ಪ್ರೊ. ಪಿ.ಸಿ. ಮಹಾಲನೋಬಿಸ್ ಜನ್ಮದಿನದ ಅಂಗವಾಗಿ 18ನೇ ಸಾಂಖ್ಯಿಕ ದಿನ ಆಚರಣೆ
ವಿಜಯಪುರ,ಜು.11:ಸಾಂಖ್ಯಿಕ ತಜ್ಞ ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನದ ಅಂಗವಾಗಿ ವಿಜಯಪುರ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ದತ್ತಾಂಶಗಳ ಬಳಕೆ ಎಂಬ ಘೋಷವಾಕ್ಯದೊಂದಿಗೆ ಸಾಂಖ್ಯಿಕ ದಿನ ಆಚರಣೆ ಮಾಡಲಾಯಿತು.
ಬುಧವಾರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎನ್.ಕೆ. ಗೋಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವುದೇ ಕೆಲಸವನ್ನು ಮಾಡಲು ಮೊದಲಿಗೆ ಯೋಜನೆಯನ್ನು ಹಾಕಿಕೊಳ್ಳಬೇಕು. ಯೋಚನೆ, ಯೋಜನೆಯಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವಿವಿಎಸ್ ಭನಸಿಲ್ ವ್ಹಿಠಲದಾಸ ದರಬಾರ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕ ಆನಂದ ಕುಲಕರ್ಣಿ ನಿರ್ಣಯ ಕೈಗೊಳ್ಳುವಲ್ಲಿ ದತ್ತಾಂಶಗಳÀ ಬಳಕೆ (Use oಜಿ ಆಚಿಣಚಿ ಜಿoಡಿ ಆeಛಿisioಟಿ ಒಚಿಞiಟಿg) ಕುರಿತು ಉಪನ್ಯಾಸ ನೀಡಿ, ನಮ್ಮ ದಿನನಿತ್ಯದ ಜೀವನದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ರ್ತವನ್ನು ಹೇಗೆ ಉಪಯೋಗಿಸುತ್ತೇವೆ ಎಂಬುವುದನ್ನು ನೈಜ ಉದಾಹರಣೆಗಳೊಂದಿಗೆ ವಿವರಿಸಿ ಸವಿಸ್ತಾರವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಸವನ ಬಾಗೇವಾಡಿ ತಾಲ್ಲೂಕಿನ ನಿವೃತ್ತ ತಾಲ್ಲೂಕು ಯೋಜನಾಧಿಕಾರಿ ಆರ್.ಪಿ.ಪಾಟೀಲ, ತಾಲ್ಲೂಕು ಪಂಚಾಯತ್ ತಾಲ್ಲೂಕು ಯೋಜನಾಧಿಕಾರಿ ಎಸ್.ಎಸ್.ಅಳ್ಳಗಿ ಭಾಗವಹಿಸಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಛೇರಿಯ ಸಹಾಯಕ ನಿರ್ದೇಶಕ ಅಲ್ತಾಫ್‍ಅಹ್ಮದ್ ಬಾಶಾಲಾಲ ಮಣಿಯಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ಪರಮೇಶ ಕೆಂಚಣ್ಣವರ ನಿರೂಪಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಸುಷ್ಮಾ ಮಜ್ಜಗಿ ಸ್ವಾಗತಿಸಿ, ವಂದಿಸಿದರು.