ಮೀನುಗಾರಿಕೆಯಿಂದ ಸ್ಥಳೀಯ ಉದ್ಯೋಗಾವಕಾಶ, ಆದಾಯ ವೃದ್ಧಿ
ಕಲಬುರಗಿ:ಜು.10: ಮೀನುಗಾರಿಕೆಯು ಅನೇಕ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ನೀಡಿದೆ. ಇದರಿಂದ ಜನರು ತಾವಿರುವ ಸ್ಥಳದಲ್ಲಿಯೇ ಉದ್ಯೋಗ, ಆದಾಯ ಪಡೆಯಬಹುದಾಗಿದೆ. ವಿಶ್ವದ ಅನೇಕ ಜನರಿಗೆ ಆಹಾರವಾಗಿದೆ. ಪಳಯುಳಿಕೆ ಇಂಧನವಾಗಿ ದೊರೆಯುತ್ತದೆ. ಸಮುದ್ರ ಆಹಾರದ ವ್ಯಾಪಾರ ಕೊರತೆಯನ್ನು ಕಡಿಮೆಯಾಗುತ್ತದೆ. ಮೀನುಗಳಿಂದ ನೀರಿನ ಗುಣಮಟ್ಟ ಹೆಚ್ಚಳವಾಗಲು ಸಾಧ್ಯವಾಗುತ್ತದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಸಮೀಪದ ಖಾಜಾ ಕೋಟನೂರ ಕೆರೆಯ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧÀವಾರ ಜರುಗಿದ ‘ರಾಷ್ಟ್ರೀಯ ಮೀನು ಸಾಕಾಣಿಕೆದಾರರ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮೀನು ಹೆಚ್ಚಿನ ಪ್ರಮಾಣದ ಪ್ರೋಟಿನ್ ಅಂಶ ಒಳಗೊಂಡಿದ್ದು ಅದರ ಸೇವನೆ ಆರೋಗ್ಯಕ್ಕೆ ಉತ್ತಮವೆಂದು ವೈದ್ಯಲೋಕ ತಿಳಿಸಿದೆ. ಮರೆವು, ಕ್ಯಾನ್ಸರ್ ಕಾಯಿಲೆಗಳ ಗುಣಪಡಿಸುವಲ್ಲಿ ಮೀನಿನ ಆಹಾರವನ್ನು ಬಳಸಲಾಗುತ್ತದೆ. ಸಮುದ್ರ ಸಂಪನ್ಮೂಲಗಳ ಸ್ಥಿರತೆ ಸಾಧ್ಯವಾಗುತ್ತದೆ. ಜೀವವೈವಿದ್ಧಯತೆ ಕಾಪಾಡಲು ಪೂರಕವಾಗಿದೆ. ಉದ್ಯೋಗ ಹುಡುಕಿ ಬೇರೆ ಕಡೆ ವಲಸೆ ಹೋಗುವುದು ತಪ್ಪುತ್ತದೆ. ಡಾ.ಹೀರಾಲಾಲ್ ಚೌಧರಿ ಮತ್ತು ಡಾ.ಕೆ.ಎಚ್.ಅಲಿಕುನ್ಹಿ ಅವರು ಒಳನಾಡು ಮೀನು ಸಾಕಾಣಿಕೆಯಲ್ಲಿ ಮೀನುಗಳ ಸಂತಾನೋತ್ಪತ್ತಿಯಲ್ಲಿ ಹೈಪೋಫೈಸೇಷನ್ ತಂತ್ರಜ್ಞಾನದ ಪ್ರಯೋಗ ಜುಲೈ 10, 1957ರಂದು ಯಶಸ್ವಿಯಾಯಿತು. ಅದಕ್ಕಾಗಿ ಈ ದಿನವನ್ನು ‘ರಾಷ್ಟ್ರೀಯ ಮೀನು ಸಾಕಾಣಿಕೆದಾರರ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಮೀನುಗಾರರಾದ ಸುಲೋಮನ್, ಲಕ್ಷ್ಮೀ, ಎಸ್ಟರಿನ್, ಪ್ರಶಾಂತಿ ಸೇರಿದಂತೆ ಮೀನುಗಾರರ ಕುಟುಂಬದವರು ಇದ್ದರು.