ಎಗ್ಗಿಲ್ಲದೆ ಸಾಗಿದ ಅಕ್ರಮ ಮರಳುಗಾರಿಕೆಗೆ ಶೇಖರಿಸಿದ ಮರಳು ಕಾಣೆಯಾಗುತ್ತಿದೆ
ಸುರೇಶ್ ಬಿಜನಳ್ಳಿ
ಸೇಡಂ, ಜು, 10: ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕಲಾಗುವುದು ಅದೇ ಯಾವಾಗ ಎಂಬ ಈ ರೀತಿಯ ಪ್ರಶ್ನೆಗಳು ತಾಲೂಕಿನಲ್ಲಿ ಜನರಲ್ಲಿ ಕೇಳಿ ಬರಲಾರಂಭಿಸಿದೆ.
ಈ ಕ್ಷೇತ್ರಗಳಿಂದ ಗೆದ್ದ ಶಾಸಕರು ರಾಜ್ಯ ಸಂಪುಟದಲ್ಲಿ ಅನೇಕ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದರೂ ಸಹ ಅಕ್ರಮ ಮರಳು ಸಾಗಾಟ ತಡೆಯುವ ಯಾವ ಧೈರ್ಯವೂ ತೋರದೆ ಇರುವುದು ಪ್ರಕೃತಿ ಪ್ರಿಯರಲ್ಲಿ ಕೋಪ ಹುಟ್ಟುವಂತೆ ಮಾಡಿದೆ ಎಂದು ಜನ ಹಿತ ಹೋರಾಟ ಸಮಿತಿ ಹೋರಾಟಗಾರ ಶಿವಕುಮಾರ್ ಅಪ್ಪಾಜಿ ನಿಡಗುಂದಾ ಬೇಸರ ವ್ಯಕ್ತಪಡಿಸಿದ್ದಾರೆ. ತಾಲೂಕಿನ ನೀಲಹಳ್ಳಿ ಪಂಚಾಯತ್ ವ್ಯಾಪ್ತಿಯ ಅರೆಬೊಮ್ನಳ್ಳಿ ತೆಲ್ಕೂರ್ ಹಾಬಾಳ,ಸೇರಿದಂತೆ ಸೇಡಂ ಮತಕ್ಷೇತ್ರಕ್ಕೆ ಒಳಪಡುವ ಪೆÇೀತಂಗಲ ಹೀಗೆ ಅನೇಕ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ಸಕ್ರಮಕ್ಕೂ ಸೆಡ್ಡು ಹೊಡೆವ ರೀತಿಯಲ್ಲಿ ನಡೆದಿದೆ. ಕೆಲವೆಡೆ ಸರಕಾರ ಮರಳು ಸಾಗಾಟಕ್ಕೆ ಅನುಮತಿ ನೀಡಿದ್ದರೂ ಸಹ ಅಕ್ರಮಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದು ಗಮನಾರ್ಹ. ಸಕ್ರಮ ಸಾಗಾಟದ ಜವಾಬ್ದಾರಿ ಹೊತ್ತವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸರಕಾರದ ಚೌಕಟ್ಟನ್ನು ಮೀರಿ ಮರಳುಗಾರಿಕೆಗೆ ಮುಂದಾಗಿರುವುದು ಇಲ್ಲಿನ ದುಸ್ಥಿತಿಗೆ ಕೈಗನ್ನಡಿಯೆಂಬಂತಾಗಿದೆ. ತಿಂಗಳ ಹಿಂದೆ ಬಿಜನಳ್ಳಿ ಬೀರನಹಳ್ಳಿ ಗ್ರಾಮಗಳ ಮಧ್ಯದಲ್ಲಿ ಅಕ್ರಮವಾಗಿ ಶೇಖರಿಸಲಾಗಿದ ಮರಳು ಸ್ಥಳೀಯ ಪೆÇಲೀಸ್ ಇಲಾಖೆಯು ರಕ್ಷಿಸಿದ್ದು, ಆದರೆ ಪಿಎಸ್ ಐ ವರ್ಗಾವಣೆಯಾದ ನಂತರ ರಾತ್ರಿ ದಿನೇ ದಿನೇ ಮರಳು ಕಾಲಿಯಾಗುತ್ತಿದೆ ಇತ್ತ ತಾಲೂಕ ಆಡಳಿತ ಅಧಿಕಾರಿಗಳು ಗಮನ ಹರಿಸಿ ಸರ್ಕಾರ ದಿನಕ್ಕೆ ತಕ್ಷಣ ಪಡೆಯಬೇಕಿದೆ . .ಪ್ರತಿನಿತ್ಯ ಟಿಪ್ಪರ್, ಟ್ರಾಕ್ಟರ್ ಹಾಗೂ ಎತ್ತಿನ ಬಂಡಿಗಳ ಮೂಲಕ ಕೋಟಿಗಟ್ಟಲೆ ಮೌಲ್ಯದ ಮರಳು ಸಕ್ರಮ ಹಾದಿಯಲ್ಲಿ ಜನರಿಗೆ ತಲುಪುವ ಬದಲು ಅಕ್ರಮ ಹಾದಿಯಲ್ಲಿ ತಲುಪುತ್ತಿದೆ. ಇದರಿಂದ ಸರಕಾರದ ಬೊಕ್ಕಸದ ಜೊತೆಗೆ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.
ಬೀರನಳ್ಳಿ ಮತ್ತು ಬೀಜನಳ್ಳಿ ರಸ್ತೆಯ ಮದ್ಯದಲ್ಲಿರುವ ಈ ಸ್ಥಳ ಕೆಲವು ದಿನಗಳ ಹಿಂದೆ ಈ ಮರಳು ಪೆÇೀಲಿಸರು ಯಾರು ತೆಗೆದು ಕೊಂಡು ಹೊಗದಂತೆ ತಡೆದಿದ್ದರು. ಆದರೆ ಈ ಮರಳು ದಿನಾಲು ಸ್ವಲ್ಪ ಸ್ವಲ್ಪ ಮಾಯಾವಾಗುತ್ತಿದೆ ಎಂಬುವದಕ್ಕೆ ವಾಹನಗಳ ಓಡಾಡಿರುವ ಗುರುತುಗಳು ಕಾಣ ಬಹುದು ? ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳ ನಿರ್ಲಕ್ಷ ಕಾರಣವೇ ? ಅಥವ ಅಧಿಕಾರಿಗಳ ಸಹಮತ ವಿದೆಯೆ ?ಆದಷ್ಟು ಬೇಗ ಈ ಮರಳು ಆ ಸ್ಥಳದಿಂದ ಸ್ಥಲಾಂತರ ಮಾಡ ಬೇಕು ಇಲ್ಲಂದ ? ಆ ಮರಳು ಕೆಲವೆ ದಿನಗಳಲ್ಲಿ ನೊಡುವದಕ್ಕು ಸಿಗುವದಿಲ್ಲ.
ರಾಜು ಕಟ್ಟಿ ಸಾಮಾಜಿಕ ಹೋರಾಟಗಾರ ಮಳಖೇಡ