ರಟಕಲ್‍ಶ್ರೀಗಳ ಅಗಲಿಕೆಗೆ ಸಿದ್ದಲಿಂಗಶ್ರೀಗಳ ಶೋಕ
ತಾಳಿಕೋಟೆ:ಜು.10: ಕಾಳಗಿ ತಾಲೂಕಿನ ರಟಕಲ್ ಶ್ರೀ ಮುರುಘೇಂದ್ರ ಶಿವಯೋಗಿಗಳ ವಿರಕ್ತಮಠದ ಶ್ರೀ ಸಿದ್ದರಾಮಸ್ವಾಮಿಗಳು ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾಗಿರುವದು ಭಕ್ತಸಮೂದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ತಿಳಿಸಿದ್ದಾರೆ.
ರÀಟಕಲ್‍ದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಕಿರಿಯ ವಯಸ್ಸಿನಲ್ಲಿಯೇ ಅಪಾರವಾದ ಭಕ್ತ ಸಮೂಹವನ್ನು ಹೊಂದಿದ್ದರಲ್ಲದೇ ಧಾರ್ಮಿಕ, ಪುರಾಣ ಪ್ರವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವದರೊಂದಿಗೆ ದಾಸೋಹದ ಸೇವೆಯ ಮೂಲಕ ಸಮಾಜದಲ್ಲಿ ಆದ್ಯಾತ್ಮೀಕ, ಧಾರ್ಮಿಕತೆ, ಸಾಮರಸ್ಯೆ ಬೆಳೆಸುತ್ತಾ ಸಾಗಿದ್ದರು. ಸೋಮವಾರರಂದು ಶ್ರೀಗಳು ತೀವ್ರ ಹೃದಯಘಾತವಾಗಿ ಲಿಂಗೈಕ್ಯೆರಾದ ಸುದ್ದಿ ಭಕ್ತ ಸಮೂಹಕ್ಕೆ ಬರಸಿಡಿಲು ಬಡಿದಂತಾಗಿದೆ ಎಂದು ಶ್ರೀಗಳು ತಿಳಿಸಿದ್ದಾರಲ್ಲದೇ ಸಿದ್ದರಾಮಶ್ರೀಗಳ ಅಗಲಿಕೆಯ ನೋವನ್ನು ಭಕ್ತಸಮೂಹಕ್ಕೆ ಸಹಿಸುವ ಶಕ್ತಿ ಭಗವಂತನು ಹಾಗೂ ಶ್ರೀ ಮುರುಘೇಂದ್ರ ಶಿವಯೋಗಿಗಳು ದಯಪಾಲಿಸಲಿ ಎಂದು ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.