ಮೂಲಭೂತ ಸೌಕರ್ಯ ಒದಗಿಸುವಂತೆ ಮನವಿ
ಶಿರಹಟ್ಟಿ,ಜು10: ಪಟ್ಟಣಧ ಪಟ್ಟಣ ಪಂಚಾಯತ ವ್ಯಾಪ್ತಿಯ ವಾರ್ಡ ನಂ 18ರ ಶಿವಲಿಂಗಪ್ಪ ಬಡಾವಣೆಗೆ ಮೂಲ ಭೂತ ಸೌಕರ್ಯ ಇಲ್ಲದೇ ಹತ್ತಾರು ವರ್ಷಗಳೇ ಗತಿಸಿವೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹಿತಯ ಯಾವುದೇ ಕ್ರಮ ಜರುಗಿಸದೇ ಇರುವುದು ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಮುಖಂಡ ಅಕ್ಬರಸಾಬ ಯಾದಗೇರಿ, ಒತ್ತಾಯಿಸಿದ್ದಾರೆ
ಅವರು ಪಟ್ಟಣ ಪಂಚಾಯತಿವ್ಯಾಪ್ತಿಯ ವಾನಂ 18ರ ಶಿವಲಿಂಗಪ್ಪ ಬಡಾವಣೆಗೆ ರಸ್ತೆ ಗಟಾರು , ಒಟ್ಟಾರೆ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಆಗ್ರಹಿಸಿ ಪಪಂ ಮುಖ್ಯಾಧಿಕಾರಿ ಮನವಿ ಸಲ್ಲಿಸಿದರು.
ಬಡಾವಣೆಯಲ್ಲಿನ ಜನ ಸುಗಮವಾಗಿ ಮನೆ ಸೇರುವುದು ದುಸ್ತರವಾಗಿದೆ. ಸುಮಾರು ವರ್ಷಗಳಿಂದ ರಸ್ತೆ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿದ್ದರೂ ಸಹಿತವಾಗಿ ಪಪಂ ಗಮನ ಹರಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶಿವಲಿಂಗಪ್ಪ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗದೇ ಹೋದರೆ ಪ್ರತಿಭಟನೆಯನ್ನು ಕೈಗೊಳ್ಳಲಾಗುದುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮುತ್ತುರಾಜ ಭಾವಿಮನಿ, ಬಸವರಾಜ ಗಾಮನಗಟ್ಟಿ, ರಫೀಕ ಢಾಲಾಯತ, ವೆಂಕಟೇಶ ಬೇದರೆ, ಫಕ್ಕಿರೇಶ ಕಪ್ಪತ್ತನವರ, ಶ್ರೀನಿವಾಸ ಕಪಟಕರ, ಹೊನ್ನಪ್ಪ ಗೋಳಪ್ಪನವರ, ಮುಂತಾದವರು ಉಪಸ್ಥಿತರಿದ್ದರು.