ರವಿಕುಮಾರ ಹೇಳಿಕೆಗೆ ಜಗದೇವ ಗುತ್ತೇದಾರ ಖಂಡನೆ
ಕಲಬುರಗಿ,ಅ.5-ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಅವರು ಪ್ರಚಾರಕ್ಕಾಗಿ ಮುಖ್ಕಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ ತಿಳಸಿದ್ದಾರೆ.
ಮುಖ್ಯಮಂತ್ರಿಯವರಿಗೆ ಆತ್ಮಸಾಕ್ಷಿ ಇದೆಯಾ ಎಂದು ಪ್ರಶ್ನೆ ಕೇಳುವ ಅವರು ಬಿಜೆಪಿಯಲ್ಲಿ ಕೇಂದ್ರ ಸಚಿವರು, ಶಾಸಕರು, ಬಿಜೆಪಿ ಹಾಗೂ ಮೈತ್ರಿ ಪಕ್ಷದ ಕೆಲವು ಮುಖಂಡರ ಮೇಲೆ ಈಗಾಗಲೇ ಎಫ್‍ಐಆರ್ ದಾಖಲಾಗಿದ್ದರೂ ಕೂಡಾ ಅವರೆಲ್ಲಾ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆಯೇ ಅರಿತುಕೊಳ್ಳಲಿ. ತಮ್ಮ ಮನೆಯಲ್ಲಿಯೇ ಕಸ ತುಂಬಿರುವದನ್ನು ನೋಡಿಕೊಂಡು ಬೇರೆಯವರ ಮನೆ ಕಡೆ ಬೊಟ್ಟು ಮಾಡಿ ತೋರುಸುವ ಮೊದಲು ತಮ್ಮ ಮನೆ ಸ್ವಚ್ಛತೆ ಮಾಡಿಕೊಳ್ಳಲಿ. ಅದೇ ರೀತಿ ಕಾಂಗ್ರೆಸ್ ಹಲ್ಲು ಇಲ್ಲದ ಹೈಕಮಾಂಡ್ ಎನ್ನುವ ರವಿಕುಮಾರ ಅವರಿಗೆ ತಮ್ಮ ಪಕ್ಷದಲ್ಲಿ ದಿನಾಲೂ ಏನೂ ನಡೆಯುತ್ತಿದೆ ಎಂಬುದು ಕಾಣುತ್ತಿಲ್ಲವೆ ? ಅವರು ನಿದ್ರಾವಸ್ಥೆಯಲ್ಲಿದ್ದರೆ ಮೊದಲು ನಿದ್ರೆಯಿಂದ ಎಚ್ಚೆತ್ತು ತಮ್ಮ ಪಕ್ಷದಲ್ಲಿ ಏನೂ ನಡೆಯುತ್ತಿದೆ ಎಂಬುದು ತಿಳಿದುಕೊಳ್ಳಲಿ. ಕಾಂಗ್ರೆಸ್ ಪಕ್ಷದ ಬಗ್ಗೆ ಟೀಕೆ ಮಾಡುವದು ಬಿಟ್ಟು ಬಿಜೆಪಿ ಹೈಕಮಾಂಡಿಗೆ ಹಲ್ಲು ಇದೇಯಾ ಇಲ್ಲಾ ಎಂದು ಬಿಜೆಪಿ ನಾಯಕರಿಗೆ ಕೇಳಲಿ. ಅದೆಲ್ಲಾ ಬಿಟ್ಟು ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡುವದು ಸರಿಯಲ್ಲ. ಶಾಸಕರು ಹಾಗೂ ಕೇಂದ್ರ ಮಾಜಿ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೆಲವು ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಬಿಜೆಪಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ವರಿಷ್ಠ ನಾಯಕರ ವಿರುದ್ಧ ಹೇಳಿಕೆ ನೀಡಿದರೂ ಕೂಡಾ ಯಾವುದೇ ಕ್ರಮ ಕೈಕೊಳ್ಳದ ಬಿಜೆಪಿ ಹೈಕಮಾಂಡಿಗೆ ಹಲ್ಲು ಇದೆಯಾ ಇಲ್ಲಾ ಎಂಬುದನ್ನು ಮೊದಲು ಎನ್. ರವಿಕುಮಾರ ತಿಳಿದುಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಬಗ್ಗೆ ಮಾತನಾಡಲಿ. ಇನ್ನು ಮುಂದೆ ಕಾಂಗ್ರೆಸ್ ಹೈಕಮಾಂಡ್ ಬಗ್ಗೆ ಮಾತನಾಡುವಾಗ ಸರಿಯಾಗಿ ತಿಳಿದುಕೊಂಡು ಹೇಳಿಕೆ ನೀಡಬೇಕು ಹೊರತು ಪ್ರಚಾರಕ್ಕಾಗಿ ಮಾತನಾಡುವದು ಸರಿಯಲ್ಲ ಎಂದು ತಿಳಿಸಿದ್ದಾರೆ.