ವೀರಶೈವ ಧರ್ಮ ವೃಕ್ಷದ ಬೇರು ರೇಣುಕರಾದರೆ ಆ ವೃಕ್ಷದ ಹಣ್ಣು ಬಸವಣ್ಣ
ಸಂಜೆವಾಣಿ ವಾರ್ತೆ
ಹರಿಹರ.ಜು.೧೧; ವೀರಶೈವ ಧರ್ಮದ ಇತಿಹಾಸ ಪರಂಪರೆ ಪ್ರಾಚೀನವಾದುದು. ವೀರಶೈವ ಧರ್ಮ ವೃಕ್ಷದ ಬೇರು ರೇಣುಕಾದಿ ಪಂಚಾಚಾರ್ಯರಾದರೆ ಆ ಧರ್ಮ ವೃಕ್ಷದ ಹಣ್ಣು ಬಸವಣ್ಣನವರೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.  ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದÀ ಸಭಾಂಗಣದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮಕ್ಕೊಂದು ಸಂವಿಧಾನವಿದೆ. 28 ಶಿವಾಗಮಗಳ ಉತ್ತರ ಭಾಗದಲ್ಲಿ ವೀರಶೈವ ಧರ್ಮದ ಹಿರಿಮೆ ಮತ್ತು ವಿಶ್ವ ಬಂಧುತ್ವದ ಚಿಂತನೆಗಳನ್ನು ಕಾಣಬಹುದು. ಈ 28 ಆಗಮಗಳ ಸಾರವನ್ನೊಳಗೊಂಡ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತö್ಯರಿಗೆ ಬೋಧ ಮಾಡಿದ್ದಾರೆ. ಜಾತಿಗಿಂತ ನೀತಿ ತತ್ವಕ್ಕಿಂತ ಆಚರಣೆ ಶ್ರೇಷ್ಠ ಎಂಬುದನ್ನು ಅರಿಯಬೇಕಾಗುತ್ತದೆ. ವೀರಶೈವ ಧರ್ಮ ಜಾತಿ ಮತ ಪಂಥಗಳ ಗಡಿ ಮೀರಿ ವಿಶ್ವ ಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದೆ. ಪುಸ್ತಕದ ಪುಟ ಬದಲಾಯಿಸಬಹುದು ಹೊರತು ಇತಿಹಾಸ ಪರಂಪರೆ ಮರೆ ಮಾಚುವುದು ಯಾರಿಂದಲೂ ಸಾಧ್ಯವಿಲ್ಲ. ಅಜ್ಞಾನ ಮನುಷ್ಯನನ್ನು ಸ್ವಾರ್ಥದ ಸೆಳೆತಗಳ ಸುಳಿಯಲ್ಲಿ ಸಿಲುಕಿಸುತ್ತದೆ ಎಂಬ ಮಾತಿನಂತೆ ಕೆಲವರು ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿ ತೆಗೆದುಕೊಳ್ಳುವುದು ಒಳಿತಾದುದಲ್ಲ. ನೂರು ಸಲ ಸುಳ್ಳು ಹೇಳಿದರೆ ಅದು ಸತ್ಯವಾಗಬಹುದೆಂಬ ಭ್ರಮೆ ಕೆಲವರಿಗುಂಟು. ಸಾವಿರ ಸಲ ಹೇಳಿದರೂ ಸುಳ್ಳು ಸುಳ್ಳೇ ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತದೆ. ಜನ ಸಮುದಾಯದಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲವು ಮಠಾಧೀಶರ ಮತ್ತು ರಾಜಕೀಯ ವ್ಯಕ್ತಗಳ ಬಗೆಗೆ ಶ್ರೀ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಲಿಂ.ಹಾನಗಲ್ಲ ಕುಮಾರಸ್ವಾಮಿಗಳ ಆದರ್ಶ ಚಿಂತನೆಗಳನ್ನು ಬೆಳೆಸುವ ಮತ್ತು ಮೂಲ ಧ್ಯೇಯೋದ್ದೇಶಗಳನ್ನು ಚ್ಯುತಿ ಬರದಂತೆ ಮುನ್ನಡೆಸಿಕೊಂಡು ಹೋಗುವ ಅಗತ್ಯವಿದೆ. 9ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ವೀರಶೈವ ಪದ ಕೈ ಬಿಟ್ಟಿರುವುದನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟಿçÃಯ ಮಹಾ ಅಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರು ಗಟ್ಟಿ ನಿರ್ಧಾರ ಕೈಗೊಳ್ಳಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಆಗ್ರಹಿಸಿದರು.