ಸಾಂಕ್ರಾಮಿಕ ರೋಗಗಳ ಅರಿವು ಕಾರ್ಯಕ್ರಮ
ಮುನವಳ್ಳಿ,ಜು10: ಪಟ್ಟಣದ ವಾರ್ಡ ನಂ 2 ರಲ್ಲಿ ಸಾಂಕ್ರಾಮೀಕ ರೋಗಗಳ ಬಗ್ಗೆ ಅರಿವು ಕಾರ್ಯಕ್ರಮ ಜರುಗಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್.ಆರ್.ಗಂಜಿ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿ ಡೆಂಗಿ ವಿರೋಧಿ ಮಾಸಾಚರಣೆ ಅಂಗವಾಗಿ ಡೆಂಗ್ಯು ಜ್ವರ ವೈರಸ್ ನಿಂದ ಉಂಟಾಗುವ ಕಾಯಿಲೆಯಾಗಿದ್ದು ಇದು ಒಬ್ಬರಿಂದ ಮತ್ತೊಬ್ಬರಿಗೆ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನವೃದ್ದಿ ಮಾಡುತ್ತವೆ ಹಾಗು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ ಇದ್ದಕ್ಕಿದ್ದಂತೆ ತೀವ್ರ ಜ್ಚರ ವಿಪರೀತ ತಲೆನೂವು ಕಣ್ಣುಗಳ ಹಿಂಭಾಗದಲ್ಲಿ ಮಾಂಸ ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಈ ರೋಗದ ಮುಖ್ಯ ಲಕ್ಷಣಗಳಾಗಿವೆ ಡೆಂಗ್ಯು ಜ್ವರದ ತೀವ್ರ ಸ್ಥಿತಿಯಲ್ಲಿ ಬಾಯಿ ಮೂಗು ಮತ್ತು ವಸಡುಗಳಿಂದ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಈ ವಿಷಯನ್ನು ಸಮುದಾಯಕ್ಕೆ ತಿಳಿಸುವುದು ಅತೀ ಅವಶ್ಯಕವಾಗಿದೆ ಡೆಂಗ್ಯು ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು ಡೆಂಗ್ಯು ಜ್ವರ ನಿಯಂತ್ರಣ ಮಾಡಿಕೊಳ್ಳಲು ವೈಯಕ್ತಿಕ ಆರೋಗ್ಯ ಪರಿಸರ ನೈರ್ಮಲ್ಯದ ಬಗ್ಗೆ ತಿಳಿದುಕೊಳ್ಳಬೇಕೆಂದರು.
ಅದ್ಯಕ್ಷತೆ ವಹಿಸಿ ಡಾ. ಎಸ್.ಎಲ್.ದಂಡಗಿ ಮಾತನಾಡಿ ಮಳೆಗಾಲವಿರುವದರಿಂದ ನೀರು ಕಲುಷಿತಗೊಂಡು ಕಾಲರಾ ಕಾಮಣಿ ವಾಂತಿಭೇದಿ ಆಮಶಂಕೆ ಟೈಪಾಯಿಡ್ ಜಿ.ಇ ಪೋಲಿಯೋಮೈಲಟಿಸ್ ರೋಗಗಳು ಬರುವ ಸಾಧ್ಯತೆ ಇರುವುದು ಆದ್ದರಿಂದ ಇವುಗಳನ್ನು ನಿಯಂತ್ರಿಸಲು ಶುದ್ದ ಕುಡಿಯುವ ನೀರಿನ ಬಳಕೆ ಪಾದ ರಕ್ಷೆಗಳ ಬಳಕೆ ಶೌಚಾಲಯದ ಬಳಕೆ ವೈಯಕ್ತಿಕ ಆರೋಗ್ಯ ಮತ್ತು ಪರಿಸರ ನೈರ್ಮಲ್ಯದ ಶುಚಿತ್ವದ ಅವಶ್ಯಕತೆ ಇದೆ ಎಂದರು.
ಶಶಿಕಲಾ ಕಾಡಯ್ಯನವರ, ಸರಕಾರಿ ಆಸ್ಪತ್ರೇಯ ಸಿಬ್ಬಂದಿಗಳು ಆಶಾಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಶ್ವಾಸ ಹಿರೇಮಠ ಕಾರ್ಯಕ್ರಮ ನಿರೂಪಣೆ ಮಾಡಿದರು, ಮೇಘಾ ಸ್ವಾಗತಿಸಿ ವಂದಿಸಿದರು.