ಬಸ್ ನಿಲ್ದಾಣ ಇದ್ದರೂ ಬಾರದ ಬಸ್ಸುಗಳು
ಸಂಜೆವಾಣಿ ವಾರ್ತೆ
ಸಂಡೂರು:ಜು:10::  ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಸಂಡೂರು ಹಾಗೂ ಕೂಡ್ಲಿಗಿ ಪಟ್ಟಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯಾಗಿದ್ದು ಬಸ್ ನಿಲ್ದಾಣ ನಿರ್ಮಾಣಗೊಂಡು ಹಲವು ವರ್ಷಗಳು ಕಳೆದರೂ ಈ ಮಾರ್ಗದಲ್ಲಿ ಸರಿ ಸುಮಾರು 6 ಘಟಕಗಳ ಬಸ್ಸುಗಳು ನಿತ್ಯ ಸಂಚರಿಸುತ್ತಿದ್ದು ಸಾರ್ವಜನಿಕರಿಗೆ ಪ್ರಯಾಣಿಸಲು ಅನುಕೂಲವಾಗುವ ರೀತಿಯಲ್ಲಿ ಮುಖ್ಯ ರಸ್ತೆಯನ್ನು ಹೊಂದಿ ಕೊಂಡಂತೆ ಸರ್ಕಾರವು ಹಲವಾರು ಯೋಜನೆಯ ಮುಖಾಂತರ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ಆದಾಗ್ಯೂ ಕೂಡಾ ಬಸ್ಸುಗಳು ನಿಲ್ದಾಣಕ್ಕೆ ಬಾರದೇ ಮುಖ್ಯ ರಸ್ತೆಯಿಂದ ಬಂದು ಹೋಗುತ್ತವೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಸೇರಿ ಹಲವು ಬಾರಿ ಸಾರಿಗೆ ಇಲಾಖೆಯವರಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ದಿನ ನಿತ್ಯ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ವಾಗ್ವಾದ ನಡೆಯುತ್ತಿದೆ. ಕೊನೆಗೆ ಗ್ರಾಮಸ್ಥರು ಸೇರಿ ಒರ್ವ ಕಾವಲುಗಾರರನ್ನು ನೇಮಿಸಿ ಬಸ್ಸುಗಳನ್ನು ನಿಲ್ದಾಣದ ಒಳಗೆ ಹೋಗುವಂತೆ ಸೂಚಿಸಲು ನೇಮಕ ಮಾಡಿದ್ದು ಕೆಲವು ಸಂಘಟನೆಗಳ ಸಾರ್ವಜನಿಕರ ಗಮನ ಸೆಳೆಯುವಂತೆ ಮಾಡಿದ್ದಾರೆ.
ಕೂಡಲೇ ಇಲಾಖೆಯ ಅಧಿಕಾರಿಗಳು ಎಚ್ಚೇತ್ತು ಚಾಲಕರು ಮತ್ತು ನಿರ್ವಾಹಕರಿಗೆ ಸೂಚನೆಯನ್ನು ನೀಡಿ ಕಡ್ಡಾಯವಾಗಿ ಬಸ್ ನಿಲ್ದಾಣದಲ್ಲಿ ಒಳಗೆ ಹೋಗುವಂತೆ ಸೂಚಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷಗಳನ್ನು ಹಾಕಿಕೊಂಡು ಹೋರಾಟ ನಡೆಸಲು ಗ್ರಾಮಸ್ಥರು ಮಂಚೂಣಿಯಲ್ಲಿದ್ದಾರೆ.