ಭೀಮಾ ನದಿಯಲ್ಲಿ ಮುಳುಗಿ ಸಹೋದರರ ಸಾವು
ಕಲಬುರಗಿ,ಸೆ.27-ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ದರ್ಶನಕ್ಕೆಂದು ಆಗಮಿಸಿದ ಮಹಾರಾಷ್ಟ್ರ ಮೂಲದ ಇಬ್ಬರು ಸ್ನಾನ ಮಾಡಲು ಹೀಗಿ ಭೀಮಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಮಹಾರಾಷ್ಟ್ರದ ಉದಗಿರ ನಿವಾಸಿ ಬಾಲಾಜಿ ತಂದೆ ವೈಜನಾಥ ಡೊಯಿಜೋಡೆ (49) ಮತ್ತು ಮಹೇಶ ತಂದೆ ವೈಜನಾಥ ಡೊಯಿಜೋಡೆ (47) ಮೃತ ದುರ್ದೈವಿಗಳು. ಮೃತರಿಬ್ಬರು ಅಣ್ಣ-ತಮ್ಮ ಎಂದು ತಿಳಿದುಬಂದಿದೆ.
ದೇವಸ್ಥಾನದ ದರ್ಶನಕ್ಕೆಂದು ಆಗಮಿಸಿದ ಐವರು ಪಾಪಾನಾಶಿ ಭೀಮಾ ನದಿಯಲ್ಲಿ ಸ್ನಾನ ಮಾಡುತಿದ್ದಾಗ ಮೊಹನ ತಂದೆ ಯಶವಂತ ಪಾಟೀಲ ನದಿಯಲ್ಲಿ ಮುಳುಗುತ್ತಿರುವುದನ್ನು ಗಮನಸಿ ರಕ್ಷಿಸಲು ಮುಂದಾಗಿರುವ ವೇಳೆ ಇಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ವೇಳೆ ಸ್ಥಳೀಯರು ಮೊಹನನ್ನು ರಕ್ಷಿಸಿದ್ದಾರೆ. ಈ ಕುರಿತು ದೇವಲಗಾಣಗಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.