ಕರಾಟೆ ಚಾಂಪಿಯನ್‍ಶಿಪ್: ಕರಾಟೆ ಪಟುಗಳ ಸಾಧನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.10:ಗದಗದಲ್ಲಿ ನಡೆದ 2ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಜಯಪುರ ನಗರದ ಬೆಸ್ಟ್ ಮಾರ್ಷಲ್ ಆಟ್ರ್ಸ ಅಕಾಡೆಮಿಯ ಕರಾಟೆ ವಿದ್ಯಾರ್ಥಿಗಳು ಕಟಾ ಮತ್ತು ಕುಮಟೆ ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಗದಗ ನಗರದ ಕನಕಭವನದಲ್ಲಿ ಜು.6 ಮತ್ತು 7 ರÀಂದು ನಡೆದ 2ನೇ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಜಯಪುರ ನಗರದ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಕುಶಾಲ ಚವ್ಹಾಣ, ದ್ವಿತೀಯ ಸ್ಥಾನದಲ್ಲಿ ಶಾಶ್ವತ ಬಂಟನೂರ, ಪೃಥ್ವಿತಕ ತೆನಿಹಳ್ಳಿ, ಆರ್ಯನ್ ಮೊಹಿತೆ, ತೃತೀಯ ಸ್ಥಾನದಲ್ಲಿ ಸುನೀಲ ಪಾತ್ರೋಟ, ಸಮೃದ್ದ ಭಾವಿಕಟ್ಟಿ ಪದಕ ಪಡೆದಿದ್ದಾರೆ.
ಕರಾಟೆ ಪಟುಗಳ ಈ ಸಾಧನೆಗೆ ಬೆಸ್ಟ ಮಾರ್ಷಲ್ ಆಟ್ರ್ಸ್ ಅಕಾಡೆಮಿಯ ಮುಖ್ಯ ತರಬೇತುದಾರÀ ಜಗದೀಶ ಗುಳೇದಗುಡ್ಡ ಹರ್ಷ ವ್ಯಕ್ತಪಡಿಸಿದ್ದಾರೆ.