ಅವಿರೋಧ ಆಯ್ಕೆ
ಮುಂಡಗೋಡ,ಜು.9: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಉಪಾಧ್ಯಕ್ಷರಾಗಿ ಪ್ರದೀಪ ಚವ್ಹಾಣ ಅವಿರೋಧ ಆಯ್ಕೆಯಾಗಿದ್ದಾರೆ.
13 ಸದಸ್ಯ ಬಲದ ಚವಡಳ್ಳಿ ಗ್ರಾ.ಪಂ ನ ಹಿಂದಿನ ಉಪಾಧ್ಯಕ್ಷ ಸುನೀಲ ರಾಥೋಡ ರಾಜೀನಾಮೆ ನೀಡಿದ ಹಿನ್ನೆಲೆ ತೆರವಾಗಿದ್ದ ಈ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಪಡಿಸಲಾಗಿತ್ತು. ಪ್ರದೀಪ ಚವ್ಹಾನ ಮತ್ತು ಲೋಕಪ್ಪ ಕೋಣನಕೇರಿ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಕ್ಷಣದಲ್ಲಿ ಲೋಕಪ್ಪ ಕೋಣನಕೇರಿ ನಾಮಪತ್ರ ಹಿಂಪಡೆದಿದ್ದರಿಂದ ಪ್ರದೀಪ ಚವ್ಹಾಣ ಅವಿರೋಧ ಆಯ್ಕೆಯಾದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್ ಕುಲಕರ್ಣಿ ಹಾಗೂ ತಹಸೀಲ್ದಾರ ಕಛೇರಿಯ ನವೀನ ಕುಲಕರ್ಣಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಸಿರಾಬಿ ಮೌಲಾಸಾಬ್ ನದಾಫ್, ವೈ ಪಿ ಪಾಟೀಲ್, ವೈ ಪಿ ಭುಜಂಗಿ, ಪರಶುರಾಮ್ ತಹಸೀಲ್ದಾರ್, ಪಿ ಜಿ ಪಾಟೀಲ್, ಅರ್ಜುನಪ್ಪ ಸಿಗ್ನಳ್ಳಿ, ಶಂಕರ್ ಒಣಿಕೇರಿ, ರಾಮಣ್ಣ ವಾಲ್ಮೀಕಿ, ಪರಶುರಾಮ್ ಕುರಿಯವರು ಗೋಪಾಲ್ ಕೊಪ್ಪದ್, ಪಾಂಡುರಂಗ ಬದ್ರಾಪುರ, ರವಿ ವಾಲ್ಮೀಕಿ, ಎಲ್ಲಪ್ಪ ಕರಡಿ, ಮುನೀರ್ ಖಾನ್ ಪಠಾಣ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಮುಂತಾದವರಿದ್ದರು,