ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ್ದ ಅಂತರ ವಿಶ್ವವಿದ್ಯಾಲಯ ಮಾಧ್ಯಮೋತ್ಸವದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಕು.ಯಶಶ್ರೀ
ಕಲಬುರಗಿ;ಜು.10: ಧಾರವಾಡದ, ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ್ದ ಅಂತರ ವಿಶ್ವವಿದ್ಯಾಲಯ ಮಾಧ್ಯಮೋತ್ಸವ-2024 ರಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ವಿಶ್ವವಿದ್ಯಾಲಯಕ್ಕೆ ಹಾಗೂ ಈ ಪ್ರದೇಶಕ್ಕೆ ಕೀರ್ತಿ ತಂದಿದ್ದಾರೆ.
ಧಾರವಾಡದ, ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಜುಲೈ 08 ಮತ್ತು 09 ರಂದು ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಏಳು ವಿಶ್ವವಿದ್ಯಾಲಯಗಳ ಮತ್ತು ಐದು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಸ್ಪರ್ಧೆಗಳಲ್ಲಿ ದ್ವಿತೀಯ ಸೆಮಿಸ್ಟರ್‍ನ ವಿದ್ಯಾರ್ಥಿನಿ ಕುಮಾರಿ ಯಶಶ್ರೀ “ಆಯ್ಕೆ ಮತ್ತು ನಿರೂಪಣೆ”ಯಲ್ಲಿ ಚಿನ್ನದ ಪದಕ ಪಡೆದರು.
ನಂತರ ಕು. ಯಶಶ್ರೀ ಅವರು ದ್ವಿತೀಯ ಸೆಮಿಸ್ಟರ್‍ನ ವಿದ್ಯಾರ್ಥಿಗಳಾದ ಮಿಥುನ್ ಬಿ ಮತ್ತು ಈಶ್ವರ್ ಪೂಜಾರಿ ಅವರೊಂದಿಗೆ, ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಮಿಥುನ್ ಬಿ “ಪೀಸ್ ಟು ಕ್ಯಾಮೆರಾ” ಸ್ಪರ್ಧೆಯಲ್ಲಿ ಮತ್ತೊಂದು ಕಂಚಿನ ಪದಕವನ್ನು ಪಡೆಯುವ ಮೂಲಕ ಒಟ್ಟು ಎರಡು ಪದಕ ಗಳಿಸಿದರು. ವಿಭಾಗದ ಡಾ.ಸುನೀತಾ ಪಾಟೀಲ ಮತ್ತು ಪೆÇ್ರ. ನಿರ್ಮಲಾ ದೊರೆ ಶರಣಬಸವ ವಿಶ್ವವಿದ್ಯಾಲಯದ ತಂಡದೊಂದಿಗೆ ಇದ್ದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಉಪಕುಲಪತಿ ಡಾ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಎಸ್. ಜಿ. ಡೊಳ್ಳೆಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಂಸೆಗೈದು ಅಭಿನಂದಿಸಿದ್ದಾರೆ.