ಆರ್.ಜೆ. ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಕಲಬುರಗಿ,ಅ.5-ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಸುಪ್ರಿಯಾ ಮತ್ತು ಹಿತಶ್ರೀ ಕರಾಟೆಯಲ್ಲಿ ಪ್ರಥಮ ಸ್ಥಾನ, ಪೂರ್ಣೇಶ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಹಾಗೂ ಅಲೋಕ, ಅಶ್ವತ್ ಹ್ಯಾಂಡ್‍ಬಾಲ್‍ನಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಪ್ರಾಧಿಕಾರ ಹಾಗೂ ಸತ್ಯಂ ಪಿ.ಯು ಕಾಲೇಜು ವತಿಯಿಂದ ನಡೆಸಿದ ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಆರ್.ಜೆ ಕಾಲೇಜಿನ ವಿದ್ಯಾರ್ಥಿ ಧೂಳಪ್ಪಾ ಪೂಜಾರಿ ಪ್ರಥಮ ಸ್ಥಾನ ಗಳಿಸಿದ್ದಾನೆ ಹಾಗೂ ವೇದಾಂತ ಬಡದಾಳೆ ಸಮಾದಾನಕರ ಬಹುಮಾನ ಪಡೆದಿದ್ದಾನೆ.
ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಸದಸ್ಯರೂ ಆದ ಪ್ರಾಂಶುಪಾಲ ಡಾ. ಭುರ್ಲಿ ಪ್ರಹ್ಲಾದ, ಉಪ ಪ್ರಾಂಶುಪಾಲ ಕೇದಾರ ದೀಕ್ಷಿತ್, ಸಾಂಸ್ಕøತಿಕ ವಿಭಾಗದ ಮುಖ್ಯಸ್ಥÀ ಮಳೇಂದ್ರ ಹಿರೇಮಠ ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮ ಅಧಿಕಾರಿ ಪ್ರಕಾಶ ಚವ್ಹಾಣ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂಧಿ ಬಳಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.