ಸ್ವ ಗ್ರಾಮಕ್ಕೆ ತುಂಗಾ ಭದ್ರೆ ನೀರು ಬರುವುದನ್ನು ಕಂಡು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹರ್ಷೋದ್ಗಾರ.!
ಜಗಳೂರು.ಜು.೧೧; ನನ್ನ ಸ್ವ ಗ್ರಾಮಕ್ಕೆ ತುಂಗಾ ಭದ್ರೆ ನೀರು ಬಂದಿರು ವುದು ಸಂತಸ ತಂದಿದೆ ಎಂದು ಶಾಸಕ ದೇವೇಂದ್ರಪ್ಪ ಸಂತಸ ವ್ಯಕ್ತಪಡಿಸಿದರು.ಬುಧವಾರ ಸ್ವಗ್ರಾಮ ಚಿಕ್ಕಮ್ಮನಹಟ್ಟಿ ಗ್ರಾಮ ಕ್ಕೆ ಭೇಟಿ ನೀಡಿ ಕೆರೆಗೆ ನೀರು ಬರುವುದುನ್ನು ವಿಕ್ಷೀಸಿ ಮಾತನಾ ಡಿದ ಅವರು ಎಲ್ಲಿ ತುಂಗಾ ಭದ್ರೆ ನದಿ,ಎಲ್ಲಿ ಚಿಕ್ಕಮ್ಮನಹಟ್ಟಿ ಗ್ರಾಮ ಇಂತಹ ಗ್ರಾಮಕ್ಕೆ ತುಂಗಾಭದ್ರೆ ನದಿ ನೀರು ನನ್ನ ಅವಧಿ ಯಲ್ಲಿ ಬಂದಿದ್ದು, ಸಂತಸ ತಂದಿದೆ ಅಲ್ಲದೆ ಜನ್ಮ ಕೊಟ್ಟ ತಾಯಿ ಹಾಗೂ ಜನ್ಮ ನೀಡಿದ ಭೂಮಿಯ ಋಣ ತೀರಿಸುವ ಸೌಭಾಗ್ಯ ಕೆರೆಗೆ ನೀರು ತರುಸುವ ಮೂಲಕ ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.ಮೃತ ನಂತರವು ಜನ ಮಾನಸದಲ್ಲಿ ಉಳಿಯಬೇಕಾದರೆ, ಸಾರ್ವಜನಿಕವಾಗಿ, ಸಾಮಾಜಮುಖಿಯಾಗಿ ನಿರಂತರವಾಗಿ ಕೆಲಸಗಳನ್ನು ಮಾಡಬೇಕು ಆಗ ಮಾತ್ರ ನಾವು ಮೃತ ನಂತರ ಜನರ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿಯುತ್ತೇವೆ. ಈ ನಿಟ್ಟಿ ನಲ್ಲಿ ನಾನು ಸಾರ್ವಜನಿಕವಾಗಿ ಕೆಲಸ ಮಾಡುವುದಕ್ಕೆ ಮುಂದಾಗಿದ್ದು ,ತಾಲೂಕಿನಲ್ಲಿ 30 ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗಿದೆ. ತಾಲೂಕಿನ 57 ಕೆರೆ ತುಂಬಿಸುವ ಯೋಜನೆ ಯು ಶೀಘ್ರವೇ ಎಲ್ಲಾ ಕೆರೆಗಳು ತುಂಬಿಸುವುದಕ್ಕೆ ಜವಾಬ್ದಾರಿ ಯುತವಾಗಿ ಕೆಲಸ ನಿರ್ವಹಿಸಲಾಗವುದು ಎಂದು ಭರವಸೆ ನೀಡಿದರು.ಚಿಕ್ಕಮ್ಮನಹಟ್ಟಿ ಗ್ರಾಮದ ನನ್ನೆಲ್ಲಾ ಸಹೋದರರೆ ಕೆರೆಗೆ ನೀರು ಯಾವ ಉದ್ದೇಶಕ್ಕೆ ಬಂದಿದೆಯೋ ಆ ಉದ್ದೇಶಕ್ಕೆ ನೀರನ್ನು ಬಳಸಿಕೊಳ್ಳಿ ಅಲ್ಲದೆ ಗಂಗೆಯನ್ನು ಮಳೆ ನೀರಿನಂತೆ ಸಂಗ್ರಹಿಸಿ, ದೇವಸ್ಥಾನದ ತೀರ್ಥ ಪ್ರಸಾದದಂತೆ ಬಳಸಬೇಕು ಎಂದು ಸ್ವ ಗ್ರಾಮದ ಜನರಿಗೆ ಕಿವಿ ಮಾತು ಹೇಳಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ ಪಿ ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಎಂ ಡಿ ಕೀರ್ತಿಕುಮಾರ್, ವಕೀಲ ಸಂಘದ ತಾಲೂಕ ಅಧ್ಯಕ್ಷ ಮರನಹಳ್ಳಿ ಬಸವರಾಜ್ ವಕೀಲ ಚಿಕ್ಕಮಲ್ಲನಹೊಳೆ ತಿಪೇಸ್ವಾಮಿ. ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್.ಗ್ರಾಮದ ಮುಖಂಡ ರಾದ ಕಾಟಪ್ಪ, ತಹಮಲೇಹಳ್ಳಿ ತಿಮ್ಮಣ್ಣ.ಶಂಸುದ್ದೀನ್.ಹನುಮಂತಪ್ಪ, ಸರ್ಕಲ್ ಕಾಟಪ್ಪ.ಸೇರಿದಂತೆ ಊರಿನ ಗ್ರಾಮಸ್ಥರು ಜೊತೆಗಿದ್ದರು.