ಡೆಂಗ್ಯು ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ
ಶಿರಹಟ್ಟಿ,ಜು10: ತಾಲೂಕಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿದರೆ ಡೆಂಗ್ಯು ನಿಯಂತ್ರಣಕ್ಕೆ ಬರಲಿಕ್ಕೆ ಸಾಧ್ಯವಿದೆ ಎಂದು ತಾಲೂಕ ಆರೋಗ್ಯಾಧಿಕಾರಿ ಡಾ. ಸುಭಾಸ ದಾಯಗೊಂಡ ಹೇಳಿದರು.
ಅವರು ಪಟ್ಟಣಧ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಜರುಗಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಹಲವಾರು ಇಲಾಖೆ ಸಹಯೋಗದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಕುರಿತು ತಾಲೂಕ ಮಟ್ಟದ ಮುಂಜಾಗೃತ ಸಮಿತಿ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ ಈ ವರೆಗೆ 57 ಪ್ರಕರಣಗಳು ಧೃಡಪಟ್ಟಿದ್ದು, ಶಿರಹಟ್ಟಿ ತಾಲೂಕಿನಲ್ಲಿ 2 ಶಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, ಡೆಂಗ್ಯು ಬಗ್ಗೆ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತರು ಮನೆ ಮನೆಗೆ ಶಾಲೆ, ಹಾಸ್ಟೇಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಡೆಂಗ್ಯು ಜ್ವರ ಈಡಿಸ್ ಇಜಿಪ್ಟೈ ಸೊಳ್ಳೆ ಕಚ್ಚುವುದರಿಂದ ರೋಗ ಬರುತ್ತಿದ್ದು, ಇದು ಮುಂಜಾನೆ ಮತ್ತು ಸಾಯಂಕಾಲ ಕಚ್ಚುವಿಕೆಯಿಂದ ಬರುತ್ತದೆ. ಇದರಿಂದ ಜ್ವರಬಾಧೆ, ವಿಪರೀತ ತೆಲೆನೋವು, ಕಣ್ಣುಗಳ ಹಿಂಬಾಗದಲ್ಲಿ ನೋವುಬಾಯಿ ಮೂಗು ವಸಡುಗಳಲ್ಲಿ ರಕ್ತ ಸ್ರಾವ ಇವು ರೋಗದ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಕರ್ಪಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ತಹಶೀಲ್ದಾರ ಅನೀಲ ಬಡಿಗೇರ ಮಾತನಾಡಿ, ಡೆಂಗ್ಯು ಜ್ವರಕ್ಕೆ ಕಾರಣವಾಗುವ ಸೋಳ್ಳೆಗಳ ಉತ್ಪತ್ತಿಯಾಗದಂತೆ ಸಾರ್ವಜನಿಕರು ನಿಗಾವಹಿಸುವುದು ಅಗತ್ಯವಿದೆ. ಸಾರ್ವಜನಿಕರು ಮಕ್ಕಳ ಹಿತದೃಷ್ಠಿಯಿಂದ ಬಸ್ ನಿಲ್ದಾಣ, ಅಂಗನವಾಡಿ ಕೇಂಧ್ರ, ಶಾಲೇ ಹಾಗೂ ವಸತಿ ನಿಲಯಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕೃಷಿ ಹೊಂಡಗಳು ಮುಂತಾದವುಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳವುದು ಅಗತ್ಯವಿದೆ ಎಲ್ಲ ಅಧಿಕಾರಿಗಳು ಈನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಡೆಂಗ್ಯು ಹರಡದಂತೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಎಸ್.ಬಿ ಕುಲಕರ್ಣಿ, ಬಿಇಒಎಚ್.ಎನ.ನಾಯಕ, ಸಿಡಿಪಿಒಮೃತ್ಯುಂಜಯ ಗುಡ್ಡದಾನ್ವೇರಿ, ಪಪಂ ಮಉಖ್ಯಾಧಿಕಾರಿ ಆರ್.ಎಸ್. ಕಟ್ಟಿಮನಿ, ಎಚ್.ಎ.ಕೊಂಡಿಕೊಪ್ಪ, ಗೀತಾ ಕಾಂಬಳೆ, ಎಮ್.ಆರ್. ಹುರಳಿಕುಪ್ಪಿ ಮುಂತಾಧವರು ಉಪಸ್ಥಿತರಿದ್ದರು.