ಪ್ರಜ್ಞಾಹೀನ ಪುತ್ರ ಪ್ರಜ್ಞಾವಂತನಾದ!
ಜಿ.ಪಿ. ಘೋರ್ಪಡೆ
ತಾಳಿಕೋಟೆ:ಜು.10: ಚಿಕ್ಕ ವಯಸ್ಸಿನಲ್ಲಿಯೇ ಪ್ರಜ್ಞಾಹೀನನಂತೆ ಕಂಡು ಬಂದ ಬುದ್ದಿಮಾಂದ್ಯತನದಿಂದ ವರ್ತಿಸುತ್ತಾ ನಡೆದ ಬಾಲಕನೋರ್ವನ ಮಾತಾಪಿತರು ಚಿಂತೆಗೊಳಗಾಗಿದ್ದರಲ್ಲದೇ ಆ ಪುತ್ರನನ್ನು ತೆಗೆದುಕೊಂಡು 3 ವರ್ಷದವನಿರುವಾಗಲೇ ಕೆಲವು ಆಸ್ಪತ್ರೆಗಳಿಗೆ ತಿರುಗಿ ತಿರುಗಿ ಬೇಸತ್ತ ಮಾತಾಪಿತರು ಕೊನೆಗೆ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಹಿಂದಿನ ಪೀಠಾಧಿಪತಿಗಳಾದ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ ಮೊರೆ ಹೋಗಿದ್ದ ಕುಟುಂಭದವರು ಶ್ರೀ ವಿರಕ್ತ ಮಹಾ ಸ್ವಾಮಿಗಳು 2014 ಅಗಸ್ಟ 20 ರಂದು ಲಿಂಗೈಕ್ಯರಾದ ದಿನದಿಂದಲೇ ಈ ಬುದ್ದಿಮಾಂದ್ಯ ಬಾಲಕನೋರ್ವ ಈಗ ಬುದ್ದಿತನದಿಂದ ವರ್ತಿಸುತ್ತಾ ಸಾಗಿರುವ ಆ ಬಾಲಕ ಸಾಗಿದ್ದನ್ನು ನೋಡಿ ಮಾತಾಪಿತರು ಹಾಗೂ ಆ ಇಡೀ ಕುಟುಂಭದ ಜನತೆ ಹರ್ಷಿತರಾಗಿದ್ದೇನು ಕಡಿಮೇನಿಲ್ಲಾ.
ತಾಳಿಕೋಟೆ ಪಟ್ಟಣದ ಸುಸಿಕ್ಷೀತ ಮನೆತನದ ಹಣಮಂತ್ರಾಯ ಜಯಶ್ರೀ ಬೊಮ್ಮನಹಳ್ಳಿ ಈ ದಂಪತಿಯವರ ಪುತ್ರನೇ ಬುದ್ದಿಮಾಂದ್ಯನಾಗಿದ್ದ ಪುತ್ರ ಅರುಣಕುಮಾರ ಎಂಬವ ಇತ್ತೀಚಗೆ ಬೆಳಕಿಗೆ ಬಂದಿದೆ. ಪುತ್ರನ ವಿವರಣೆಯನ್ನು ಈ ದಂಪತಿಗಳಿಗೆ ಪತ್ರಿಕೆ ಪಡೆಯಲು ಹೋದಾಗ ಅವರ ಮಾತಾಪಿತರು ಹೇಳಿದಿಷ್ಟು.
