ಖಾಸ್ಗತೇಶ್ವರ ಜಾತ್ರೋತ್ಸವವಿದ್ಯುತ್ ಅಲಂಕೃತದಿಂದ ಝಗಮಗಿಸುತ್ತಿರುವ ತಾಳಿಕೋಟೆ
ತಾಳಿಕೋಟೆ:ಜು.11: ವಿಜಯನಗರ ಸಾಮ್ರಾಜ್ಯದಲ್ಲಿ ಕೋಟೆ ಕೊತ್ತಲಗಳಿಂದ ಇಡೀ ಸಾಮ್ರಜ್ಯವೇ ರಕ್ಷಣೆಯತ್ತ ಕೊಂಡೊಯ್ದ ಅಂದಿನ ರಾಜವೈಭವ ಮರುಕಳಿಸಿತೇನೋ ಎಂಬಂತೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ನಿಮಿತ್ಯವಾಗಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ದೇವರ ಅಪೇಕ್ಷೆಯಂತೆ ಈಗ ಇಡೀ ತಾಳಿಕೋಟೆ ಪಟ್ಟಣವೇ ವಿವಿಧ ಪ್ರಮುಖ ಮಾರ್ಗಗಳ ಎಡಭಲದಲ್ಲಿ ವಿದ್ಯುತ್ ದ್ವೀಪಗಳು ಅಲಂಕೃತಗೊಂಡು ರಾತ್ರಿ ಹೊತ್ತಿನಲ್ಲಿ ಬೆಳಕು ನೀಡುತ್ತಿರುವದನ್ನು ನೋಡಿದರೆ ವಿಜಯನಗರ ಈ ಹಿಂದಿನ ವೈಭವ ಹೀಗೆ ಇತ್ತೇನೋ ಎಂಬಂತೆ ಕಾಣುತ್ತದೆ ಅಲ್ಲದೇ ಇದೊಂದು ವಿಶೇಷತೆಯ ಹಾಗೂ ಭಕ್ತಿ ಮಾರ್ಗ ತೋರುವ ಜಾತ್ರೋತ್ಸವೇನೋ ಎಂಬಂತೆ ಕಾಣುತ್ತಲಿದೆ.
ಇದೇ ದಿ. 11 ರಂದು ಪ್ರಾರಂಭಗೊಂಡ ಜಾತ್ರೋತ್ಸವ ಕುರಿತು ನಡೆದ ಸಪ್ತ ಭಜನೆ ಸುಮಾರು ಸುತ್ತಮುತ್ತಲಿನ 63 ಗ್ರಾಮಗಳ ಭಜನಾ ಮಂಡಳಿಯವರು ಹಗಲು ರಾತ್ರಿಯೂ ಕೂಡಾ ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ದಿ.18 ಗೋಪಾಲ ಕಾವಲಿ ಒಡೆಯುವವರೆಗೂ ನಡೆಸುತ್ತಾ ಸಾಗುತ್ತಾರೆ.
ಇದೇ ದಿ.16 ಹಾಗೂ 17 ರಂದು ಸಮಸ್ತ ಭಕ್ತಾಧಿಗಳಿಗಾಗಿ ಸುಮಾರು 8 ಕ್ವೀಂಟಲಕ್ಕೂ ಮೇಲ್ಪಟ್ಟು ಬೆಲ್ಲದ ಜೀಲೆಬಿಯನ್ನು ಹಾಗೂ ಅನ್ನ ಪ್ರಸಾದವನ್ನೂ ಕೂಡಾ ಪ್ರಸಾದ ರೂಪದಲ್ಲಿ ಭಕ್ತರಿಗಾಗಿ ಉಣಬಡಿಸಲು ಶ್ರೀಗಳು ನಿರ್ಧರಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಸುಮಾರು 50 ಸಾವಿರ ಜೀಲೆಬಿಯ ಗಾಲಿಗಳು ತಯಾರಾಗಲಿವೆ. ಈ ಊಟದ ವ್ಯವಸ್ಥೆಯಲ್ಲಿ ಅನ್ನ ಸಾರು ಸಹ ಭಕ್ತರಿಗೆ ಎಂದಿನಂತೆ ಉಣಬಡಿಸಲು ನಿರ್ಧರಿಸಲಾಗಿದೆ.
