ಮಾನವೀಯತೆ ಇಲ್ಲದ ಬದುಕು ವ್ಯರ್ಥ – ಚನ್ನಬಸವ ದೇವರು.
ಸಂಜೆವಾಣಿ ವಾರ್ತೆ
ಕುಕನೂರ ಜು 09 : ನಾವುಗಳು ನಮ್ಮ ಬದುಕಿನಲ್ಲಿ ಮಾನವೀಯತೆಯನ್ನ ಬೆಳಸಿಕೊಳ್ಳಬೇಕು, ಮಾನವೀಯತೆ ಇಲ್ಲದ ಬದುಕು ವ್ಯರ್ಥ‌ ಎಂದು ವಿರಾಪೂರದ ಚನ್ನಬಸವ ದೇವರು ಹೇಳಿದರು.
ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 8ನೇ ಮಾಸಿಕ‌ ಶಿವಾನುಭವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ‌ ಮಾನವೀಯತೆಯೆ ನಿಜವಾದ ಧರ್ಮ, ಮಾನವರಲ್ಲಿ ಜಾತಿಯನ್ನ ಹುಡುಕಬಾರದು ಜಾತಿ ಮತ ಪಂಥಕ್ಕಿಂತ ಮಾನವೀಯತೆ,  ಸಂಸ್ಕಾರ ದೊಡ್ಡದು ವಿಶೇಷವಾಗಿ ಮಹಿಳೆಯರು ಸಂಸ್ಕಾರವಂತರಾದಗ ಮಾತ್ರ ನಾಡು ಅಭಿವೃದ್ಧಿ ಹೊಂದಲು ಸಾಧ್ಯ, ಶಿವಾನುಭವಗಳು ಸಂಸ್ಕಾರ ನೀಡುವ ಕೆಲಸ ಮಾಡುತ್ತವೆ, ನಮ್ಮಲ್ಲಿ ಉತ್ತಮ ವಿಚಾರಗಳು ಬರಬೇಕಾದರೆ ಉತ್ತಮರ ಸಂಗ ಅವಶ್ಯ ಎಂದರು.
ನಂತರ ಮಾತನಾಡಿದ ತಳಕಲ್ ಕಾಲೇಜಿನ ಡಾ ಫಕೀರಪ್ಪ ವಜ್ರಬಂಡಿ ತಳಕಲ್ ಜನರು ಹೃದಯವಂತರು, ಶಿವಾನುಭವಗಳು ಧರ್ಮ ಕಾರ್ಯಗಳು ನಿಂತು‌ ಹೋಗುತ್ತೀರುವ ಸಮಯದಲ್ಲಿ ನಿರಂತರವಾಗಿ ಶಿವಾನುಭವದಂತಹ ಧರ್ಮದ ಕಾರ್ಯಕ್ರಗಳನ್ನ‌ ಮಾಡುತ್ತೀರುವುದು ಗ್ರಾಮದ ಜನರಲ್ಲಿನ ಸಂಸ್ಕಾರವನ್ನ ತಿಳಿಸುತ್ತದೆ ಮತ್ತು ಅನ್ನದಾನೀಶ್ವರ ಮಠದ ಭಕ್ತರು ಸ್ವಾಭಿಮಾನಿಗಳು, ಮಹಾದಾನಿಗಳು ಇಂತಹ ಭಕ್ತರನ್ನ‌ ನೋಡುವುದೇ ಭಾಗ್ಯ ಎಂದರು.
ಸಂಗೀತ ಸೇವೆಯನ್ನ ಮಲ್ಲಿಕಾರ್ಜುನ ಕರ್ಜಗಿ, ಬಸಯ್ಯ ಚಂಡೂರು, ವೀರಭದ್ರಪ್ಪ ಬೆದವಟ್ಟಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪೂಜ್ಯ ಡಾ ಮಹಾದೇವ ಸ್ವಾಮೀಜಿ, ಶಿವಕಲ್ಲಯ್ಯ ವಸ್ತ್ರದ, ಹನುಮಪ್ಪ ಬಂಗಾರಿ, ರಂಗಪ್ಪ ಅಳವಂಡಿ, ಮುದಿಯಪ್ಪ, ಬಸವರಾಜ ಬ್ಯಾಳಿ, ಶರಣಪ್ಪ ಬ್ಯಾಳಿ, ಪಕ್ಕಪ್ಪ, ರಾಮಣ್ಣನಿ ಟ್ಟಾಲಿ ಮತ್ತು ಇತರರು ಇದ್ದರು