ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನ ಪುಲ್ ವೇಸ್ಟ್
ಕೋಲಾರ,ಜು.೧೦-ಕೋಲಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇವಲ ಪ್ರೋಟೊಕಾಲ್‌ಗೆ ಮಾತ್ರ ಬಳಿಸಲಾಗುತ್ತಿದೆ ಹೊರತಾಗಿ ಯಾವೂದೇ ರೀತಿ ಜಿಲ್ಲಾಡಳಿತ ಬದುಕಿದೆ ಎಂಬುದಕ್ಕೆ ಯಾವೂದೇ ಚಟುವಟಿಕೆಗಳಿಲ್ಲದೆ ನಿಷ್ಕ್ರೀಯೆ ಗೊಂಡಿದೆ.
ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ೬೫ ಕಿ.ಮಿ ಅಂತರದಲ್ಲಿದ್ದು ಏನೊಂದು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿಯನ್ನು ಕಾಣಲಾಗಲಿಲ್ಲ. ನಮ್ಮ ಕೋಲಾರ ನಮ್ಮ ಹೆಮ್ಮೆ ಎಂದು ಫಲಕಗಳಲ್ಲಿ ರಾರಾಜಿಸುತ್ತಿರುವುದು ಚೆನ್ನಾಗಿ ಕಾಣಿಸುತ್ತಿದೆ. ಅದರೆ ಹೆಮ್ಮೆಯೆಂಬ ಪದ ಮಾತ್ರ ಅಭಿವೃದ್ದಿ ವಿಚಾರಗಳಿಗೆ ತದ್ವಿರುದ್ದವಾಗಿದೆ.
ಕೋಲಾರ ಜಿಲ್ಲೆಗೆ ಇತ್ತೀಚೆಗೆ ಯಾವೂದೇ ಸರ್ಕಾರ ಬಂದರೂ ಸಹ ಹೊರಗಿನ ವ್ಯಕ್ತಿಗಳನ್ನೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುತ್ತಿರುವುದರಿಂದ ಕೋಲಾರದ ಅಭಿವೃದ್ದಿಗೆ ಇಚ್ಚಾ ಕೊರತೆಯೇ ಕಾರಣ ಎನ್ನಾಲಾಗಿದೆ. ಕೋಲಾರ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ೪ ಮಂದಿ ಹಿರಿಯ ೨-೩ ಬಾರಿ ಆಯ್ಕೆಯಾದ ಕಾಂಗ್ರೇಸ್ ಶಾಸಕರು ಇದ್ದರೂ ಸಹ ಹೊರಗಿನವರಿಗೆ ಮಣೆ ಹಾಕಿ ಮೂಲೆಗೆ ತಳ್ಳಿರುವುದರಲ್ಲಿ ಅರ್ಥವಿಲ್ಲ;
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನೆನಗುದಿಗೆ ಬಿದ್ದಿದೆ. ಯಾವೂದೇ ಸಭೆಗಳು ನಡೆಯುತ್ತಿಲ್ಲ. ಅಧಿಕಾರಿಗಳದೆ ಅಗಿದೆ ತೊಘಲಕ್ ದರ್ಬಾರ್‌ಗಳು, ಕೆ.ಡಿ.ಪಿ. ಸಭೆಗಳು ನಡೆಸುತ್ತಿಲ್ಲ ಏಕೆಂದರೆ ಮುಖ್ಯವಾಗಿ ಅಭಿವೃದ್ದಿ ಕಾರ್ಯಗಳಿಗೆ ಅನುದಾನದ ಕೊರತೆಯಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವರುಗಳು ತಲೆ ತಪ್ಪಿಸಿ ಕೊಂಡು ತಿರುಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷದ ಹೈಕಮಾಂಡ್ ಮುಖಂಡರು ಜಿಲ್ಲೆಗೆ ಭೇಟಿ ನೀಡಿದಾಗ ಅವರ ಜೊತೆಗೆ ಪೋಟೋ ಸೇಷನ್ ನೀಡಿರುವುದು ಬಿಟ್ಟರೆ ಉದ್ದಾರ ಮಾಡಿದ್ದೇನೂ ಇಲ್ಲ.
