ಹಣ ಬಿಡುಗಡೆಗೆ ಒತ್ತಾಯಿಸಿ ಮನವಿ
ಗುಳೇದಗುಡ್ಡ,ಜು.9: ಕಳೆದ ನಾಲ್ಕು ತಿಂಗಳಿನಿಂದ ಬಿಡುಗಡೆಯಾಗದೇ ಇರುವ ನ್ಯಾಯಬೆಲೆ ಅಂಗಡಿಕಾರರ ಕಮೀಷನ್ ಕೂಡಲೇ ಬಿಡುಗಡೆ ಮಾಡುವಂತೆ ಅಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಗುಳೇದಗುಡ್ಡ ಘಟಕದ ವತಿಯಿಂದ ಉಪತಹಶೀಲ್ದಾರ ವೀರೇಶ ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ನ್ಯಾಯಬೆಲೆ ಅಂಗಡಿಕಾರರು ಸರಕಾರ ನಿಗದಿಪಡಿಸಿದಂತೆ ಆಹಾರಧಾನ್ಯವನ್ನು ವಿತರಣೆ ಮಾಡುತ್ತಾ ಬಂದಿದ್ದೇವೆ. ಆದರೆ ನಮಗೆ ಕಮೀಷನ್ ಹಣ ಸರಿಯಾಗಿ ಸಂದಾಯವಾಗುತ್ತಿಲ್ಲ. ಕಳೆದ ಮಾರ್ಚ ತಿಂಗಳಿನಿಂದ ಜೂನ್ ತಿಂಗಳವರೆಗೆ ಕಮೀಷನ್ ಹಣ ಬಿಡುಗಡೆಯಾಗಿಲ್ಲ. ಅಲ್ಲದೇ ಸುಮಾರು ಐದು ವರ್ಷಗಳಿಂದ ಇಕೆವೈಸಿ ಹಣವನ್ನು ನೀಡಿಲ್ಲ. ಇದರಿಂದ ನ್ಯಾಯಬೆಲೆ ಅಂಗಡಿ ನಿರ್ವಹಣೆ ಕಷ್ಟವಾಗಿದೆ. ಕೂಡಲೇ ಕಮೀಷನ್ ಹಾಗೂ ಇಕೆವೈಸಿ ಹಣ ನ್ಯಾಯಬೆಲೆ ಅಂಗಡಿಕಾರರಿಗೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಕುಮಾರ ಅಂಗಡಿ, ಉಪಾಧ್ಯಕ್ಷ ವೀರೇಶ ಮುರನಾಳ, ಕಾರ್ಯದರ್ಶಿ ರಾಜು ಹುಳಬುತ್ತಿ, ಹನಮಂತ ಕೌಜಗನೂರ, ಮನೋಹರ ಕೋಪರ್ಡೆ, ಹನಮಂತ ಛಬ್ಬಿ, ಮಹಾಂತೇಶ ಸಿಂದಗಿ, ಪ್ರದೀಪ ಹುಲ್ಲೂರ, ಕುಮಾರ ಗಂಗಾವತಿ, ಚೇತನ್ ಜಾನಿಕಲ್, ಪ್ರಕಾಶ ಪಾತ್ರೋಟಿ, ಹೊನ್ನಪ್ಪ ಕೊಳಗದ, ಗೌಡಪ್ಪ ಆಡಗಲ್ಲ, ಹನಮಂತ ಯಂಡಿಗೇರಿ, ಎಂ.ಎ. ಮುಲ್ಲಾ, ಲಕ್ಷ್ಮಣ ಜೂಳಿ, ದಾವಲ ಕಲಬುರ್ಗಿ, ಶ್ರೀಶೈಲ ಗಂಗಶೆಟ್ಟಿ, ಮಲ್ಲಪ್ಪ ಮುರನಾಳ, ವಿಠ್ಠಲ ಹಾದಿಮನಿ, ಜಯಶ್ರೀ ಬರಹಾಣಪೂರ, ಶಾರದಾ ಹೊಸಮನಿ ಮತ್ತಿತರರು ಇದ್ದರು.