ಒಂದು ದೇಶ- ಒಂದು ಚುನಾವಣೆ ವಿರೋಧಿಸಿ ಬೆಂಗಳೂರಿನಲ್ಲಿ ಸಮಾವೇಶ: ಕಲಬುರಗಿಯಿಂದ ನೂರಾರು ಕಾರ್ಯಕರ್ತರು ಭಾಗಿ
ಕಲಬುರಗಿ:ಅ.05: ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜು ಪಕ್ಕದಲ್ಲಿರುವ ಕೊಂಡಜ್ಜಿ ಬಸಪ್ಪ ಮೆಮೋರಿಯಲ್ ಹಾಲ್‍ನಲ್ಲಿ ಅಕ್ಟೋಬರ್ 9ರಂದು ಬುಧವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಹಮ್ಮಿಕೊಂಡಿರುವ ಒಂದು ದೇಶ- ಒಂದು ಚುನಾವಣೆ ನಿರಂಕುಶ ಪ್ರಜಆಪ್ರಭುತ್ವದತ್ತ ಭಾರತ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಜಿಲ್ಲೆಯಿಂದ ನೂರಾರು ಜನ ಕಾರ್ಯಕರ್ತರು ಭಾಗವಹಿಸುವರು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಎಂದರೆ ಹಲವು ಧರ್ಮಗಳ, ಸಾವಿರಾರು ಜಾತಿ ಹಾಗೂ ಭಾಷೆಗಳ, ಹಲವು ಜನಪದಗಳ, ಹಲವು ಜನಸಂಸ್ಕøತಿಗಳನ್ನುರ್ಳಳ ವಿವಿಧತೆಯಲ್ಲಿ ಎಕತೆ ಹೊಂದಿರುವ ದೇಶ. ಬ್ರಿಟಿಷರು ಸಈ ದೇಶ ಬಿಟ್ಟು ಹೋದ ಮೇಲೂ ಇಲ್ಲಿ ಹಲವು ಪ್ರಜಾಪ್ರಭುತ್ವಗಳು ಆಳ್ವಿಕೆ ನಡೆಸುತ್ತಿದ್ದವು. ಎಲ್ಲವನ್ನೂ ಒಟ್ಟುಗೂಡಿಸಿ ಭಾಷಾವಾರು, ಪ್ರಾಂತ್ಯಾವಾರು ರಾಜ್ಯಗಳನ್ನು ರಚಿಸಿ ಒಂದು ಒಕ್ಕೂಟ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಯಿತು. ತದನಂತರ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೂ ಹುಟ್ಟಿಕೊಂಡವು. ಇದರಿಂದಾಗಿ ವಿವಿಧ ಭಾಷೆ ಮತ್ತು ಸಂಸ್ಕøತಿಗೆ ತಕ್ಕಮಟ್ಟಿನ ಪ್ರಾಮುಖ್ಯತೆಯೂ ದೊರಕಿತು ಎಂದರು.
ಬಿಜೆಪಿ ನೇತೃತ್ವದಲ್ಲಿನ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏಕತ್ವದ ಹುಚ್ಚು ವಿಪರೀತ ಎಂಬಷ್ಟು ಕೆರಳಿದೆ. ಒಂದು ದೇಶ, ಒಂದು ಸಂಸ್ಕøತಿ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ, ಈಗ ಒಂದು ಚುನಾವಣೆ. ಈ ಒಂದು ಎಂಬುದು ಇಂದು ಏಕತೆಯ ಸೂಚಕವಲ್ಲ. ಸರ್ವಾಧಿಕಾರದ ಅಭಿವ್ಯಕ್ತವಾಗಿದೆ. ಹಿಂದುತ್ವದ ಹೆಸರಿನಲ್ಲಿ ಅವರು ತರಬಯಸುವ ಮನುಧರ್ಮ ಶಾಸ್ತ್ರ ಸೂಚಕವಾಗಿದೆ. ಮೋದಿ ಮತ್ತು ಬಿಜೆಪಿ ಪಕ್ಷಗಳ ಸರ್ವಾಧಿಕಾರಿ ನಡೆಗಳಿಗೆ ಈ ಚುನಾವಣೆಗಳು ಸವಾಲಾಗಿದೆ. ಅವರ ನಡೆಗಳಿಗೆ ವಿವಿಧ ಜನ ಸಮುದಾಯಗಳಿಂದ ಪ್ರತಿರೋಧ ಹೆಚ್ಚಾಗುತ್ತಿದ. ಒಂದು ಚುನಾವಣೆಯಾದರೆ ಆ ಅವಧಿಯಲ್ಲಿ ಒಂದಷ್ಟು ಜನಪ್ರೀಯ ನಾಟಕ ಮಾಡಿ, ದೇವರು, ಧರ್ಮ, ದೇಶದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರ ಹಿಡಿದರೆ ಮುಂದಿನ ಐದು ವರ್ಷಗಳವರೆಗೆ ಸರ್ವಾಧಿಕಾರಿಗಳಂತೆ ಆಡಳಿತ ನಡೆಸಬಹುದು. ಇದು ಮೋದಿ ಮತ್ತು ಬಿಜೆಪಿ ಪಕ್ಷದ ಹುನ್ನಾರ ಎಂದು ಅವರು ಟೀಕಿಸಿದರು.
