ಜಗಳೂರು  ಮುಖ್ಯ ರಸ್ತೆ ಅಗಲೀಕರಣಕ್ಕೆ ವಕೀಲರ ಸಂಘದಿಂದ  ಮನವಿ.
ಸಂಜೆವಾಣಿ ವಾರ್ತೆ
ಜಗಳೂರು.ಜು.೧೧:ಪಟ್ಟಣದ ಶಾಸಕರ ನಿವಾಸದ ಬಳಿ ಪಟ್ಟಣ ದ ಮುಖ್ಯ ರಸ್ತೆ ವಿಸ್ತರಣೆಗಾಗಿ ಒತ್ತಾಯಿಸಿ ನ್ಯಾಯವಾದಿಗಳ ಸಂಘದ ತಾಲೂಕು ಘಟಕ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ನ್ಯಾಯವಾದಿಗಳ ಸಂಘದ ತಾಲೂಕು ಘಟಕ ಅಧ್ಯಕ್ಷ ಟಿ. ಮರೇನಹಳ್ಳಿ ಬಸವರಾಜ್ ಮಾತನಾಡಿ.ತಾಲೂಕು ಕೇಂದ್ರ ವಾಗಿರುವ ಜಗಳೂರು ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ದಿ ಗೊಳ್ಳುತ್ತಿದ್ದು.ಮಲ್ಫೆ ಮೊಳಕಾಲ್ಮೂರು ಮುಖ್ಯ ರಸ್ತೆ ಪಟ್ಟಣದ ಮಧ್ಯಭಾಗದಲ್ಲಿ ಹಾದುಹೋಗಿದೆ.ಹಲವು ದಶಕಗಳಿಂದ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆಮಾಡದೇ ಇರುವುದರಿಂದ ಚಳ್ಳಕೆರೆ ಟೋಲ್ ಗೇಟ್ ನಿಂದ ದಾವಣಗೆರೆ ರಸ್ತೆಯಲ್ಲಿನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ವರೆಗೂ ಕಿರಿದಾದ ರಸ್ತೆಯಲ್ಲಿ ಸರಕು ಹೊತ್ತ ಬೃಹತ್ ವಾಹನಗಳು, ಬಸ್,ದ್ವಿಚಕ್ರವಾಹನಗಳು ಹಾಗೂ ಪಾದಾಚಾರಿಗಳು ಸಂಚರಿ ಸುವ ಅನಿವಾರ್ಯತೆಯಿದೆ ಅಲ್ಲದೆ ಪಟ್ಟಣದ ಮುಖ್ಯರಸ್ತೆಯ ಲ್ಲಿ ವಾಹನ ದಟ್ಟಣೆಯಿಂದ ಪ್ರತಿನಿತ್ಯ ಚಿಕ್ಕಪುಟ್ಟ ಅಪಘಾತ ಗಳು ಸಂಭವಿಸುತ್ತಿರುತ್ತವೆ.ಇದರಿಂದ ವಿದ್ಯಾರ್ಥಿಗಳು,ವಯೋ ವೃದ್ದರು,ಅಂಗೈಯಲ್ಲಿ ಜೀವಹಿಡಿದುಕೊಂಡು ಸಂಚರಿಸುವ ಆತಂಕದಲ್ಲಿದ್ದಾರೆ ಕೂಡಲೇ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.ವಕೀಲ ಶ್ರೀನಿವಾಸ್ ಮಾತನಾಡಿ,ಸರ್ಕಾರಿ ಅನುದಾನದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚಭರಿಸಿ ನಿರ್ಮಿಸಿರುವ ಪಾದಾ ಚಾರಿಗಳ ರಸ್ತೆಯನ್ನು ಇಕ್ಕೆಲಗಳಲ್ಲಿನ ವರ್ತಕರು ಅಕ್ರಮವಾಗಿ ಒತ್ತುವರಿಮಾಡಿಕೊಂಡಿದ್ದಾರೆ.