ನಕಲಿ ಅಂಕಪಟ್ಟಿ ಪ್ರಕರಣ: ದಂಡೋತಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಪ್ರಾಂಶುಪಾಲನ ಬಂಧನ
ಕಲಬುರಗಿ, ಜು.10- ನಕಲಿ ಅಂಕಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ ವಸತಿ ಕಾಲೇಜಿನ ಪ್ರಾಂಶುಪಾಲರನ್ನು ಪೆÇಲೀಸರು ಬಂಧಿಸಿದ್ದಾರೆ.
ಸಿಬಿಎಸ್‍ಇ ನಕಲಿ ಅಂಕಪಟ್ಟಿ ಸೃಷ್ಠಿಸಿದ ಆರೋಪದಲ್ಲಿ ಪ್ರಾಂಶುಪಾಲ ಆನಂದ ಬಾಬೂರಾವ್ ಕುಂಬಾರ (39) ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಪೆÇಲೀಸ್ ಪೊಲೀಸರು ವಶಕ್ಕೆ ಪಡೆದುಕೊಂಡು, ಹೆಚ್ಚಿನ ತನಿಖೆಗಾಗಿ ಕರೆದುಕೊಂಡು ಹೋಗಿದ್ದಾರೆ.
ರಾಜ್ಯ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ‘ಸಿ’ ವೃಂದದ 182 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಇಲಾಖೆ ಅರ್ಜಿ ಆಹ್ವಾನಿಸಲಾ ಗಿತ್ತು. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಮೆರಿಟ್ ಆಧಾರದಲ್ಲಿ 546 ಅಭ್ಯರ್ಥಿಗಳ ಜೊತೆ ಇಲಾಖೆ ಪತ್ರ ವ್ಯವಹಾರ ನಡೆಸಿ ಅಸಲಿ ಅಂಕಪಟ್ಟಿ ಪಡೆದುಕೊಂಡು ಪರಿಶೀಲಿಸಿದೆ. 62 ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಮತ್ತು ಸಿಬಿಎಸ್‍ಇ ನಕಲಿ ಅಂಕಪಟ್ಟಿಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇಲಾಖೆಯ ಮುಖ್ಯ ಇಂಜಿನಿಯರ್‍ರ ಅವರ ಸೂಚನೆಯ ಮೇರೆಗೆ ಸಹಾಯಕ ಅಡಳಿತ ಅಧಿಕಾರಿ ನಕಲಿ ಅಂಕಪಟ್ಟಿ ವಂಚನೆಯ ಕುರಿತು ಬೆಂಗಳೂರಿನ ಶೇಷಾದ್ರಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಲಿಸಿದ್ದರು.
ನಕಲಿ ಅಂಕಪಟ್ಟಿ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಜನ ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ, ಅವರಲ್ಲಿ 7 ಜನರು, ಪ್ರಾಂಶುಪಾಲ ಆನಂದ ಬಾಬುರಾವ ಕುಂಬಾರ್ ಅವರು, ತಮಗೆ ಸಿಬಿಎಸ್‍ಇ ನಕಲಿ ಅಂಕಪಟ್ಟಿ ನೀಡಿದ್ದು, ಅವರೊಂದಿಗೆ ಹಣಕಾಸಿನ ವ್ಯವಹಾರ ಕುಂದಿಸಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ನಕಲಿ ಅಂಕಪಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 62 ಅಭ್ಯರ್ಥಿಗಳ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಜಾಲದಲ್ಲಿ ಶಾಮಿಲಾಗಿರುವ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.