ಪರಿಸರ ಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ
ಕಲಬುರಗಿ:ಜು.10:ನಮ್ಮದೇಶದಲ್ಲಿ ಬಹುತೇಕವಾಗಿ ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಅನಿಲವನ್ನುಇಂಧನವನ್ನಾಗಿ ಬಳಸಲಾಗುತ್ತಿದ್ದು, ಇವುಗಳು ಮುಗಿದುಹೋಗುವ ಮತ್ತು ಪರಿಸರ ಮಾಲಿನ್ಯಉಂಟುಮಾಡುತ್ತವೆ. ಇವುಗಳಿಗೆ ಪರ್ಯಾಯವಾಗಿವಾಗಿ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್, ಪರಮಾಣು ಶಕ್ತಿ,ಜೈವಿಕಡೀಸೆಲ್, ಭೂಉಷ್ಣಶಕ್ತಿಗಳಂತಹ ಇನ್ನಿತರ ಪರಿಸರಸ್ನೇಹಿ ಇಂಧನಗಳಾಗಿದ್ದು, ಇವುಗಳ ಮೂಲಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಸಿ, ಪತ್ತೆ ಹಚ್ಚಿ, ಅವುಗಳ ಬಳಕೆ ಮಾಡುವುದು ಪ್ರಸ್ತುತಅಗತ್ಯವಾಗಿದೆಎಂದುಅರ್ಥಶಾಸ್ತ್ರಉಪನ್ಯಾಸಕಎಚ್.ಬಿ.ಪಾಟೀಲ ಹೇಳಿದರು.
ನಗರ ಸಮೀಪದಝಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಬುಧವಾರ ಏರ್ಪಡಿಸಿದ್ದ ‘ಜಾಗತಿಕಇಂಧನಸ್ವಾತಂತ್ರ್ಯ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇರಾಷ್ಟ್ರದಆರ್ಥಿಕ ಪ್ರಗತಿ, ಆ ರಾಷ್ಟ್ರದಲ್ಲಿ ಲಭ್ಯವಿರುವಇಂಧನದ ಮೂಲಗಳನ್ನು ಅವಲಂಬಿಸಿದೆ. ಇಂಧನವಿಲ್ಲದಆರ್ಥಿಕ ಪ್ರಗತಿ ನಾವು ಊಹೆ ಮಾಡಲು ಸಾಧ್ಯವಿಲ್ಲ. ಇಂತಹಅಮೂಲ್ಯವಾದ ಸಂಪತ್ತುಇಂದು ವಿವಿಧ ಕಾರಣಗಳಿಂದ ಬರಿದಾಗುತ್ತಿರುವುದುರಾಷ್ಟ್ರದ ಭವಿಷ್ಯದಅಭಿವೃದ್ಧಿಯದೃಷ್ಟಿಯಿಂದತೊಂದರೆಯಾಗಿದೆ. ಇಂಧನದ ಸಂರಕ್ಷಣೆ ಮಾಡಬೇಕಾಗಿದೆ. ಪರ್ಯಾಯ ಇಂಧನಗಳ ವ್ಯಾಪಕ ಬಳಕೆ, ಇಂಧನದ ಸದುಪಯೋಗದ ಮೂಲಕ ದೇಶಇಂಧನದಲ್ಲಿ ಸ್ವಾವಲಂಬನೆ ಸಾಧಿಸುದಾಗಿದೆಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪಗಣಮುಖಿ, ನಿವತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಎಸ್.ಡಿ.ಎಂ.ಸಿಅಧ್ಯಕ್ಷ ಸುರೇಶ ಮಾಂಗ, ಶಿಕ್ಷಕರಾದ ಶಾರದಾಬಾಯಿಲಂಡನಕರ್, ಶಾಂತಾಬಾಯಿ ಹಿರೇಮಠ, ಈರವ್ವ ಹಿರೇಕೆನ್ನೂರ್, ಸಿಬ್ಬಂದಿಗಳಾದ ಸಂಗೀತಾಕಟ್ಟಿಮನಿ, ನಿಂಗ, ಪೂಜಾರಿ,ಶಿಲ್ಪಾ ನಡವಿನಕರ್, ಭಾರತಿಬಾಯಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.