ಲಕಮಾಪುರ    ಸರಕಾರಿ ಶಾಲೆಗೆ ದೇಣಿಗೆ  ಮಹಾಪೂರ
ಸಂಜೆವಾಣಿ ವಾರ್ತೆ
 ಕುಕನೂರು, ಜು.10:    ತಳಕಲ್ ಕ್ಲಸ್ಟರ್ ನ ಜಿ.ಹೆಚ್.ಪಿಎಸ್ ಲಕಮಾಪುರ ಶಾಲೆಯಲ್ಲಿ ನಲಿಕಲಿ ತರಗತಿಗಳಿಗೆ ಫ್ಲೆಕ್ಸ್ ಅಳವಡಿಕೆ ಕಾರ್ಯ  ಈಚೆಗೆ ಜರುಗಿತು.      ಶ್ರೀ ಹನುಮರೆಡ್ಡಿ ಸ.ಶಿ ಜಿ.ಹೆಚ್.ಪಿಎಸ್ ವೀರಾಪುರ ಇವರು 8000 ರೂಪಾಯಿಗಳ ಸ್ವಂತ ಹಣದಲ್ಲಿ ಇಂದು 6ನೇ ಶಾಲೆಗೆ ಫ್ಲೆಕ್ಸ್ ದೇಣಿಗೆ ನೀಡುವದರ ಮೂಲಕ ಶಿಕ್ಷಕ ವೃತ್ತಿಗೆ, ಸೇವಾ ಮನೋಭಾವನೆಗೆ ಮಾದರಿಯಾಗಿದ್ದಾರೆ.
ಶ್ರೀ ಹನುಮರೆಡ್ಡಿ ಶಿಕ್ಷಕರ ಸೇವಾ ಕಾರ್ಯಕ್ಕೆ ಕ್ಲಸ್ಟರ್ ನ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರು ಜೊತೆಯಾದರು. ನಲಿಕಲಿ ತರಗತಿಯನ್ನು ಅಕ್ಷರಗಳ ಮೂಲಕ ಅಂದಗೊಳಿಸಿದರು.
ನೂತನವಾಗಿ ರಚನೆಯಾದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಶರಣಪ್ಪ ಆವೇರಿ ಹಾಗೂ ಸದಸ್ಯರು ಫ್ಲೆಕ್ಸ್ ಅಳವಡಿಕೆ ಮುನ್ನಾ ದಿನವೇ ನಲಿಕಲಿ ಕೊಠಡಿ ಸೇರಿದಂತೆ 4 ಕೊಠಡಿಗಳಿಗೆ ಬಣ್ಣ ಹಚ್ಚುವ ಹಾಗೂ ಶಾಲಾ ಆವರಣವನ್ನು ಸ್ವಚ್ಛತೆ ಮಾಡುವ ಮೂಲಕ ಶೈಕ್ಷಣಿಕವಾಗಿ ನಮ್ಮೊಟ್ಟಿಗೆ ಕೈಜೋಡಿಸಿದ್ದಾರೆ. ವಿಶೇಷವಾದ ಎಸ್.ಡಿ.ಎಂ.ಸಿ ತಂಡ ನಮ್ಮ ಶಾಲೆಗೆ ಹತ್ತು ಹಲವಾರು ಸೇವಾ ಕಾರ್ಯ ಮಾಡುವದರ ಮೂಲಕ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅಶೋಕ ಮಾದಿನೂರ ಇವರು ಕೂಡ ಒಂದು ನಲಿಕಲಿ ಕೊಠಡಿಗೆ ಫ್ಲೆಕ್ಸ್ ಅಳವಡಿಕೆ ಮಾಡುವದರ ಮೂಲಕ ಶಾಲೆಯಲ್ಲಿನ 2 ನಲಿ ಕಲಿ ಕೇಂದ್ರಗಳಿಗೂ ಫ್ಲೆಕ್ಸ್ ಅಳವಡಿಸಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಟ್ಟರು..
ಸದರಿ ಶಾಲೆಯ ಸಹಶಿಕ್ಷಕರಾದ ಶ್ರೀ ಶಂಕರಪ್ಪ ಗುಡಗೇರಿ ಇವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ 10.000 ರೂಪಾಯಿಗಳ ವೆಚ್ಚದಲ್ಲಿ   ಐಡಿ ಕಾರ್ಡ್ ಗಳನ್ನು ನೀಡಿದ್ದು ತುಂಬಾ ಸಂತಸದಾಯಕ
ಈ ಸಂದರ್ಭದಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಯಲಬುರ್ಗಾ ಇವರು ಸ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಹಾಗೂ ಶಾಲೆಯ ಮು.ಗು  ಶ್ರೀ ಅಶೋಕ ಮಾದಿನೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಲಿಂಗಾರೆಡ್ಡಿ ಕರಮುಡಿ, ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಈಶ್ವರಯ್ಯ ಹಲಸಿನಮರದ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಶರಣಪ್ಪ ಮುದ್ಲಾಪುರ, ಯಲಬುರ್ಗಾ ತಾಲೂಕಾ ಅಜೀಂ ಪ್ರೇಮ್ ಜಿ ನೋಡೆಲ್ ಶ್ರೀ ಗುರುರಾಜ ನರಗುಂದ, ಶಿಕ್ಷಕರಾದ ಶಂಕರಪ್ಪ ಗುಡಗೇರಿ, ಸಿದ್ಧಪ್ಪ ಹಡಪದ, ಶಾಲಾ ಶ್ರೀ ಬಸವರಾಜ ಹೊಳಗುಂದಿ, ಶ್ರೀ ಅಶೋಕ ದ್ಯಾಂಪೂರ, ಶ್ರೀ ಶಿವಬಸನಗೌಡ,  ಶ್ರೀ ಯೂಸೂಫ್ ಎಂ.ಡಿ.,  ಶ್ರೀ ಸಂಜೀವ ರಾಯ್ಕರ್, ಲಕಮಾಪುರ ಶಾಲೆಯ ಎಲ್ಲಾ ಸಹಶಿಕ್ಷಕರು  ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಂಜುನಾಥ ಮಟ್ಟಿ ಉಪಸ್ಥಿತರಿದ್ದರು.
ಶಾಲೆಯ ಹಾಗೂ ಕ್ಲಸ್ಟರ ಪರವಾಗಿ ಶ್ರೀ ಹನುಮರೆಡ್ಡಿ ಶಿಕ್ಷಕರನ್ನು, ಶ್ರೀಮತಿ ಸವಿತಾ ಹನುಮರೆಡ್ಡಿ, ಶ್ರೀ ಶಂಕರಪ್ಪ ಗುಡಗೇರಿ, ಹಾಗೂ ಶ್ರೀ ಮಂಜುನಾಥ ಮಟ್ಟಿ CRP ತಳಕಲ್ ಇವರನ್ನು SDMC ಹಾಗೂ ಶಾಲೆಯ ಪರವಾಗಿ ಸನ್ಮಾನಿಸಲಾಯಿತು