ಸುಸಿಕ್ಷೀತ ಮನೆತನದವರಾದ ನಾವು ಪುತ್ರ ಜನ್ಮತಾಳಿದನೆಂಬ ಹರ್ಷದಲ್ಲಿ ಇಡೀ ನಮ್ಮ ಕುಟುಂಭವೇ ಹರ್ಷ ವ್ಯಕ್ತಪಡಿಸಿತ್ತು ಆದರೆ ಬರ ಬರುತ್ತಾ ಪುತ್ರ ಅರುಣಕುಮಾರ ಇತ ಬುದ್ದಿಮಾಂದ್ಯತನದಿಂದ ಹುಚ್ಚರಂತೆ ವರ್ತಿಸುತ್ತಾ ನಡೆದ ಇದರಿಂದ ನಮ್ಮ ಇಡೀ ಕುಟುಂಭವೇ ಚಿಂತೆಗೆ ಒಳಪಟ್ಟಿದ್ದೇನು ಕಡಿಮೇನಿಲ್ಲಾವೆಂದು ಈ ಪುತ್ರ ಅರುಣಕುಮಾರನ ಮಾತಾಪಿತರಾದ ಹಣಮಂತ್ರಾಯ ಹಾಗೂ ಜಯಶ್ರೀ ಅವರು ಪತ್ರಿಕೆಗೆ ತಿಳಿಸಿದ್ದಾರೆ. ಪುತ್ರ ದೊಡ್ಡವನಾಗುತ್ತಿದ್ದಂತೆ ತನ್ನ ಬುದ್ದಿಮಾಂದ್ಯತನವನ್ನೇ ಹೆಚ್ಚುತ್ತಾ ಸಾಗಿದ ಈ ವಿಷಯದಲ್ಲಿ ಯಾವುದೇ ಕಡಿಮೆ ಕಾಣಲಿಲ್ಲಾ ಅಲ್ಲಲ್ಲಿ ಕೆಲವು ಆಸ್ಪತ್ರೆಗಳಿಗೆ ಬೆಟ್ಟಿ ನೀಡಿ ವೈಧ್ಯರನ್ನು ಸಂಪರ್ಕಿಸಿ ಅವರು ತಿಳಿಸಿದಂತೆ ಔಷಧೋಪಚಾರವನ್ನೂ ಸಹ ಮಾಡಿದವಲ್ಲದೇ ಕೆಲವರು ಹೇಳಿದಂತೆ ಆತನಿಗೆ ಮಾಲಿಸ್‍ವನ್ನೂ ಕೂಡಾ ಮಾಡುವಂತಹ ಕಾರ್ಯ ನಡೆಸಿದೆವು.
ಈ ಹಿಂದಿನಿಂದ ಬಂದಂತೆ ನಮ್ಮ ಮನೆತನದ ಕುಟುಂಬದವರು ಶ್ರೀ ಖಾಸ್ಗತ ಮಠಕ್ಕೆ ಭಕ್ತಿ ಸಮರ್ಪಿಸುತ್ತಾ ಸಾಗಿದಲ್ಲದೇ ಶ್ರೀಮಠಕ್ಕೆ ಬರ ಹೋಗುವ ಪದ್ದತಿಯಂತೂ ಎಂದಿನಂತೆ ನಡೆದೆ ಇತ್ತು. ಅಂದು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ವಿರಕ್ತ ಮಹಾಸ್ವಾಮಿಗಳ ಪಾದಕ್ಕೆ ಪುತ್ರನನ್ನು ಹಾಕಿ ಈ ನಡೆದಂತಹ ಘಟನೆಯ ಕುರಿತು ಹಾಗೂ ಈ ಬುದ್ದಿಮಾಂದ್ಯ ಪುತ್ರ ಮಾಡುತ್ತಿದ್ದ ಉದ್ದಟತನದ ಕಾರ್ಯವೂ ಕೂಡಾ ಶ್ರೀಗಳಿಗೆ ತಿಳಿಸಿದೆವು. ಶ್ರೀಗಳು ನಸುನಕ್ಕು ತಮ್ಮಲ್ಲಿಯ ವಿಭೂತಿಯನ್ನು ನಮಗೆ ನೀಡಿದರಲ್ಲದೇ ಆ ವಿಭೂತಿಯನ್ನು ದಿನಾಲು ಆ ಪುತ್ರನಿಗೆ ಸ್ನಾನ ಮಾಡಿಸಿ ಹಚ್ಚುವ ಕಾರ್ಯ ಮಾಡಿ ಸರಿ ಹೋಗುತ್ತದೆ ಎಂದಾಗ ಪುತ್ರನ ಪ್ರಜ್ಞಾವಂತಿಕೆ ಬಂದರೆ ಅವನ ವಯೋಮಿತಿ ತಕ್ಕಂತೆ ತುಲಾಭಾರವನ್ನು ನೆರವೇರಿಸಿಕೊಂಡು ಆ ತುಲಾಭಾರದಲ್ಲಿ ಎಷ್ಟು ಹಣ ಕೂಡ್ರುತ್ತದೆಯೋ ಅಷ್ಟು ಹಣ ಶ್ರೀಮಠಕ್ಕೆ ಅರ್ಪಿಸುತ್ತೇವೆಂದು ಶ್ರೀ ವಿರಕ್ತ ಮಹಾಸ್ವಾಮಿಗಳ ಎದುರಿಗೆ ಮಾಡಿದಂತಹ ಮಾಗ್ದಾನ ಶ್ರೀಗಳ ಆಶಿರ್ವಾದದ ಫಲದಿಂದ ಈಗ ಪುತ್ರ ಅರುಣಕುಮಾರ ಈಗ 21 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಸುಮಾರು 47 ಕಿಲೋ ತೂಕದವ ಈಗ ಆಗಿದ್ದು ಅವನ ತೂಕದಷ್ಟೇ ಹಣವನ್ನು ಈಗೀನ ಶ್ರೀ ಖಾಸ್ಗತೇಶ್ವರ ಮಠದ ಶ್ರೀಗಳಿಗೆ ಸಿದ್ದರಾಗಿದ್ದೇವೆ.
