಿ.ಕೆ ಶೈಲು, ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕಿ ರಾಜಯೋಗಿನಿ ಬಿ.ಕೆ ಸರಳಾ ಹಾಗೂ ಇತರರು ವೇದಿಕೆಯಲ್ಲಿದ್ದರು.
ಮಾಧ್ಯಮ ವಿಭಾಗದ ಅಧ್ಯಕ್ಷರಾದ ಬಿ.ಕೆ ಕರುಣಾಭಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಾಂತನು ಭಾಯಿ ಸ್ವಾಗತಿಸಿದರು. ಮಾಧ್ಯಮ ವಿಭಾಗದ ಜಯಪುರ ವಲಯ ಸಂಯೋಜಕಿ ಬಿ.ಕೆ ಚಂದ್ರಕಲಾ ಕಾರ್ಯಕ್ರಮ ನಿರುಪಿಸಿದರು. ಭಾರತದ ಮೂಲೆ, ಮೂಲೆಗಳಿಂದ ಹಾಗೂ ನೇಪಾಳದಿಂದ ಸುಮಾರು ಸಾವಿರಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.