ಕಿಶೋರಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೧೦; ಕಿಶೋರಿಯರು ಅಪೌಷ್ಟಿಕತೆ, ರಕ್ತಹೀನತೆ, ಥೈರಾಯಿಡ್, ಕಣ್ಣಿನ ದೃಷ್ಟಿ ದೋಷ, ಸ್ವಂಟ ನೋವು, ತಲೆನೋವುಗಳಂತಹ ಹಲವಾರು ಸಮಸ್ಯೆಗಳಿಂದ ಬಾಲಕಿಯರು (ಕಿಶೋರಿಯರು)ಬಳಲುತ್ತಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀಕಲಾ ಹೇಳಿದರು.ಐನಳ್ಳಿ ಕುರುಬರಹಳ್ಳಿ ಗ್ರಾಮದಲ್ಲಿ  ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ.ವಿಮುಕ್ತಿ ವಿದ್ಯಾಸಂಸ್ಥೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಐನಳ್ಳಿ ಕುರುಬರಹಟ್ಟಿ, ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಿಶೋರಿಯರ ಆರೋಗ್ಯ ಜಾಗೃತಿ ಹಾಗೂ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಬಾಲಕಿಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾದರೆ ಪೌಷ್ಟಿಕ ಆಹಾರ ಸೇವಿಸುವ ಅಗತ್ಯವಿದ್ದು, ಹಾಗೆಯೇ ಪ್ರತಿನಿತ್ಯ ದೇಹಕ್ಕೆ ಬೇಕಾಗುವಷ್ಟು ಶುದ್ಧ ಕುಡಿಯುವ ನೀರನ್ನು ಬಳಸುವ ಅಗತ್ಯವಿದೆ ಎಂದು ಹೇಳಿದರು.ಕಿಶೋರಿಯರ ಆರೋಗ್ಯ ಸಮಸ್ಯೆಗೆ ಧ್ಯಾನ, ಯೋಗದ ಜೊತೆಗೆ ನೆಮ್ಮದಿಯಾಗಿರಲು ಪ್ರಯತ್ನಿಸಬೇಕೆಂದು ಡಾ.ಶ್ರೀಕಲಾ ಹೇಳಿದರು.ಕಿಶೋರಿಯರು ಬೆನ್ನು ನೋವು, ರಕ್ತಹೀನತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾದರೆ, ಕಾಲಕಾಲಕ್ಕೆ ಆರೋಗ್ಯ ತಪಾಸಣೆಯ ಅಗತ್ಯವಿದೆ ಎಂದು ಹೇಳಿದರು. ಕಿರಿಯ ವಯಸ್ಸಿನಲ್ಲಿನ ಕಿಶೋರಿಯರು ಮುಜುಗರಕ್ಕೆ ಒಳಗಾಗಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಳ್ಳದೇ ಅನಾರೋಗ್ಯ ಪೀಡಿತರಾಗುವುದೇ ಹೆಚ್ಚು. ಆದ್ದರಿಂದ ಕಿಶೋರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ವಹಿಸಬೇಕೆಂದು ಸಲಹೆ ನೀಡಿದರು.ಸಮಾರಂಭದಲ್ಲಿ ಸಂಚಾರಿ ವೈದ್ಯಾಧಿಕಾರಿ ಡಾ.ಮಂಜರಿ, ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಲಕ್ಷಿö್ಮÃದೇವಿ, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಉಮೇಶ್, ಶಂಕರಮ್ಮ, ಸುಧಾಮಣಿ, ಮಂಜಪ್ಪ, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ, ನಾಗರತ್ನ, ಬಿಬಿಜಾನ್, ಕುಮಾರ್ ಹೆಚ್., ಅರಣ್ಯಸಾಗರ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.ಈ ಸಭೆಯಲ್ಲಿ ಐನಳ್ಳಿ ಕುರುಬರಹಳ್ಳಿಯ ಕಿಶೋರಿಯರು ಸೇರಿದಂತೆ ಸುತ್ತಮುತ್ತಲು ಗ್ರಾಮದ ಕಿಶೋರಿಯರು ಭಾಗವಹಿಸಿದ್ದರು.