ಕೇಂದ್ರ ಬಜೇಟ್ ನಲ್ಲಿ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಅನುದಾನ ಇಡಬೇಕೆಂದು ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ
ಇಂಡಿ:ಜು.11: ಕೇಂದ್ರ ಸರ್ಕಾರ ಬರುವ 2024-25 ನೇ ಸಾಲಿನ ಬಜೆಟ್ನಲ್ಲಿ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಹಂಚಿಕೆ ಮೀಸಲು ಇಡಬೇಕು. ಅಂಗನವಾಡಿಗಳನ್ನು ಬಲಪಡಿಸಲು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಇಂಡಿ ನಗರದ ಹೃದಯ ಭಾಗದಲ್ಲಿರುವ ಮಿನಿ ವಿಧಾನಸೌಧ ಮುಂದೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೆಲ ಹೊತ್ತು ಪ್ರತಿಭಟನೆ ಮಾಡಿದರು.ನಂತರ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷೆ ಭಾರತಿ ವಾಲಿ ಅವರು ಮಾತನಾಡಿ ಕಳೆದ ಐದು ದಶಕಗಳಿಂದಲೂ ನಿಸ್ವಾರ್ಥವಾಗಿ ದುಡಿಯುತ್ತಿರುವ ಸುಮಾರು 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಇನ್ನೂ ಕಾರ್ಮಿಕರನ್ನಾಗಿ ಗುರುತಿಸಲು ಸರ್ಕಾರ ಸಿದ್ಧವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಭೂತ್ ಸೌಕರ್ಯಗಳನ್ನು ಒದಗಿಸಬೇಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಖಾಯಂ ಮಾಡಿ.ಖಾಯಮಾತಿ ವಿಷಯ,45ನೇ Iಐಅ ಶಿಫಾರಸಿನ ಪ್ರಕಾರ ತಿಂಗಳಿಗೆ ಕನಿಷ್ಠ ರೂ.26000, ಹಾಗೂ ಮಾಸಿಕ ಪಿಂಚಣಿ ರೂಂ.10000, ನೀಡಬೇಕು.ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.ಆದರೆ ಪ್ರತಿಭಟನೆ ನಿರತರ ಮನವಿ ಸ್ವೀಕರಿಸಬೇಕಾದ ಅಧಿಕಾರಿಗಳು ಬಾರದ ಕಾರಣ ಕೆಲ ಹೊತ್ತು ಕಾದು ಕುಳಿತರು, ನಂತರ ಪ್ರತಿಭಟನೆ ನಿರತ ಸ್ಥಳಕ್ಕೆ ಆಗಮಿಸಿದ ಶಿರಸ್ತೇದಾರ ಎಸ್ ಆರ್ ಮುಜಗೊಂಡ ಮನವಿ ಪತ್ರ ಸ್ವಿಕರಿಸಿದರು.ಈ ಸಂದರ್ಭದಲ್ಲಿ ಶೇಂಕ್ರೆಮ್ಮ ಪುಟಾಣಿ,ಸುರೇಖಾ ಸ್ವಾಮಿ, ಸುಜಾತಾ ಬಿರಾದಾರ, ಸರೋಜಿನಿ ಜೋಶಿ, ದ್ರಾಕ್ಷಿಣಿ ಅವಟಿ, ಮಾದೇವಿ ಮಠಪತಿ,ಭಾಗಿರಥಿ ,ತಳವಾರ,ಶಾರದಾ ಜೇವೂರ, ಹಸೀನಾ ಮುಲ್ಲಾ, ದಾನಮ್ಮ ಮಸೂತಿ,ಪ್ರೇಮಾ ಬಿರಾದಾರ, ಕಲಾವತಿ ಮಲಗೊಂಡ, ಸುರಮ್ಮ ಪೂಜಾರಿ , ಎಸ್ ಆರ್ ಜೋಶಿ, ಶೋಭಾ ಕುಂಬಾರ, ಶಾರದಾ ತಾಂಬೆ ಸೇರಿದಂತೆ ವಿವಿಧ ವಲಯಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.