ಧಾರ್ಮಿಕ ಭಾವನೆಗೆ ಧಕ್ಕೆ: ಯತಿ ನರಸಿಂಹಾನಂದ ಸರಸ್ವತಿ ವಿರುದ್ಧ ಮೂರು ಕಡೆ ಪ್ರಕರಣ ದಾಖಲು
ಕಲಬುರಗಿ,ಅ.5-ಗಾಜಿಯಾಬಾದ ಲೋಹಿಯಾ ನಗರದ ಹಿಂದಿ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಯತಿ ನರಸಿಂಹಾನಂದ ಸರಸ್ವತಿ ಅವರು ಮುಸ್ಲಿಂ ಸಮುದಾಯ ಮತ್ತು ಮುಸ್ಲಿಂ ಸಂತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದರ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷರಾದ ಜಲಾಲವಾಡಿಯ ನಯೀಮ್ ಖಾನ್ ಮತ್ತು ಖಿದ್ಮತಿ ಇ ಮಿಲ್ಲತ್ ಸಾ ದಸಂಸ್ಥಾಪಕ ಸದಸ್ಯರಾದ ಜಿಲಾನಾಬಾದನ ಇಮ್ರಾಜ್ ರಜ್ವಿ ಅವರು ರೋಜಾ ಮತ್ತು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಕಲಂ 196, 297,302, 353 (2) ಭಾರತೀಯ ನೀತಿ ಸಂಹಿತಿ (ಬಿಎನ್‍ಎಸ್) ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಎಫ್‍ಐಆರ್ ದಾಖಲಿಸಿ
ಗಾಜಿಯಾಬಾದ ಲೋಹಿಯಾ ನಗರದ ಹಿಂದಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯ ಹಾಗೂ ಮುಸ್ಲಿಂ ಸಂತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದರ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿರುವ ಉತ್ತರ ಪ್ರದೇಶ (ಯುಪಿ) ದಸ್ನಾ ದೇವಿ ದೇವಸ್ಥಾನದ ಮುಖ್ಯಸ್ಥ ಯತಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧ ಜಫರಬಾದ್‍ನ ಹಾಜಿಸಾಬ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಯತಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸದಿದ್ದರೆ ರಾಜ್ಯವಾಪಿ ಬೃಹತ್ ಆಂದೋಲನ ನಡೆಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಹಾಜಿಬಾಬಾ ಅವರು ನೀಡಿದ ದೂರಿನ ಅನ್ವಯ ಕಲಂ 196, 197, 299, 302 ಭಾರತೀಯ ನೀತಿ ಸಂಹಿತೆ-2023ರ ಅಡಿ ಯತಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.