ದಿ.18 ಗೋಪಾಲ ಕಾವಲಿ ಒಡೆಯುವದಿನದಂದು ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಸಜ್ಜಕ ಹಾಗೂ ಅನ್ನ ಪ್ರಸಾದ ಸಾರಿನ ವ್ಯವಸ್ಥೆ ಭಕ್ತಾಧಿಗಳಿಗಾಗಿ ಸಜ್ಜಾಗಲಿದೆ. ದಿ. 19 ಶ್ರೀ ಖಾಸ್ಗತ ಶಿವಯೋಗಿಗಳ ರಥೋತ್ಸವ ದಿನದಂದು ಯುವ ಭಕ್ತ ಸಮೂಹದವರು ತಮ್ಮ ಸ್ವ ಇಚ್ಚೆಯಿಂದ ಚಪಾತಿಯ ಮಾದಲಿ ಹಾಗೂ ಅನ್ನ ಪ್ರಸಾದವನ್ನು ಭಕ್ತಾಧಿಗಳಿಗಾಗಿ ತಯಾರಿಸಿ ಉಣಬಡಿಸಲು ಸಹ ನಿರ್ಧರಿಸಿದ್ದಾರೆ.
ಇದು ಅಲ್ಲದೇ ದಿನನಿತ್ಯ ಭಕ್ತರಿಗಾಗಿ ರೋಟ್ಟಿ ಸಾರು ಹಾಗೂ ಅನ್ನ ಸಾರು ಪ್ರಸಾದದ ವ್ಯವಸ್ಥೆಯೂ ಕೂಡಾ ಈ ಹಿಂದಿನ ಸಾಂಪ್ರದಾಯದಂತೆ ನಡೆದೇ ನಡೆಯುತ್ತಿದೆ. ಶ್ರೀಮಠದ ಇನ್ನಷ್ಟು ಮೆರಗು ಹೆಚ್ಚಿಸಲು ಹೊರವಲಯ ಹಾಗೂ ಗೋಪೂರ ಎತ್ತರಕ್ಕೂ ಜಗಮಗಿಸುವ ವಿದ್ಯುತ್ ಅಲಂಕಾರ ನೋಡುಗರ ಕಣ್ಮನ ಸೇಳೆಯುತ್ತಲಿದೆ. ಶ್ರೀಮಠದಲ್ಲಿ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳವರ ಬೆಳ್ಳಿ ಉತ್ಸವ ಮೂರ್ತಿಗಳ ಕುರಿತು ಶ್ರೀಮಠದಲ್ಲಿಯೇ ಥರ್ಮಾಕೋಲದಿಂದ ನಿರ್ಮಿಸಲಾದ ಅಲಂಕೃತ ಕಂಬಗಳನ್ನು ಹೊಂದಿದ ಮಂಟಪಗಳನ್ನು ರಚನೆ ಮಾಡಲಾಗಿದೆ.
ಇದು ಅಲ್ಲದೇ ಪಟ್ಟಣದ ಪ್ರಮುಖ ಮಾರ್ಗಗಳಾದ ಬಸವೇಶ್ವರ ಸರ್ಕಲ್, ರಾಣಾಪ್ರತಾಪಸಿಂಹ ಸರ್ಕಲ್, ಶಿವಾಜಿ ಮಹಾರಾಜ ವೃತ್ತ, ಹಾಗೂ ಡಾ.ಅಂಬೇಡ್ಕರ್ ಸರ್ಕಲ್, ಬಸ್ ನಿಲ್ದಾಣ ಮುಂಭಾಗ, ಶ್ರೀ ಖಾಸ್ಗತೇಶ್ವರ ಮಠದ ಮುಂಭಾಗವೂ ಭಕ್ತಾಧಿಗಳು ಹಾಗೂ ವಿವಿಧ ಯುವ ಸಂಘಟಿಕರು ತಮ್ಮಾ ಇಚ್ಚಾ ಅನುಸಾರ ಶ್ರೀ ಖಾಸ್ಗತರ ಹಾಗೂ ವಿರಕ್ತಶ್ರೀಗಳ ಹಾಗೂ ಶ್ರೀ ಸಿದ್ದಲಿಂಗಶ್ರೀಗಳ ಭಾವಚಿತ್ರದೊಂದಿಗೆ ಸ್ವಾಗತ ಕೋರುವಂತಹ ಕಟೌಟ್‍ಗಳನ್ನು ಕಟ್ಟಿರುವದನ್ನು ನೋಡಿದರೆ ಮಹಾ ಪ್ರದರ್ಶನವೇನೋ ಎಂಬಂತೆ ಕಾಣುತ್ತಲಿದೆ.
ಈ ಎಲ್ಲವನ್ನು ಭಕ್ತಿಭಾವದಿಂದ ಮಾಡಿದ ಹಾಗೂ ಇನ್ನೂ ಮಾಡಲು ಸಜ್ಜಾಗಿರುವ ಭಕ್ತ ಸಮೂಹ ದಿನನಿತ್ಯ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರ ಆಶಿರ್ವಾದ ಪಡೆದು ಹೋಗುತ್ತಿರುವದಂತೂ ಹೆಚ್ಚುತ್ತಲಿದೆ.