ಇಂದು ಸಂಜೆ ಕೂಡ್ಲಿಗಿಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.10 :-  ಇಂದು ಬೆಳಿಗ್ಗೆ  ಬಳ್ಳಾರಿಯ ಹೇಮ ವೇಮ ರೆಡ್ಡಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ  ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಹೊಸಪೇಟೆ ಟ್ರಕ್ ಟರ್ಮಿನಲ್ ಕಾರ್ಯಕ್ರಮದ ನಂತರ ಬೆಂಗಳೂರು ಕಡೆ ಹೋಗುವ ಮಾರ್ಗ ಮದ್ಯೆ ಕೂಡ್ಲಿಗಿಗೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗರೆಡ್ಡಿ ಭೇಟಿ ನೀಡಲಿದ್ದಾರೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರು ಕಡೆಯಿಂದ ನೇರವಾಗಿ ಬಳ್ಳಾರಿಗೆ ಆಗಮಿಸುವ ಸಚಿವರು ಬಳ್ಳಾರಿ ಹೇಮ ವೇಮ ರೆಡ್ಡಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ರೆಡ್ಡಿ ಸಮುದಾಯದ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ 3ಗಂಟೆಗೆ  ಹೊಸಪೇಟೆಯ ದೇವರಾಜ ಅರಸು ಟ್ರಕ್ ಟರ್ಮಿನಲ್ ನ್ನು ವೀಕ್ಷಣೆ ಮಾಡಿ ನಂತರ ಬೆಂಗಳೂರು ಕಡೆಗೆ ಹೋಗುವ ಮಾರ್ಗ ಮದ್ಯೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಪ್ರೀತಿಯ ಕರೆಯ ಮೇರೆಗೆ   ಸಂಜೆ 4-30ಗಂಟೆ ಸುಮಾರಿಗೆ ಸಚಿವರಾದ ರಾಮಲಿಂಗರೆಡ್ಡಿ  ಕೂಡ್ಲಿಗಿ ಪಟ್ಟಣದಲ್ಲಿರುವ ಗುಡೇಕೋಟೆ ರಸ್ತೆಯ ಶಾಸಕರ ಜನಸಂಪರ್ಕ ಕಚೇರಿಗೆ ಆಗಮಿಸುವರು. ಪಟ್ಟಣದ ಕಾಂಗ್ರೆಸ್ ಮುಖಂಡರು, ಪಟ್ಟಣ ಪಂಚಾಯತಿ ಸದಸ್ಯರು ಕಾರ್ಯಕರ್ತರ ಜೊತೆ ಸಚಿವರು  ಸಮಾಲೋಚನೆ ನಡೆಸಲಿದ್ದು ನಂತರ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಸಾರಿಗೆ ಹಾಗೂ ಮುಜರಾಯಿ ಖಾತೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಹಾಗೂ ಕೂಡ್ಲಿಗಿ ಘಟಕ ಮತ್ತು ಅನೇಕ ಮಾರ್ಗಗಳಿಗೆ ಬಸ್ಸಿನ ಸೌಕರ್ಯ ಬೇಕಾಗಿದ್ದು ಹೆಚ್ಚಿನ ಬಸ್ ವಿತರಿಸಲು ಕೂಡ್ಲಿಗಿ ಶಾಸಕರಾದ ಡಾ ಶ್ರೀನಿವಾಸ ಮನವಿ ಮಾಡಲಿದ್ದಾರೆಂದು ತಿಳಿದಿದೆ.