ಡೆಂಘೀ ಹೆಚ್ಚಳ: ವಾರ್ಡ್‍ಗಳ ಪರಿಶೀಲನೆ, ನಿಯಂತ್ರಣಕ್ಕೆ ಕ್ರಮವಹಿಸುವಂತೆ ಸಂಸದ ಯದುವೀರ್ ಸೂಚನೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.10:- ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಮೇಟಗಳ್ಳಿ ಬಡಾವಣೆಯಲ್ಲಿರುವ ಜಿ¯್ಲÁಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಡೆಂಘೀ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಆಸ್ಪತ್ರೆಯ ವಾರ್ಡ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿ¯್ಲÁಸ್ಪತ್ರೆಗೆ ಭೇಟಿ ನೀಡಿz್ದÉೀನೆ. ನಮ್ಮ ವೈದ್ಯರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿz್ದÁರೆ. ಡೆಂಘೀ ನಿಯಂತ್ರಣಕ್ಕೆ ಸಂಬಂಧÀಪಟ್ಟಂತೆ ಅಧಿಕಾರಿಗಳಿಂದ ಮಾಹಿತಿ ಪಡೆದಿz್ದÉೀನೆ. ಡೆಂಘೀ ನಿಯಂತ್ರಣ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿz್ದÉೀನೆ. ರೋಗ ನಿಯಂತ್ರಣಕ್ಕೆ ಸಂಬಂಧÀಪಟ್ಟಂತೆ ಅಧಿಕಾರಿಗಳ ಸಭೆ ಮಾಡಬೇಕೆಂದು ಅಂದುಕೊಂಡಿz್ದÉೀವೆ. ಜಿ¯್ಲÁಸ್ಪತ್ರೆಗೆ ಅಗತ್ಯ ಸಲಕರಣೆಗಳ ಕೊರತೆ ಇದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದು, ಮುಖ್ಯಮಂತ್ರಿಗಳು ಮತ್ತು ಸಚಿವರ ಸೂಚನೆ ಮೇರೆಗೆ ಅಗತ್ಯ ಕ್ರಮ ಕೈಗೊಂಡಿz್ದÉೀವೆ. ರಾಜ್ಯಕ್ಕೆ ಹೋಲಿಕೆ ಮಾಡಿದರೆ, ಮೈಸೂರಿನಲ್ಲಿ ಡೆಂಘೀ ಪೀಡಿತರು ಬೇಗ ಗುಣಮುಖರಾಗುತ್ತಿz್ದÁರೆ. ರೋಗ ನಿಯಂತ್ರಣಕ್ಕೆ ಬೇಕಾದ ಎ¯್ಲÁ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಔಷಧಗಳ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಆಷಾಢಮಾಸ ಹಿನ್ನೆಲೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಚಾಮುಂಡಿ ಬೆಟ್ಟಕ್ಕೆ ಶುಕ್ರವಾರಗಳಂದು ಲಕ್ಷಾಂತರ ಮಂದಿ ಭÀಕ್ತರು ಆಗಮಿಸುತ್ತಾರೆ. ಜತೆಗೆ ನಗರ ಸೇರಿದಂತೆ ಬೆಟ್ಟದಲ್ಲಿ ಹಲವು ಕಡೆ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಈ ಸಂದರ್ಭ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಎ¯್ಲÁ ಕಡೆ ಆರೋಗ್ಯ ಸಿಬ್ಬಂದಿ ನೇಮಕ ಮಾಡಿz್ದÉೀವೆ ಎಂದರು.
ಈ ಸಂದರ್ಭ ಯದುವೀರ್ ಅವರೊಂದಿಗೆ ಮಾಜಿ ಶಾಸಕ ಎಲ್. ನಾಗೇಂದ್ರ, ಡಿಎಚ್‍ಒ ಡಾ.ಪಿ.ಸಿ. ಕುಮಾರಸ್ವಾಮಿ ಇದ್ದರು.