ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.10 ತಾಲೂಕು ಪ್ರಗತಿಪರ ಶಿಕ್ಷಕರ ವೇದಿಕೆಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ತಂಬ್ರಹಳ್ಳಿ ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೃಷ್ಣಾಪುರ 101
ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳಾದ ಮಗ್ಗಿ ಪುಸ್ತಕ ನೋಟು ಪುಸ್ತಕ ಪೆನ್ನು,ಪೆನ್ಸಿಲ್ ಸ್ಕೇಲು ,ರಬ್ಬರ್ ,ಮೆಂಡರು ಗಳನ್ನು ವಿತರಿಸಲಾಯಿತು.
ಬನ್ನಿಗೋಳು ಶಾಲೆಯ ಶಿಕ್ಷಕರಾದ ಎ.
ಶಿಕ್ಷಕ ಹನುಮಂತಪ್ಪ ಪ್ರಾಸ್ತಾವಿಕ ನುಡಿ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡರೆ ಅವು ಬದುಕನ್ನೇ ಬೆಳಗುತ್ತವೆ. ಪುಸ್ತಕಗಳ ಬಳಕೆ ಹಾಗೂ ರಕ್ಷಣೆ ಅತಿ ಮುಖ್ಯವಾಗಿದೆ. ಪ್ರತಿಯೊಂದು ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳನ್ನು ಬೆಳೆಸುವ ಮತ್ತು ಉಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಂಬ್ರಹಳ್ಳಿ ವಲಯದ ಸಿ ಆರ್ ಪಿ ಕನಕಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಇಟಿಗಿ ಪ್ರಭಾಕರ್, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಂಕಾರೆಡ್ಡಿ, ಪ್ರದೀಪ ಗುಡ್ಲಾನೂರ್, ಸುಧಾ ಕಾರ್ಯಕ್ರಮ ಕುರಿತು ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಕೆ  .ಹುಸೇನ್ ಸಾಹೇಬ್ , ಎ. ಸೋಮನಗೌಡ, ಕರ್ನಾಟಕ ರಾಜ್ಯದ ಎಸ್ ಸಿ/ ಎಸ್‌ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್ .ಕೊಟ್ರಪ್ಪ, ಶಿಕ್ಷಕರಾದ ಬಿ. ಪ್ರಕಾಶ್, ಮರಿಯಪ್ಪ, ಮಹೇಶ್ ಮಡ್ಡಿ,  ಮಾರುತಿ, ಉಪಸ್ಥಿತರಿದ್ದರು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಿ.ಮಲ್ಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಊರಿನ ಮುಖಂಡರಾದ  ವಿ. ಪರಶುರಾಮ, ಭೂಮರೆಡ್ಡಿ ಹನುಮಂತಪ್ಪ, ಕೆ. ಪರಶುರಾಮ ಟಿ. ಪರಶುರಾಮ, ಬಿ .ನಾಗರಾಜ ,ದಾನಪ್ಪ, ಸುರೇಶ. ಕೃಷ್ಣಾಪುರ ಶಾಲೆಯ ಪ್ರಭಾರಿಮುಖ್ಯ  ಶಿಕ್ಷಕರಾದ  ಸಣ್ಣ ನಿಂಗಪ್ಪ, ಶಿಕ್ಷಕರಾದ ಗಂಗಾಧರ, ಗಣೇಶ,ಕೆ.ಸುರೇಶ  ಶಿಕ್ಷಕಿ ಮಧುರ,   ಉಪಸ್ಥಿತರಿದ್ದರು .ಶಿಕ್ಷಕ ದೇವರಾಜ್ ಎಲ್ಲರಿಗೂ ಸ್ವಾಗತಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಟಿ.ಸೋಮಶೇಖರ ಕಾರ್ಯಕ್ರಮವನ್ನು ನಿರೂಪಿಸಿದರು.