ಬಂಜಾರ ಸಮುದಾಯದ ಅಭಿವೃದ್ದಿಗೆ ಶ್ರಮಿಸುವೆ :-ಜಯದೇವ ನಾಯ್ಕ

ಸಂಜೆವಾಣಿ ವಾರ್ತೆ
ಜಗಳೂರು.ಜು.೯ :- ದಶಕಗಳ ಸಾಮಾಜಿಕ,ರಾಜಕೀಯ ಸೇವೆಯನ್ನು ಗುರುತಿಸಿ ಸರ್ಕಾರ ನಿಗಮಮಂಡಳಿಯಲ್ಲಿ ನನಗೆ ಸ್ಥಾನಮಾನ ನೀಡಿದ್ದು.ಅರ್ಹರಿಗೆ ಸೌಲಭ್ಯ ಒದಗಿ ಸುವ ಮೂಲಕ ಬಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವೆ ಎಂದು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಭರವಸೆ ನೀಡಿದರು.ಪಟ್ಟಣದ ಜೆಎಂಎಫ್ ಸಿ ಮತ್ತು ಸಿವಿಲ್ ನ್ಯಾಯಾಲಯ ದ ಸಭಾಂಗಣದಲ್ಲಿ ತಾಲೂಕು ವಕೀಲರ ಸಂಘದಿಂದ ನೂತನ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ವಕೀಲ ವೃತ್ತಿಯಿಂದ ಆರಂಭವಾದ ನನ್ನ ಜೀವನ ಸ್ಥಳೀಯವಾಗಿ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥ ಗೊಳಿಸಿ ನ್ಯಾಯ ಕಲ್ಪಿಸಿರುವೆ.ವಕೀಲ ವೃತ್ತಿಯ ಜೊತೆಗೆ ಸಮಾಜವಾದಿ ಸಿದ್ದಾಂತದೊಂದಿಗೆ 1970 ರಲ್ಲಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆಗೊಂಡ ನಾನು ಹಲವಾರು ಬಾರಿ ರಾಜಕೀಯ ಏಳು ಬೀಳು ಕಂಡು ವಿಧಾನಸಭೆ,ಸಚಿವಸ್ಥಾನಗಳಿಂದ ವಂಚಿತನಾದೆ.ಅದರೂ ಧೃತಿಗೆಡದೆ 90ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡು ಪಕ್ಷನಿಷ್ಠೆ,ಪ್ರಾಮಾಣಿಕತೆ,ನಿಸ್ವಾರ್ಥ ಸೇವೆಗೈದ ಫಲವಾಗಿ ಜಿಲ್ಲೆಯ ಸಂಸದರ,ಸಚಿವರ, ಶಾಸಕರುಗಳ ಸಹಕಾರ ಹಾಗೂ ಬಂಜಾರ ಸಮುದಾಯದ ಮುಖಂಡ ರುಗಳ ಬೆಂಬಲದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮನಗಂಡು ನನ್ನನ್ನು ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷನನ್ನಾಗಿ ಆಯ್ಕೆಗೊಳಿಸಿದ್ದಕ್ಕೆ ಅಭಿನಂದನೆಗಳು ಎಂದರು.ತಾಲೂಕಿನಲ್ಲಿ ನಾನು ವಕೀಲನಾಗಿ ಸೇವೆಗೈಯುತ್ತಿದ್ದ ವೇಳೆ ಹಲವಾರು ವಕೀಲ ಸ್ನೇಹತ್ವದ ಜೊತೆಗೆ ಹೊರಾಟ ನಡೆಸಿದ್ದರ ಪರಿಣಾಮ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಕೋರ್ಟ್ ನಿರ್ಮಾಣಗೊಂಡಿದೆ.ಹಲ ವಾರು ಪ್ರಕರಣಗಳ ಕಲಾಪಗಳು ಸ್ಥಳೀಯ ಕೋರ್ಟ್ ನಲ್ಲಿ ಇತ್ಯರ್ಥಗೊಳ್ಳಲು,ಬಡಜನರಿಗೆ ಅನುಕೂಲವಾಗಿದೆ ಎಂದರು.ವಕೀಲ ಸಂಘದ ತಾಲೂಕು ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್ ಮಾತನಾಡಿ,ಬರಪೀಡಿತ ತಾಲೂಕಿನಲ್ಲಿ ವಕೀಲ ವೃತ್ತಿಯಿಂದ ಆಗಮಿಸಿರುವವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಲಭಿಸಿರುವುದು ವಕೀಲರ ವೃತ್ತಿ ಗೌರವ ಹಾಗೂ ಸ್ಫೂರ್ತಿ,ಕಾಂಗ್ರೆಸ್ ಪಕ್ಷದ ಆಡಳಿತ ಸಮಾನತೆ, ಸಾಮಾಜಿಕ ನ್ಯಾಯ ಕಲ್ಪಿಸಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ಮಂಜುನಾಥ್,ತಾಲೂಕು ವಕೀಲರ ಸಂಘದ ಕಾರ್ಯ ದರ್ಶಿ ಎ.ಕೆ.ಪರುಸಪ್ಪ,ವಕೀಲರಾದ ಪರಮೇಶ್ವರಪ್ಪ, ಕೆ.ಎಂ.ಬಸವರಾಜಪ್ಪ,ರುದ್ರೇಶ್,ಡಿ.ವಿ.ನಾಗಪ್ಪ, ಬಸವರಾ ಜಪ್ಪ,ಓಂಕಾರೇಶ್ವರ,ಪಟೇಲ್,ಲಕ್ಷ್ಮಣ್,ಆರ್. ಓಬಳೇಶ್, ಸುನಿಲ್,ನಾಗೇಶ್,ಸೇರಿದಂತೆ ಇದ್ದರು.