ಕೂಡಲೇ ರಸ್ತೆ ಅಗಲೀಕರಣ ಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.ರಸ್ತೆ ಬದಿಯಲ್ಲಿ ಸಾಲು ಸಸಿಗಳನ್ನು ನೆಡಬೇಕು’ ಎಲ್ಲಾ ಪಟ್ಟಣ ನಗರಗಳಲ್ಲಿ ಈಗಾಗಲೇ ರಸ್ತೆ ಆಗಲೀಕರಣ ವಾಗಿ ಅಭಿವೃದ್ಧಿ ಹೊಂದಿದೆ ಆದರೆ ಜಗಳೂರಿನಲ್ಲಿ ಈ ಹಿಂದೆ ಮಾಜಿ ಶಾಸಕರು ರಸ್ತೆ ಅಗಲೀಕರಣ ವಿಷಯಕ್ಕೆ ಏಕೇ ಮೌನ ವಹಿಸಿದ್ದ ರು ಗೊತ್ತಿಲ್ಲ.ಆದರೆ ಶಾಸಕ ದೇವೇಂದ್ರಪ್ಪ ರಸ್ತೆ ಅಗಲೀಕರಣ ಕಾರ್ಯಕ್ಕೆ ಮುಂದಾಗಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕು ಇದಕ್ಕೆ ಕಾನೂನು ತೊಡಕುಗಳು ಬಂದರೆ ವಕೀಲರ ಸಂಘ ಶಾಸಕರ ಜೊತೆಗಿರುವುದು ಎಂದು ವಕೀಲರ ಸಂಘದಿಂದ ಬೆಂಬಲದ ಭರವಸೆ ನೀಡಿದರು.ಶಾಸಕ ಬಿ.ದೇವೇಂದ್ರಪ್ಪ ಮನವಿ ಸ್ವೀಕರಿಸಿ ನಂತರ ಪ್ರತಿಕ್ರಿ ಯಿಸಿ ರಸ್ತೆ ವಿಸ್ತರಣೆ ಕಾಮಗಾರಿಗೆ 20 ಕೋಟಿ ಅನುದಾನ ಮಂಜೂರಾಗಿದ್ದು ಹಿಂದಿನ ಶಾಸಕರಂತೆ ಕೈಕಟ್ಟಿ ಕೂಳಿತುಕೊಳ್ಳ ದೆ ಶೀಘ್ರವೇ ಅಗಲೀಕರಣ ಮಾಡಲಾಗುವುದು ಅಲ್ಲದೆ ಅಗಲೀಕರಣಕ್ಕೆ ಈಗಾಗಲೇ ಸರ್ವೆ ಕಾರ್ಯಮಾಡಲಾಗಿದ್ದು, ಇಲಾಖೆಯಿಂದ ಮೂರು ಹಂತಗಳಲ್ಲಿ ದಾಖಲೆಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ.ವರ್ತಕರ ಸಂಘದವರನ್ನು ಸಭೆ ಕರೆದು ನಂತರ ನೋಟಿಸ್ ಜಾರಿಗೊಳಿಸಿ ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಲ್ಲಾ ಸಂಘಸಂಸ್ಥೆಯವರ ಸಹಕಾರ ಅಗತ್ಯವಿದೆ ಪಟ್ಟಣದ ಅಭಿವೃದ್ದಿ ಕುರಿತು ವಕೀಲರ ಸಂಘದ ಕಾಳಜಿಗೆ ಸ್ವಾಗತರ್ಹ ಎಂದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ತಾಲೂಕು ಕಾರ್ಯದರ್ಶಿ ಪರಶುರಾಮ್. ಪದಾಧಿಕಾರಿಗಳಾದ ಪ್ರಕಾಶ್, ಬಸವರಾಜ್,ಡಿ.ಶ್ರೀನಿವಾಸ್,ರಂಗನಾಥ್,ಓಂಕಾರೇಶ್ವರ, ಕುಂಬಾರ್ .ನಾಗೇಶ್,ಸಣ್ಣೋಬಯ್ಯ,ಬಸವರಾಜ್,ತಿಪ್ಪೇಸ್ವಾಮಿ, ದೊಡ್ಡಬೋರ ಯ್ಯ,ಅಂಜಿನಪ್ಪ,ಮರೇನಹಳ್ಳಿ ತಿಪ್ಪೇಸ್ವಾಮಿ ಸೇರಿದಂತೆ ಭಾಗವಹಿಸಿದ್ದರು.