ಸೇಂಟ್‍ಮೇರಿ ವಿದ್ಯಾರ್ಥಿಗಳಿಂದ ಸ್ಮಾರಕಗಳ ಛಾಯಾಚಿತ್ರವೀಕ್ಷಣೆ
ಕಲಬುರಗಿ,ಸೆ 2: ನಗರದ ಸೇಂಟ್ ಮೇರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ಯ ಹವ್ಯಾಸಿ ಪ್ರವಾಸಿ ಮಾರ್ಗದರ್ಶಿ ಸಮಿತಿ ಸಹಯೋಗದಲ್ಲಿ ಕಲಬುರಗಿ ಜಿಲ್ಲೆಯ ಐತಿಹಾಸಿಕ ಸ್ಮಾರಕ ಕುರಿತು ಸಂಪನ್ಮೂಲ ವ್ಯಕ್ತಿ ಬಿ ಎಂ ರಾವೂರ ಉಪನ್ಯಾಸ ನೀಡಿದರು.ನಾರಾಯಣ ಎಂ ಜೋಶಿ ಅವರ ಏಕವ್ಯಕ್ತಿ ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಸೇಂಟ್ ಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ.ಪ್ರವೀಣ್ ಜೋಸೆಫ್, ಉಪನ್ಯಾಸಕಿ ಸೌಮ್ಯ ಜೋಶಿ ಮತ್ತು ಸಿಬ್ಬಂದಿ, ಹಿರಿಯ ಛಾಯಾಗ್ರಾಹಕ ಮಧುಸೂದನ್ ಕುಲಕರ್ಣಿ ಉಪಸ್ಥಿತರಿದ್ದರು.