ಸೇವಾದಳದ ಮಕ್ಕಳಿಗೆ ಸಮವಸ್ತ್ರ
ಬೈಲಹೊಂಗಲ,ಜು10: ಪ್ರತಿ ಶಾಲೆಯಲ್ಲಿ ಸೇವಾದಳಕ್ಕೆ ಸೇರುವ ಮಕ್ಕಳಿಗೆ ಸಮವಸ್ತ್ರ ಕೊಡಲು ಭಾರತ ಸೇವಾದಳ ಬೆಳಗಾವಿ ಘಟಕ ಸಿದ್ದವಿದೆ ಎಂದು ಜಿಲ್ಲಾಧ್ಯಕ್ಷ ಮಹಾಂತೇಶ ತುರಮರಿ ಭರವಸೆ ನೀಡಿದರು.
ಪಟ್ಟಣದ ಶಾಸಕರ ಮತಕ್ಷೇತ್ರ ಮಾದರಿ ಶಾಲೆ ನಂ.4 ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಬೆಳಗಾವಿ, ಭಾರತ ಸೇವಾದಳ ಜಿಲ್ಲಾ ಸಮಿತಿ ಬೆಳಗಾವಿ, ಶಿಕ್ಷಣ ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಿಕ್ಷಕ/ ಶಿಕ್ಷಕಿಯರ ಪುನಶಚೇತನ ಶಿಬಿರದಲ್ಲಿ ಅವರು ಮಾತನಾಡಿ, ಶಿಸ್ತಿಗೆ ಹೆಸರುವಾಸಿಯಾಗುರುವ ಭಾರತ ಸೇವಾದಲದಲ್ಲಿ ಸಮವಸ್ತ್ರಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಅದರಂತೆ ಸೇವಾದಳಕ್ಕೆ ಸೇರ್ಪಡೆಗೊಳ್ಳುವ ಮಕ್ಕಳಿಗೂ ಕೂಡ ಸಮವಸ್ತ್ರ ಕಡ್ಡಾಯ. ಶಾಲೆಗಳಲ್ಲಿ ಭಾರತ ಸೇವಾದಳದ ಮಕ್ಕಳ ಸಮವಸ್ತ್ರಕ್ಕೆ ಅನುದಾನ ಇಲ್ಲದೆ ಇರಬಹುದು.
ಸರಕಾರಿ ಶಾಲೆಗಳಲ್ಲಿ ಬಡವರ್ಗದ ಮಕ್ಕಳೇ ವ್ಯಾಸಂಗ ಮಾಡುತ್ತಿರುವುದರಿಂದ ಪಾಲಕರಿಗೂ ಹೊರೆಯಾಗಬಾರದು ಎಂಬ ಸದುದ್ದೇಶದಿಂದ ಭಾರತ ಸೇವಾದಳಕ್ಕೆ ಸೇರುವ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸುವ ಬಗ್ಗೆ ಭಾರತ ಸೇವಾದಳ ಜಿಲ್ಲಾ ಸಮಿತಿ ಚಿಂತನೆ ನಡೆಸಿದೆ. ಆದಷ್ಟು ಬೇಗ ತಾಲೂಕಿನ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ನೀಡಬೇಕೆಂದು ಸೇವಾದಳದ ಪದಾಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷರರಾದ ಎಸ್.ಜಿ. ಹೊರಟ್ಟಿ ವಹಿಸಿದ್ದರು. ಕೋಶಧ್ಯಕ್ಷ ಸುಭಾಷ್ ತುರಮರಿ,ಶಾಲೆ ಮುಖ್ಯೋಪಾಧ್ಯಾಯರಾದ ಸಿ.ಬಿ. ಶೀಗಿಹಳ್ಳಿ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಎಂ.ವ್ಹಿ ಭದ್ರಶೆಟ್ಟಿ, ಸೇವಾದಳದ ಜಿಲ್ಲಾ ಸಮಿತಿ ಸದಸ್ಯರು .ಬಿ ಬಿ ಬಸಕ್ರಿ, ಪ್ರಾ.ಶಾ.ಶಿ ಸಂಘದ ಸದಸ್ಯರು.ಎಸ್ ಬಿ. ಜಕಾತಿ ಉಪಸ್ಥಿತರಿದ್ದು, ಸೇವಾದಳದ ಜಿಲ್ಲಾ ಸಂಘಟಿಕರಾದ ಅನಿಲ ಪತ್ತಾರ. ಪ್ರಸ್ತಾಪಿಸಿದರು.
ತಾಲೂಕು ಸಂಘಟಿಕರಾದ ಈರಣ್ಣ ಅಡಕಿ ನಿರೂಪಿಸಿದರು, ಎಸ್. ಬಿ ಮಲ್ಲಗೌಡರ ಸ್ವಾಗತಿಸಿದರು. ಶಿಕ್ಷಕಿ ಪಿ, ಜಿ, ಖೇಮಲಾಪುರೆ ವಂದಿಸಿದರು.