ವಾಸ್ತವವಾಗಿ ಬೇರೆ, ಬೇರೆ ರಾಜ್ಯಗಳಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳ ವಿವಿಧ ಜನಪ್ರೀಯ ನಾಯಕರಿದ್ದಾರೆ. ಆದಾಗ್ಯೂ, ಬಿಜೆಪಿಗೆ ಮೋದಿ ಮಾತ್ರ ಇರುವುದರಿಂದ ಎಲ್ಲ ಚುನಾವಣೆಗಳಿಗೂ ಮೋದಿಯವರಿಗೆ ಒಯ್ಯುವುದು ಅವರಿಗೆ ತಲೆ ಬಿಸಿಯಾಗಿದೆ. ಸ್ಥಳೀಯ ಸಂಸ್ಥೆಗಳಿಗೂ, ವಿಧಾನಸಭೆ ಹಾಗೂ ಲೋಕಸಭೆಗೂ ಒಮ್ಮೆಗೆ ಚುನಾವಣೆ ನಡೆದರೆ ತಮಗಿರುವ ಅಖಿಲ ಭಾರತ ಪಕ್ಷದ, ಪರಿವಾರದ, ಕಾರ್ಪೋರೇಟ್ ಕುಳಗಳ ಹಾಗೂ ಮಾಧ್ಯಮದ ಬಲ ಬಳಸಿಕೊಂಡು ಪ್ರಚಾರದಲ್ಲಿ ಮೇಲುಗೈ ಸಾಧಿಸಬಹುದು ಎಂಬುದು ಬಿಜೆಪಿ ಮತ್ತು ಮೋದಿ ಲೆಕ್ಕಾಚಾರವಾಗಿದೆ. ಇದು ಪ್ರಾದೇಶಿಕ ಪಕ್ಷಗಳನ್ನು ಮೂಲೆಗುಂಪು ಮಾಡುತ್ತದೆ ಎಂದು ಅವರು ದೂರಿದರು.
ರಾಜ್ಯಗಳ ವಿಧಾನಸಭಾ ಚುನಾಔಣೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ವಿಚಾರ ಮತ್ತು ಸಮಸ್ಯೆಗಳನ್ನು ಗೌಣಗೊಳಿಸುತ್ತದೆ. ಒಂದು ದೇಸ, ಒಂದು ಚುನಾವಣೆ ಜಾರಿಯಾದರೆ ಐದು ವರ್ಷಗಳಿಗೊಮ್ಮೆ ಮಾತ್ರ ಚುನಾವಣೆ ನಡೆಯುವುದರಿಂದ ಮರು ಚುನಾವಣೆಗಳಿಗೆ ಆಸ್ಪದ ಇರುವುದಿಲ್ಲ. ಯಾವುದೇ ಪಕ್ಷ ಸ್ಥಾನದ ಬಲ ಕಳೆದುಕೊಂಡಾಗ ಅಥವಾ ಪಕ್ಷಗಳ ನಡುವಿನ ಪೈಪೋಟಿಯಿಂದಾಗಿ ಸ್ಥಿರ ಸರ್ಕಾರ ನೀಡಲು ವಿಫಲವಾದಾಗ ಮತ್ತೆ ಜನಾದೇಶ ಕೇಳಲು ಹೋಗುವುದು ಪ್ರಜಾತಂತ್ರದ ಅತಿ ದೊಡ್ಡ ಶಕ್ತಿಯಾಗುತ್ತದೆ. ಹಾಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಆಧಾರ ಸ್ಥಂಭ ಇದ್ದಂತೆ ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.
ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಜಸ್ಟೀಸ್ ನಾಗಮೋಹನದಾಸ್ ಅವರು ನೆರವೇರಿಸುವರು. ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಅವರು ವಹಿಸುವರು. ಖ್ಯಾತ ಅಂಕಣಕಾರ ಎ. ನಾರಾಯಣ್ ಅವರು ವಿಷಯ ಮಂಡಿಸುವರು. ಮುಖ್ಯ ಅತಿಥಿಗಳಾಗಿ ಮರಿಯಪ್ಪ ಹಳ್ಳಿ, ಇಂಧೂದರ್ ಜೊನ್ನಾಪುರ, ಎನ್. ವೆಂಕಟೇಶ್ ಅವರು ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮರೆಪ್ಪ ಮೇತ್ರಿ, ಶಿವಶರಣಪ್ಪ ಕುರನಳ್ಳಿ, ಸಂತೋಷ್ ತೆಗನೂರ್, ಮಲ್ಲಿಕಾರ್ಜುನ್ ಹಳ್ಳಿ, ಮಲ್ಲಿಕಾರ್ಜುನಗೌಡ, ಜಯಕುಮಾರ್ ನೂಲಕರ್ ಮುಂತಾದವರು ಉಪಸ್ಥಿತರಿದ್ದರು.