ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ: ಮೂಲಗೆ
ಕಲಬುರಗಿ:ಜು.10: ಸುಂದರವಾದ ಪ್ರಕೃತಿಯನ್ನು ರಕ್ಷಿಸಿದರೆ ಮಾನವನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಹಾಗಾಗಿ ಪ್ರತಿ ಮನೆಯಲ್ಲಿ ಒಂದೊಂದು ಗಿಡಗಳನ್ನು ನೆಡುವುದರೊಂದಿಗೆ ಹಾಗೂ ಪ್ರತಿ ಶಾಲೆಯಲ್ಲಿ ಮಕ್ಕಳು ಸಸಿ ನೆಟ್ಟು ಪ್ರಕೃತಿಯನ್ನು ರಕ್ಷಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ ಹೇಳಿದರು.
ತಾಲೂಕಿನ ಖಣದಾಳ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗಿಡ ಬೆಳೆಸಿ ನಾಡು ಉಳಿಸಬೇಕೆಂದು ಹೇಳಿದರು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಪ್ರಸ್ತುತ ನಾವುಗಳೆಲ್ಲರೂ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದೇವೆ. ಹಾಗಾಗಿ ಅತಿ ಹೆಚ್ಚಿನ ಗಿಡಗಳನ್ನು ನೆಡುವುದರೊಂದಿಗೆ ಆಮ್ಲಜನಕದ ಕೊರತೆಯನ್ನು ದೂರ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಪವನಕುಮಾರ ಬಿ ವಳಕೇರಿ ಅವರು, ಮುಂದಿನ ದಿನಗಳಲ್ಲಿ ಕಲ್ಬುರ್ಗಿ ಜಿಲ್ಲೆಯು ಮತ್ತೊಂದು ಮಲೆನಾಡಾಗಿ ಪರಿವರ್ತಿಸಬೇಕಾಗಿದೆ, ಕೇವಲ ಪ್ರತಿ ಶಾಲಾ ಕಾಲೇಜುಗಳಲ್ಲಿ ಗಿಡ ನೆಡುವುದು ಮುಖ್ಯ ಕಾರ್ಯವಾಗದೆ ಅವುಗಳ ರಕ್ಷಣೆ ಕೂಡ ಮಾಡಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆ ಮೇಲೆ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷೇ ಅನಿತಾ ಪವನಕುಮಾರ್ ವಳಕೇರಿ, ಚಂದ್ರಕಾಂತ ಕೆ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ ನಂದಿಕೂರ್, ಸಂದೀಪ ಗುತ್ತೇದಾರ ಪಿ ಡಿ ಓ ನಂದಿಕೂರ್, ಕುಪ್ಪಣ್ಣ ವರ್ಮಾ, ಶ್ರೀಕಾಂತ ಉಳ್ಳಿ ಸದ್ಯಸರು ಗ್ರಾ ಪಂ ನಂದಿಕೂರ್,ಶಖಿಲ ಉತ್ತನಾಳ ಮಹೇಶ ಹೂಗಾರ,ಖಣದಾಳ ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.