ವೀರಶೈವ ಮಹಾಸಭಾದ ಸಂಡೂರು ತಾ  ಘಟಕ ಅಧ್ಯಕ್ಷರಾಗಿ ಎಚ್.ಎಂ.ಮಂಜುನಾಥ
ಸಂಜೆವಾಣಿ ವಾರ್ತೆ
ಸಂಡೂರು :ಜು: 10:: ಆಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕ ಅಧ್ಯಕ್ಷರಾಗಿ ಚೋರುನೂರಿನ ಎಚ್.ಎಂ.ಮಂಜುನಾಥ ಸಿ.ಎಸ್.ಹಿರೇಮಠ ಇವರು ಆಯ್ಕೆಯಾಗಿದ್ದಾರೆಂದು ಸಹಾಯಕ ಚುನಾವಣಾಧಿಕಾರಿ ಎಂ.ಚರಂತಯ್ಯ ಸ್ವಾಮಿ ತಿಳಿಸಿದರು.
 ಅವರು ಮಾತನಾಡಿ ಎನ್.ಮಂಜುನಾಥ ಯಶವಂತನಗರ, ಎಸ್.ಎಚ್.ಎಂ.ರುದ್ರಯ್ಯಸ್ವಾಮಿ ತೋಣಸಿಗೆರೆ, ಎ.ಎಂ.ಶರಣಯ್ಯ ಲಕ್ಷ್ಮಿಪುರ, ಕೆ.ಅವಿನಾಶ ಸುಶೀಲಾನಗರ, ಬಿ.ಜಿ.ಪ್ರಭುಗೌಡ ಸಂಡೂರು, ಜೆ.ಬಸವರಾಜ ತೋರಣಗಲ್, ಜೆ.ಶಿವಪ್ರಕಾಶ ಯಶವಂತನಗರ, ವೈ.ರಾಜು ರಾಜಾಪುರ, ಚುಕ್ಕಾರೆಡ್ಡಿ ವಡ್ಡು, ರಾಜೇಶ್ ಕುಮಾರ್ ತಾರಾನಗರ, ಎಲ್.ಬಸವರಾಜ ಬಂಡ್ರಿ, ಆರ್.ಶರಣಗೌಡ ತಾಳೂರು, ಆರ್.ಲೋಕೇಶ್ ತಾರಾನಗರ, ಮೇಟಿ ಹೇಮಲತಾ ಬಸವರಾಜ ಭುಜಂಗನಗರ, ಟಿ.ಜಿ.ರಾಜೇಶ್ವರಿ ತಿಮ್ಮನಗೌಡ ತಾರಾನಗರ, ವಿ.ಎಂ.ವಿಜಯಲಕ್ಷ್ಮಿ ರುದ್ರಯ್ಯ ಹಿರೇಮಠ ಸಂಡೂರು, ಜಿ.ವಿ.ಬಿಂಧುಶ್ರೀ ಕರೂರು ನವೀನಕುಮಾರ್, ಬಿ.ಟಿ.ಗೀತಾ ವಿರೇಶ್ ವಿದ್ಯಾನಗರ, ಬಿ.ಶಾಂತ ಕೆ.ಪ್ರವೀಣ ಜಿಗೇನಹಳ್ಳಿ, ಜಿ.ನೀಲಾಂಬಿಕ ರಾಜಶೇಖರ ಸಂಡೂರು ಇವರು ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಜು.21ರ ಭಾನುವಾರ ಬೆ.8ಗಂಟೆಯಿಂದ ಸಂಜೆ 5ಗಂಟೆವರೆಗೆ ಜಿಲ್ಲಾ ಘಟಕ ಅಧ್ಯಕ್ಷರು ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆ ನಡೆಯಲಿದೆ ಎಂದು ಎಂ.ಚರಂತಯ್ಯಸ್ವಾಮಿ ತಿಳಿಸಿದರು.
ತಾಲೂಕು ಅಧ್ಯಕ್ಷ ಎಚ್.ಎಂ.ಮಂಜುನಾಥ ಮಾತನಾಡಿ ತಮ್ಮನ್ನು ಅವಿರೋಧ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲ ಸದಸ್ಯರಿಗೂ ಧನ್ಯವಾದ ಹೇಳಿದರಲ್ಲದೆ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಪಟ್ಟಣದ ಕಚೇರಿ ಬಳಿ ಅಖಿಲಭಾರತ ವೀರಶೈವ ಮಹಾಸಭಾಕ್ಕೆ ಅಧ್ಯಕ್ಷರು ಸೇರಿದಂತೆ ಕಾರ್ಯ ನಿರ್ವಾಹಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಎಚ್.ಎಂ.ಮಂಜುನಾಥ, ಸಹಾಯಕ ಚುನಾವಣಾಧಿಕಾರಿ ಎಂ.ಚರಂತಯ್ಯಸ್ವಾಮಿ ಇತರರಿದ್ದರು.