ರಾಜ್ಯದಲ್ಲಿನ ಅನುದಾನಗಳೆಲ್ಲಾ ಪಂಚ ಗ್ಯಾರೆಂಟಿ ಯೋಜನೆಗಳಿಗೆ ಸೊರಿಯುತ್ತಿದ್ದು ತೂತು ಮಡಿಕೆಯಂತೆ ಅಗಿದೆ ಹಾಗಾಗಿ ಸರ್ಕಾರವು ಅರ್ಥಿಕತೆ ಸಂಕಷ್ಟದಲ್ಲಿ ಸಿಲುಕಿ ಕೊಂಡಿದೆ. ಇದರ ಜೊತೆಗೆ ಹೊರ ರಾಜ್ಯಗಳ ಚುನಾವಣೆಗಳಿಗೆ ಪಕ್ಷವು ಅದೇಶಿಸುವಂತ ಹಣಕಾಸು ವ್ಯವಸ್ಥೆಗಳನ್ನು ಮಾಡಲು ಹೋಗಿ ತಗಲಾಕ್ಕಿ ಕೊಂಡು ಮುಖಕ್ಕೆ ಮಸಿ ಬಳಿಸಿ ಕೊಳ್ಳುವಂತಾಗಿದೆ.
ಈ ಎಲ್ಲಾ ಜಟಿಲ ಸಮಸ್ಯೆಗಳ ನಡುವೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಆಗಸ್ಟ್ ೧೫ ರಂದು ಫ್ಲಾಗ್ ಹಾಯಿಸ್ಟ್ ಮಾಡಿ ಸಿದ್ದಪಡೆಸಿರುವ ಪ್ರತಿಯನ್ನು ಬಾಯಿಪಾಠವನ್ನು ಒಪ್ಪಿಸಿ ತಲೆ ಮರೆಸಿ ಕೊಂಡರೆ ಮುಗಿತು ಮತ್ತೆ ನಿಮಗೆ ಕಾಣುವುದು ಜನವರಿ ೨೬ಕ್ಕೆ ಮಾತ್ರ ಹೀಗಿದೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಆಡಳಿತ ವೈಖರಿ.
ಸಂಬಂಧ ಪಟ್ಟ ನಗರಾಭಿವೃದ್ದಿ ಇಲಾಖೆಯಲ್ಲಿ ಸಚಿವ ಮಾತಿಗೆ ಕಿಮ್ಮತ್ತಿ ಬೆಲೆಯು ಇಲ್ಲ ಅವರು ಸೂಚಿಸುವ ಯಾವ ಕೆಲಸವೇ ಅಗಲಿ ಕಾಲಕಸದಂತೆ ನಿರ್ಲಕ್ಷಿಸುತ್ತಿರುವ ಪೌರಾಯುಕ್ತರ ಬಗ್ಗೆ ಸಚಿವರನ್ನೆ ಮಾದ್ಯಮದವರೂ ಕೇಳಿದರೆ ಅವರು ಸಿ.ಎಂ.ಕ್ಯಾಂಡೀಯೆಟ್ ಅಡ್ಜೆಸ್ಟ್ ಮಾಡಿ ಕೊಂಡು ಹೋಗಿ ಒಂದೆರಡು ದಿನ ಅಮೇಲೆ ಬದಲಾಯಿಸೋಣಾ ಎಂದು ಒಂದು ವರ್ಷ ಕಳೆದರೂ ಸಹ ಯಾವೂದೇ ಕ್ರಮ ಕೈಗೊಳ್ಳಲಾಗಲಿಲ್ಲ ಎಂದರೆ ಸಚಿವರಗಿಂತ ಪೌರಾಯುಕ್ತರು ಪವರ್‌ಪುಲ್ಲಾ ಎಂಬುವುದು ನಾಗರೀಕರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.