7 ನೇ ವೇತನ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದಿಂದ  ಮನವಿ.
ಸಂಜೆವಾಣಿ ವಾರ್ತೆ
ಜಗಳೂರು.ಜು.೧೧:-ಪಟ್ಟಣದ ಶಾಸಕರ ನಿವಾಸದ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಶಾಸಕ.ಬಿ.ದೇವೇಂದ್ರಪ್ಪ ಹಾಗೂ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಶಾಸಕ ಬಿ ದೇವೇಂದ್ರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.ನಂತರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಸಿ.ಬಿ.ನಾಗರಾಜ್ ಮಾತನಾಡಿ,ರಾಜ್ಯದ 7 ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರಿ ಆದೇಶ ಹೊರಡಿಸಬೇಕು.ವರದಿ ಅನುಷ್ಠಾನಗೊಳಿಸ ಲು ತೆಗೆದುಕೊಂಡ ಅವಧಿ ಮೀರಿದ್ದು ವಿಳಂಬವಾಗಿದೆ.ಹಾಗೂ ಎನ್.ಪಿ.ಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಮರುಜಾರಿಗೊಳಿಸಬೇಕು.ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್ ) ಅನುಷ್ಠಾನಗೊಳಿಸ ಬೇಕು ಎಂದು ಮನವಿ ಮಾಡಿದರು.ನಂತರ ಶಾಸಕ ಬಿ.ದೇವೇಂದ್ರಪ್ಪ ಮನವಿ ಸ್ವೀಕರಿಸಿ ನಂತರ ಪ್ರತಿಕ್ರಿಯಿಸಿ ನಾನು ಒಬ್ಬ ಪಿಂಚಣಿ ಫಲಾನುಭವಿಯಾಗಿದ್ದು. ರಾಜ್ಯದಲ್ಲಿ ನಮ್ಮದೇ ಪಕ್ಷ ಆಡಳಿತದಲ್ಲಿದ್ದು ಅಂತೆಯೇ ನನ್ನ ಆಡಳಿತಾವಧಿಯಲ್ಲಿ 7 ನೇ ವೇತನ ಜಾರಿಗೊಂಡರೆ ನಿಜಕ್ಕೂ ನನಗೂ ಲಾಭ ಮತ್ತು ಸಂತಸ ತರುತ್ತದೆ.ಅಧಿವೇಶನದಲ್ಲಿ ನಾನು ನಿಮ್ಮ ಬೇಡಿಕೆಯ ಧ್ವನಿಯಾಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಂತರ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಮಾತನಾಡಿ ‘ನಾನೊಬ್ಬ ಸರ್ಕಾರಿ ನೌಕರನಾಗಿ ಸೇವೆಸಲ್ಲಿಸುತ್ತಿರುವೆ.ನಿಜಕ್ಕೂ 7 ನೇ ವೇತನ‌ಹಾಗೂ ಓಪಿಎಸ್,ಆರೋಗ್ಯ ಸಂಜೀವಿನಿ ಸೌಲಭ್ಯ ಅವಶ್ಯಕತೆಯಿದೆ.ಸರ್ಕಾರಕ್ಕೆ ಕೂಡಲೇ ತಮ್ಮ ಮನವಿ ಯನ್ನು ರವಾನಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸರ್ಕಾರಿ ಪತ್ತಿನ ಸಹಕಾರಿ ಸಂಘದ ಜಿಲ್ಲಾ ಧ್ಯಕ್ಷ ಎನ್.ಚಂದ್ರಪ್ಪ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತು ಸದಸ್ಯ ಬಣಕಾರ್,ಡಿ.ಎಸ್. ತಾಲೂಕು ಪ್ರಧಾನ ಕಾರ್ಯದರ್ಶಿ ಎ.ಎಲ್.ತಿಪ್ಪೇಸ್ವಾಮಿ, ಖಜಾಂಚಿ ಮಾರಪ್ಪ,ನಿರ್ದೇಶಕರಾದ ವೀರೇಶ್,ತಿರುಮಲೇಶ್, ಬಸವರಾಜ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕಬಿ.ಮಹೇಶ್ವರಪ್ಪ,ಸತೀಶ್ ,ಹನುಮಂತೇಶ್, ಕೃಷ್ಣಪ್ಪ,ಉಮೇಶ್. ಸೇರಿದಂತೆ ಎಲ್ಲಾ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳು ಇದ್ದರು.