ಅವಿರೋಧ ಆಯ್ಕೆ
ಬ್ಯಾಡಗಿ,ಜು10: ಅಖಿಲ ಭಾರತ ವೀರಶೈವ ಮಹಾಸಭೆಯ ಬ್ಯಾಡಗಿ ತಾಲೂಕಾ ಘಟಕದ ಅಧ್ಯಕ್ಷರಾಗಿ ವಿಶ್ವನಾಥ ಅಂಕಲಕೋಟಿ ಹಾಗೂ 20 ಜನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ ದಿವಸ ಅಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ಅಂಕಲಕೋಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಸಿದ್ದ 20ಜನರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯಕಾರಿ ಸಮಿತಿಗೆ ನಾಮಪತ್ರ ಎಲ್ಲರನ್ನೂ ಸಲ್ಲಿಸಿದ್ದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.
ಕಾರ್ಯನಿರ್ವಾಹಕ ಸಮಿತಿಯ 7ಮಹಿಳಾ ಮೀಸಲು ಸ್ಥಾನಕ್ಕೆ ಮಹೇಶ್ವರಿ ಪಸಾರದ, ಗೀತಾ ಕಬ್ಬೂರ, ಶಾಂತಾ ಕಬ್ಬೂರ, ಸುವರ್ಣಮ್ಮ ಉಪ್ಪಾರ, ಉಮಾ ಮಠದ, ನೇತ್ರಾ ಬಡ್ಡಿಯವರ, ಉಮಾ ಶಿರಗಂಬಿ ಆಯ್ಕೆಯಾಗಿದ್ದಾರೆ.
ಕಾರ್ಯನಿರ್ವಾಹಕ ಸಮಿತಿಯ 13 ಸಾಮಾನ್ಯ ವರ್ಗಗಳ ಸ್ಥಾನಕ್ಕೆ ಚಂದ್ರಣ್ಣ ಶೆಟ್ಟರ, ಶಿವಾನಂದ ತೆಂಬದ, ಕಲ್ಲನಗೌಡ ಖಂಡೆಬಾಗೂರ, ಮಹಾಂತೇಶ ಆಲದಗೇರಿ, ವೀರಭದ್ರಪ್ಪ ಹುಣಸಿಕಟ್ಟಿ, ಮಲ್ಲಿಕಾರ್ಜುನಗೌಡ ಹೊಮ್ಮರಡಿ, ವೀರಭದ್ರಪ್ಪ ಗೊಡಚಿ, ಮಲ್ಲಿಕಾರ್ಜುನ ಬಳ್ಳಾರಿ, ಪ್ರೇಮಾನಂದ ಲಕ್ಕಣ್ಣನವರ, ಅಣ್ಣಪ್ಪ ಪೀಠದ, ಗುರುಬಸವನಗೌಡ ಪಾಟೀಲ, ರಮೇಶ ಮೋಟೆಬೆನ್ನೂರ ಹಾಗೂ ವಾಮದೇವಪ್ಪ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.