ಯಾಕೆಂದರೆ ಪುತ್ರ ಅರುಣಕುಮಾರ ಈಗ ಪ್ರಜ್ಞಾವಂತ ಸ್ಥಿತಿಯಲ್ಲಿ ಅನ್ಯರಂತೆ ಎಲ್ಲರಂತೆ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗಿದ್ದಾನೆ ಶ್ರೀಗಳು ನೀಡಿದ ವಿಭೂತಿ ಹಚ್ಚಿದ ಮಹಿಮೆಯಿಂದಲೇ ಆತ 14 ವರ್ಷದವ ಆಗುವಷ್ಟರಲ್ಲಿಯೇ ಸಂಪೂರ್ಣ ಪ್ರಜ್ಞಾವಂತನಾಗಿದ್ದಾನೆ ಈಗಂತೂ ಮಾತಾಪಿತರನ್ನು ಪರಿಚಯಿಸುತ್ತಾನೆ ಅಕ್ಕ, ತಮ್ಮ, ಅಣ್ಣ, ತಮ್ಮ ಎಂಬುದನ್ನು ಅರೀತುಕೊಂಡು ತನ್ನ ಗೆಳೆಯರೊಂದಿಗೆ ಆಟವಾಡುತ್ತಾ ಅರಳು ಹಿರಿದಂತೆ ಪಟ ಪಟನೆ ಮಾತನಾಡುವ ಸ್ಥಿತಿಯಲ್ಲಿ ಮುಂದುವರೆದಿದ್ದಾನೆ. ಕಾರಣ ಪವಾಡ ಪುರುಷರಾದಂತಹ ಲಿಂಗೈಕ್ಯ ಶ್ರೀ ವಿರಕ್ತಮಹಾ ಸ್ವಾಮಿಗಳ ಎದುರಿಗೆ ಅಂದು ನಾವು ವಾಗ್ದಾನ ಮಾಡಿದ ನಮ್ಮ ಪುತ್ರನ 47 ಕೆಜಿ ತೂಕದ ತುಲಾಭಾರವನ್ನು ನೆರವೇರಿಸಿ ಶ್ರೀಮಠಕ್ಕೆ ಅರ್ಪಿಸಲು ಬರಲಿರುವ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ದಿನದಂದು ಗೋಪಾಲ ಕಾವಲಿ ಒಡೆಯುವ ದಿನದಂದೇ ಸಾಯಂಕಾಲ 7 ಗಂಟೆಗೆ ಶ್ರೀಮಠದಲ್ಲಿ ಈಗೀನ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ದೇವರಿಗೆ ಅರ್ಪಿಸುವಂತಹ ಕಾರ್ಯಕ್ರಮವನ್ನು ಇಡೀ ನಮ್ಮ ಕುಟುಂಭದವರೇ ನೆರವೇರಿಸಲು ಸಿದ್ದರಾಗಿದ್ದೇವೆಂದು ಪುತ್ರ ಅರುಣಕುಮಾರನ ಮಾತಾಪಿತರಾದ ಹಣಮಂತ್ರಾಯ ಹಾಗೂ ಜಯಶ್ರೀ ಈ ದಂಪತಿಗಳು ತಿಳಿಸಿದ್ದಾರೆ.
ಇದಕ್ಕೆ ಸಹಮತಿಸಿದ ಶ್ರೀಮಠದ ಪೀಠಾಧಿಪತಿಗಳು ಬರಲಿರುವ ದಿನಾಂಕ 18 ರಂದು ಭಕ್ತರು ಸಮರ್ಪಿಸುತ್ತಿರುವ ಅವರು ವಾಗ್ದಾನ ಮಾಡಿದ ತುಲಾಭಾರ ಕಾಣಿಕೆಯನ್ನು ಸ್ವಿಕರಿಸಿ ಶ್ರೀಮಠಕ್ಕೆ ಅರ್ಪಿಸುತ್ತೇನೆಂದು ಶ್ರೀಗಳು ಹೇಳಿದರು.