ಸಹಕಾರ ಬ್ಯಾಂಕ್ ಕಟ್ಟಡಕ್ಕೆ ಯಾಕಾಪೂರ ಆಗ್ರಹ
ಚಿಂಚೋಳಿ:ಜು.10:ಕಲಬುರಗಿ ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ 2021-22 ನೇ ಸಾಲಿನಲ್ಲಿ
ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರೈತ ಸದಸ್ಯರಿಗೆ ಬೆಳೆ ಸಾಲ ವಿತರಿಸುವಾಗ
ಪ್ರತಿಯೊಬ್ಬ ಸಾಲಗಾರ ರೈತರಿಂದ ರೂ.500 ರಂತೆ ಬ್ಯಾಂಕ ಕಟ್ಟಡ ನಿಧಿಗಾಗಿ ಸಾಲದಲ್ಲಿ
ಕಡತಗೊಳಿಸಿ ಸಾಲ ವಿತರಿಸಲಾಗಿದೆ ಇದರಿಂದ ಜಿಲ್ಲಾ ಬ್ಯಾಂಕಿನಲ್ಲಿ ಈ ಕಟ್ಟಡ ನಿಧಿಯ
ಕೊಟ್ಯಾಂತರ ರೂಪಾಯಿ ಜಮೆ ಇರುತ್ತದೆ. ಆದರೆ ಜಿಲ್ಲಾ ಬ್ಯಾಂಕಿನ ಆಡಳಿತ ಮಂಡಳಿಯವರ
ಇಚ್ಚಾ ಶಕ್ತಿ ಕೊರತೆಯಿಂದಾಗಿ ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಇರುವ ಈ ಜಿಲ್ಲಾ ಸಹಕಾರ
ಬ್ಯಾಂಕಿನ ಶಾಖೆಗಳ ಕಟ್ಟಡಗಳ ಕೆಲಸ ಕೈಗೆತ್ತಿ ಕೊಂಡಿಲ್ಲಾ. ವಿಶೇಷವಾಗಿ ಚಿಂಚೋಳಿ
ತಾಲ್ಲೂಕಿನಲ್ಲಿಯ ಬ್ಯಾಂಕಿನ ಶಾಖೆಯು ಇದರ ಪ್ರಾರಂಭದಿಂದಲೂ ಖಾಸಗಿ ಕಟ್ಟಡದಲ್ಲಿಯೇ
ನಡೆಯುತ್ತಿದೆ ಈ ಕಟ್ಟಡಕ್ಕಾಗಿ ಚಿಂಚೋಳಿಯ ಎ.ಪಿ.ಎಮ್.ಸಿ ಮತ್ತು ಟಿ.ಎ.ಪಿ.ಸಿ.ಎಮ್ ನ
ಆಡಳಿತ ಮಂಡಳಿಯವರು ನಿವೇಶನ ಕೊಡಲು ಆಸಕರಾಗಿದ್ದರು ಕೂಡ ಚಿಂಚೋಳಿ
ತಾಲ್ಲೂಕದಿಂದ ಪ್ರತಿನಿಧಿಸುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಾಜಿ ಮತ್ತು ಹಾಲಿ ನಿರ್ದೇಶಕರ ನಿರ್ಲಕ್ಷ್ಯವೆ ಮೂಲ ಕಾರಣ ಅವರು ಈ ಚಿಂಚೋಳಿ ಬ್ಯಾಂಕಿನ ಶಾಖೆ ಖಾಸಗಿಯವರ ಒಡೆತನದಲ್ಲಿರುವ ಕಟ್ಟಡದಲ್ಲಿಯೇ ಮುಂದುವರೆಸಿಕೊಂಡು ಹೋಗಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿಗೆ ಪುನ: ಪುನ: ಸಿಪಾರಸ್ಸು ಮಾಡುತ್ತಿದ್ದಾರೆ. ಇದಕ್ಕೆ
ಅವರ ವೈಯುಕ್ತಿಕ ಹಿತಾಶಕ್ತಿ ಎದ್ದು ಕಾಣುತ್ತದೆ. ಈ ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿ ಜರುಗಲಿರುವ
ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಾನು ಪ್ರಶ್ನಿಸುತ್ತೇನೆ ಎಂದು ಚಿಂಚೋಳಿ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಯಾಕಾಪೂರ್, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